ಶಿವಮೊಗ್ಗ-ಮೂರೂವರೆ ದಶಕಗಳ ಇತಿಹಾಸದ ಶಿವಮೊಗ್ಗ ಪರಿಸರದ ಹಿರಿಯ ಸಂಸ್ಥೆ ಸಹನಾ ಕ್ರಿಕೆಟ್ ಕ್ಲಬ್ ಇವರ ಆಶ್ರಯದಲ್ಲಿ 2 ನೇ ಬಾರಿಗೆ ರಾಜ್ಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ “ಸಹನಾ ಟ್ರೋಫಿ-2023” ಆಯೋಜಿಸಲಾಗಿದೆ.
ಮಾರ್ಚ್ ದಿನಾಂಕ 3,4 ಮತ್ತು 5 ರಂದು ಗೋಪಾಳ ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾಟದಲ್ಲಿ 8 ರಾಜ್ಯ ಮಟ್ಟದ ತಂಡಗಳಿಗೆ ಹಾಗೂ ಹರಾಜು ಪ್ರಕ್ರಿಯೆ ಮೂಲಕ ಆಯ್ಕೆಯಾದ ಆಟಗಾರರಿಂದ ಕೂಡಿದ ಮಲೆನಾಡು ಭಾಗದ 8 ತಂಡಗಳು ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಥಮ ಬಹುಮಾನ 2 ಲಕ್ಷ,ದ್ವಿತೀಯ ಬಹುಮಾನ 1 ಲಕ್ಷ ನಗದು ಬಹುಮಾನ ಸಹಿತ ಆಕರ್ಷಕ ಪಾರಿತೋಷಕಗಳನ್ನು ನೀಡಲಾಗುತ್ತಿದೆ ಹಾಗೂ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನಿರ್ವಹಿಸಿದ ಆಟಗಾರರಿಗೆ ವಿಶೇಷ ಉಡುಗೊರೆ ನೀಡಲಾಗುತ್ತಿದೆ.
ಹೆಚ್ಚಿನ ವಿವರಗಳಿಗಾಗಿ ವೆಂಕಟೇಶ್-9844158684, ಗಿರೀಶ್-8310685126,ರಾಘು(ಟೊಪ್ಪಿ) -997215
8988 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.
M ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರಪ್ರಸಾರ ಬಿತ್ತರಗೊಳ್ಳಲಿದೆ…