ಸಾಗರ ಪರಿಸರದ ಯುವ ಕ್ರಿಕೆಟಿಗರಾದ ಉದಯ್ ಮೊಗವೀರ,ಅಕ್ಷಯ್,ಮಹೇಶ್ ಆಚಾರ್ಯ,ರಾಘು ಮೊಗವೀರ ಇವರೆಲ್ಲರ ಸಾರಥ್ಯದಲ್ಲಿ ಗೋಪಾಲಗೌಡ ಕ್ರೀಡಾಂಗಣದಲ್ಲಿಜನವರಿ 29,30 ಮತ್ತು 31 ರಂದು ಕರಾವಳಿ ಪ್ರೀಮಿಯರ್ ಲೀಗ್-2021(ಕರಾವಳಿ ಟ್ರೋಫಿ)ಪಂದ್ಯಾವಳಿ ಆಯೋಜಿಸಲಾಗಿದೆ.
ಸಾಗರದಲ್ಲೇ ಪ್ರಪ್ರಥಮ ಬಾರಿಗೆ ವಿಶಿಷ್ಟ ಮಾದರಿಯ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಲಾಗಿದ್ದು
ವಿಶೇಷವಾಗಿ ಕರಾವಳಿ ಪರಿಸರದ ಆಟಗಾರರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ.ಈ ಪಂದ್ಯಾಕೂಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 1,00,001 ನಗದು,ದ್ವಿತೀಯ ಸ್ಥಾನಿ 50,001 ಸಹಿತ ಆಕರ್ಷಕ ಪಾರಿತೋಷಕಗಳನ್ನು ನೀಡಲಾಗುತ್ತಿದೆ.