ಮಾರುತಿ ಕ್ರಿಕೆಟರ್ಸ್ ಆಶ್ರಯದಲ್ಲಿ
ಬೆಂಗಳೂರಿನ ಕೆ.ಆರ್.ಪುರಂ ನ ಸರಕಾರಿ ಕಾಲೇಜು ಅಂಗಣದಲ್ಲಿ ಜನವರಿ 18 ಮತ್ತು 19 ರಂದು
2 ದಿನಗಳ ಹಗಲಿನ ರಾಜ್ಯ ಮಟ್ಟದ ಪಂದ್ಯಾವಳಿ “ಸಂಕ್ರಾಂತಿ ಕಪ್-2020” ಆಯೋಜಿಸಲಾಗಿದೆ.
ರಾಜ್ಯದ ಬಲಿಷ್ಠ 20 ತಂಡಗಳು ಭಾಗವಹಿಸಲಿದ್ದು,ವಿಜೇತ ತಂಡ
50 ಸಾವಿರ,ರನ್ನರ್ಸ್ 25 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಪಂದ್ಯಾವಳಿಗೆ ಮುಖ್ಯ ಅತಿಥಿಗಳಾಗಿ
ಕೆ.ಆರ್.ಪುರಂ ನ ಶಾಸಕ ಬಿ.ಎ.ಬಸವರಾಜ್,ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್,
ವಿನಾಯಕ ಜ್ಯುವೆಲ್ಲರಿ ಮತ್ತು ಸಿಲ್ಕ್ ನ ಆರ್.ಚಿದಂಬರ್,55 ನೇ ವಾರ್ಡ್ ನ ಕಾರ್ಪೋರೇಟರ್ ಶ್ರೀಕಾಂತ್ ಗೌಡ,53 ನೇ ವಾರ್ಡ್ ನ ಕಾರ್ಪೋರೇಟರ್ ಜಯಪ್ರಕಾಶ್,ಬಿ.ಜೆ.ಪಿ ಯುವ ನಾಯಕ ಚೆನ್ನಕೇಶವ,ಕೆ.ಆರ್.ಪುರಂ ನ ಪೋಲಿಸ್ ವೃತ್ತ ನಿರೀಕ್ಷಕ ಅಂಬರೀಶ್ ಹಾಗೂ ಬಿ.ಜೆ.ಪಿ ಯುವ ನಾಯಕ ಅರುಣ್ ಯಾದವ್ ಭಾಗವಹಿಸಲಿದ್ದಾರೆ.
ಪಂದ್ಯಾವಳಿಯ ನೇರ ಪ್ರಸಾರ ಕ್ರಿಕ್ ಸೇ ಬಿತ್ತರಿಸಲಿದೆ.
ಆರ್.ಕೆ.ಆಚಾರ್ಯ ಕೋಟ…