Categories
ಭರವಸೆಯ ಬೆಳಕು

ಕಿನ್ನಿಗೋಳಿ- 5 ಅಶಕ್ತ ಕುಟುಂಬಗಳಿಗೆ ಸಹಾಯಧನ ನೀಡಿ ಮಾನವೀಯತೆ ಮೆರೆದ ಸ್ಕಾರ್ಪಿಯನ್ ಏಳಿಂಜೆ.

“ಅಶಕ್ತರಿಗೆ ಸಹಾಯ ಮಾಡುವುದೇ ದೇವರ ಪೂಜೆ”-ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ
ಸ್ಕಾರ್ಪಿಯನ್ ಏಳಿಂಜೆ ತಂಡ ವಿಶ್ವಕರ್ಮ ಸಮಾಜದ ಇತಿಹಾಸದಲ್ಲೇ ಮೊದಲ ಬಾರಿಗೆ  ಕಿನ್ನಿಗೋಳಿಯಲ್ಲಿ ಆಯೋಜಿಸಿದ ಮಾದರಿ ಪಂದ್ಯಾಕೂಟ V.P.L-2022-ವಿಶ್ವಕರ್ಮ ಹ್ಯುಮಾನಿಟಿ ಕಪ್ ಪಂದ್ಯಾಟವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಜಗದ್ಗುರು
 ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿಯವರು
“ಸಂತೋಷದಲ್ಲಿರುವ ಜೊತೆ ಚಪ್ಪಾಳೆ ತಟ್ಟುವ ನೂರಾರು ಕೈಗಳಿಗಿಂತ,ದುಖದಲ್ಲಿರುವ ಜನರು ಕಣ್ಣೀರೊರಿಸುವ ಒಂದು ಬೆರಳು ಮಿಗಿಲು.ಅಶಕ್ತರಿಗೆ ಸಹಾಯ ಮಾಡುವುದೇ ದೇವರ ಸೇವೆ.ಈ ನಿಟ್ಟಿನಲ್ಲಿ ಸ್ಕಾರ್ಪಿಯನ್ ಏಳಿಂಜೆ ತಂಡದ ಸಾಧನೆ ಶ್ಲಾಘನೀಯ”
ಎಂದರು.
ಈ ಸಂದರ್ಭ ಉದಯ್ ಆಚಾರ್ಯ ಅಧ್ಯಕ್ಷರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಕಿನ್ನಿಗೋಳಿ,ಪ್ರಥ್ವಿ ಆಚಾರ್ಯ ಅನುಗ್ರಹ ಜ್ಯುವೆಲ್ಲರ್ಸ್ ಕಿನ್ನಿಗೋಳಿ,
ವಾದಿರಾಜ ಆಚಾರ್ಯ ಏಳಿಂಜೆ,ಕೋಟ ರಾಮಕೃಷ್ಣ ಆಚಾರ್ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್,ಪ್ರೇಮಾನಂದ ಆಚಾರ್ಯ ಸುರತ್ಕಲ್,ಶ್ರೀಕಾಂತ್ ಶೆಟ್ಟಿ ಐಕಳ,ಪ್ರಶಾಂತ್ ಆಚಾರ್ಯ ಅರಂತಬೆಟ್ಟು ಮುಂಡ್ಕೂರು,ರೋಶನ್ ಬೆಳ್ಮಣ್ ಹ್ಯುಮಾನಿಟಿ ಟ್ರಸ್ಟ್ ಸಂಸ್ಥಾಪಕರು,ವಿಶ್ವಕರ್ಮ
ಮಹಿಳಾ ಬಳಗ ಕಿನ್ನಿಗೋಳಿ ಮತ್ತು ಹಳೆಯಂಗಡಿ ಸರ್ವ ಸದಸ್ಯೆಯರು,
ಆಯೋಜಕರಾದ ಶಿವರಾಮ ಆಚಾರ್ಯ,ಭಾಸ್ಕರ್ ಆಚಾರ್ಯ ಇನ್ನಿತರರು ಉಪಸ್ಥಿತರಿದ್ದರು.
12 ಫ್ರಾಂಚೈಸಿಗಳು ಭಾಗವಹಿಸಿದ ಈ ಟೂರ್ನಮೆಂಟ್ ನ ಫೈನಲ್ ನಲ್ಲಿ ಪುನೀತ್ ಇಲೆವೆನ್,ಬಾಲಾಜಿ ಬುಲ್ಸ್ ತಂಡವನ್ನು ಮಣಿಸಿ,ವಿಶ್ವಕರ್ಮ ಪ್ರೀಮಿಯರ್‌ ಲೀಗ್ ಪ್ರಶಸ್ತಿ ಸಹಿತ 50 ಸಾವಿರ ರೂ ನಗದು ಬಹುಮಾನ ಮತ್ತು ದ್ವಿತೀಯ ಸ್ಥಾನಿ ಬಾಲಾಜಿ ಬುಲ್ಸ್ 30,000ರೂ ನಗದು ಸಹಿತ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡರು.
ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್‌ ಮತ್ತು ಫೈನಲ್ ಪಂದ್ಯಶ್ರೇಷ್ಟ ಗೌರೀಶ್ ಆಚಾರ್ಯ, ಬೆಸ್ಟ್ ಬೌಲರ್ ಪ್ರಸನ್ನ ಆಚಾರ್ಯ, ಬೆಸ್ಟ್ ಕೀಪರ್ ಶ್ರೇಯಸ್ ಆಚಾರ್ಯ ಮತ್ತು ಸರಣಿಶ್ರೇಷ್ಟ ಪ್ರಶಸ್ತಿ ಪ್ರಸಿದ್ಧ ಆಚಾರ್ಯ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಪುರೋಹಿತ್ ಶಶಿಧರ ಆಚಾರ್ಯ,
ವಾದಿರಾಜ್ ಆಚಾರ್ಯ ಏಳಿಂಜೆ,
ಜಯರಾಮ್ ಆಚಾರ್ ಕುಳಾಯಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುರತ್ಕಲ್ ಪ್ರಖಂಡ ಕಾರ್ಯದರ್ಶಿ,ಕೃಷ್ಣ ಆಚಾರ್ಯ ಸಹಾಯಕ ಉಪನಿರೀಕ್ಷಕರು ಶಿರ್ವ,ಕೋಟ ರಾಮಕೃಷ್ಣ ಆಚಾರ್ ಸ್ಪೋರ್ಟ್ಸ್ ಕನ್ನಡ,ಕಿಶೋರ್ ಆಚಾರ್ಯ ಉಡುಪಿ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ,ಪುರೋಹಿತ್ ಶರತ್ ಶರ್ಮಾ ಪಡುಬಿದ್ರಿ,ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ‌ ಸಂಸ್ಥಾಪಕರು ಅರ್ಜುನ್ ಭಂಡಾರ್ಕರ್,ಲತಾ ಜನಾರ್ಧನ ಆಚಾರ್ಯ ಏಳಿಂಜೆ ಟ್ರಸ್ಟಿ ಭುವನ ಜ್ಯೋತಿ ರೆಸಿಡೆನ್ಷಿಯಲ್ ಸ್ಕೂಲ್,ಟೂರ್ನಮೆಂಟ್ ನ ಪ್ರಮುಖ ಆಯೋಜಕರಾದ
ಶಿವರಾಮ ಆಚಾರ್ಯ ಮತ್ತು ಭಾಸ್ಕರ ಆಚಾರ್ಯ ಕುಟುಂಬಿಕರು ಉಪಸ್ಥಿತರಿದ್ದರು.
ಈ ಸಂದರ್ಭ ಮಾಜಿ ಭಾರತೀಯ ಸೈನಿಕರು ಪ್ರೇಮಾನಂದ ಆಚಾರ್ಯ ಸುರತ್ಕಲ್,ವಿಜೇಂದ್ರ ಆಚಾರ್ಯ ಹೆಬ್ರಿ ಸಮಾಜಸೇವಕರು,ಕಟಪಾಡಿ ಪುರೋಹಿತ್ ಶ್ರೀ ಶಶಿಧರ ಆಚಾರ್ಯ,ಭುಜಂಗ ಆಚಾರ್ಯ ಕಟಪಾಡಿ‌ ಧಾರ್ಮಿಕ‌ ಚಿಂತಕರು,
ಭಾಸ್ಕರ ಆಚಾರ್ಯ ಉಡುಪಿ ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರರು ಹಾಗೂ ಕೋಟ ರಾಮಕೃಷ್ಣ ಆಚಾರ್ ಇವರನ್ನು ಸನ್ಮಾನಿಸಲಾಯಿತು.ರಾಘವೇಂದ್ರ ಆಚಾರ್ ಮಟಪಾಡಿ ಕಾರ್ಯಕ್ರಮ ನಿರೂಪಣೆ ನಡೆಸಿದರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಪಂದ್ಯಾಟದಲ್ಲಿ ಉಳಿದ ಅಷ್ಟೂ ಹಣವನ್ನು ವಿಶ್ವಕರ್ಮ ಸಮಾಜದ 5 ಬಡಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುವುದರ ಮೂಲಕ,ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

four × 3 =