ಸಕಲೇಶಪುರದ ಚತುರ ಸಂಘಟಕರಾದ ಹೇಮಂತ್ ಗೌಡ ಇವರ ದಕ್ಷ ಸಾರಥ್ಯದಲ್ಲಿ,ಎಸ್.ಸಿ.ಎಲ್ ಗ್ರೂಪ್ಸ್ ವತಿಯಿಂದ 3 ನೇ ವರ್ಷದ ಸಕಲೇಶಪುರ ಪ್ರೀಮಿಯರ್ ಲೀಗ್-ಸ್ನೇಹಜೀವಿ ಕಪ್-2022 ಆಯೋಜಿಸಲಾಗಿದೆ.

ಮಾರ್ಚ್ ದಿನಾಂಕ 18,19 ಮತ್ತು 20 ರಂದು ಸಕಲೇಶಪುರದ ಸುಭಾಷ್ ಮೈದಾನದಲ್ಲಿ ಈ ಪಂದ್ಯಾವಳಿ ನಡೆಯಲಿದೆ.ಹಾಸನ,ಅರಸೀಕೆರೆ,
ಬೇಲೂರು,ಹೊಳೆನರಸೀಪುರ,ಚೆನ್ನಪಟ್ಟಣ, ಮಡಿಕೇರಿ,
ಹುಣಸೂರು,ಮುಳಬಾಗಿಲು ಪರಿಸರದ 4 ಐಕಾನ್ ಆಟಗಾರರನ್ನೊಳಗೊಂಡ 8 ಫ್ರಾಂಚೈಸಿಗಳು ಪ್ರತಿಷ್ಠಿತ ಪ್ರಶಸ್ತಿಗಾಗಿ ಕಾದಾಡಲಿದೆ.




ಪ್ರಥಮ ಬಹುಮಾನ 1,11,111,ದ್ವಿತೀಯ-55,555 ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿಗಳನ್ನು ಸಮಾಜಸೇವಕಿ ಡಾ.ಪುಷ್ಪಾ ಅಮರ್ ನಾಥ್ ಪ್ರಾಯೋಜಕತ್ವದಲ್ಲಿ ನೀಡಲಿದ್ದಾರೆ.ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ವಿಶೇಷ ಬಹುಮಾನ ನೀಡಲಾಗುತ್ತಿದೆ.


*ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿದೆ*
1)ಚಾರುಣ್ಯ ಕ್ರಿಕೆಟರ್ಸ್ ಎಸ್.ಕೆ.ಪಿ
2)ಆಧಿ ಕ್ರಿಕೆಟರ್ಸ್
3)ದೇವಿರಮ್ಮ ಡೇರ್ ಡೆವಿಲ್ಸ್
4)ಸ್ಟಾರ್ 46
5)ಎ.ಕೆ.ಸಾಗರ್
6)ಅಷ್ಕರ್ ವಾರಿಯರ್ಸ್
7)ಹೇಮಾವತಿ ಸೂಪರ್ ಸ್ಟಾರ್ಸ್
8)ಮ್ಯಾನ್ ಆಫ್ ದಿ ಸ್ಕಾಲರ್ಸ್ ಹಾಸನ


M.Sports ಯೂ ಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾವಳಿಯ ನೇರ ಪ್ರಸಾರ ಬಿತ್ತರಗೊಳ್ಳಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.