ಎಸ್.ಬಿ.ಫ್ರೆಂಡ್ಸ್ ಸೂರ್ಗೋಳಿ ಇವರ ವತಿಯಿಂದ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನ್ವೇಷಣೆಯ ಸದುದ್ದೇಶದಿಂದ ಅಕ್ಟೋಬರ್ 3 ಮತ್ತು 4 ರಂದು ಸೂರ್ಗೋಳಿಯಲ್ಲಿ 60 ಗಜಗಳ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಸತತ ಮೂರು ಬಾರಿ ವಾಲಿಬಾಲ್ ಪಂದ್ಯಾವಳಿ ಯಶಸ್ವಿಯಾಗಿ ಸಂಘಟಿಸಿದ್ದ ಈ ಸಂಸ್ಥೆ ಈ ಬಾರಿ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದಾರೆ.
ಎಸ್.ಬಿ.ಫ್ರೆಂಡ್ಸ್ ನ ಸಕ್ರಿಯ ಸದಸ್ಯರಾದ ಮುಖೇಶ್ ನಾಯರಿ,ಕಿರಣ್ ಶೆಟ್ಟಿ, ದಯಾನಂದ ಶೆಟ್ಟಿ, ಸುದೀಪ್ ಶೆಟ್ಟಿ,ದಿನಕರ ನಾಯಕ್,ಅರುಣ್ ನಾಯಕ್,ದೇವದಾಸ್ ನಾಯಕ್,ಪ್ರಶಾಂತ್ ನಾಯಕ್,ಸುರೇಶ್ ನಾಯಕ್,ಸುರಕ್ಷಾ ಶೆಟ್ಟಿ, ಸೂರಜ್ ಶೆಟ್ಟಿ,ಮಂದಾರ ಇವರೆಲ್ಲರ ಸಂಯೋಜನೆಯಲ್ಲಿ ಈ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಪ್ರಶಸ್ತಿ ವಿಜೇತ ತಂಡ 15,000 ನಗದು ಹಾಗೂ ರನ್ನರ್ ಅಪ್ 8000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.