
ನವೆಂಬರ್ 3,11 ರ ರವಿವಾರದಂದು ಇಲೆವೆನ್ಸ್ ಬೆಳ್ಮಣ್ ತಂಡ ಬೆಳ್ಮಣ್ ನ ಕಾಲೇಜ್ ಅಂಗಣದಲ್ಲಿ ಹಗಲಿನ ಪಂದ್ಯಾಕೂಟ ಆಯೋಜಿಸಿತ್ತು.

ನವೆಂಬರ್ 3 ರಂದು ಆಯಾಯ ಸಮುದಾಯ ಬಾಂಧವರ ತಂಡದ ನಡುವಿನ ಪಂದ್ಯದಲ್ಲಿ ಪ್ರಕೃತಿ ಫೈಟರ್ಸ್ ಮಲ್ಪೆ ಫೈನಲ್ ಪ್ರವೇಶಿಸಿದರೆ,ನವೆಂಬರ್ 10 ರಂದು ನಡೆದ ಪಂದ್ಯದಲ್ಲಿ ಎಸ್.ಎಸ್.ಕ್ಯೂ ಮಲ್ಪೆ ತಂಡ ಫೈನಲ್ ಗೆ ತೇರ್ಗಡೆಗೊಂಡಿತ್ತು.


ಫೈನಲ್ ಹೋರಾಟದಲ್ಲಿ ಎಸ್.ಎಸ್.ಕ್ಯೂ ಫೈಟರ್ಸ್ ತಂಡ ಪ್ರಕೃತಿ ಫೈಟರ್ಸ್ ನ್ನು ಸೋಲಿಸಿ
ಪ್ರಥಮ ಪ್ರಶಸ್ತಿಯಾಗಿ
25,000 ನಗದು,ದ್ವಿತೀಯ ಸ್ಥಾನಿ ತಂಡ 15,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಎಸ್.ಎಸ್.ಕ್ಯೂ ತಂಡದ ಪ್ರಕಾಶ್ ಮುನ್ನಾ ಪಡೆದುಕೊಂಡರೆ,ಬೆಸ್ಟ್ ಬ್ಯಾಟ್ಸ್‌ಮನ್ ಫ್ರೆಂಡ್ಸ್ ಪಂಜಿನಡ್ಕ ತಂಡದ ಯಶವಂತ್ ದೇವಾಡಿಗ,
ಬೆಸ್ಟ್ ಬೌಲರ್ ಪ್ರಕೃತಿ ಫೈಟರ್ಸ್ ನ ರಾಘು ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ರಾಜಾ ಸಾಲಿಗ್ರಾಮ ಪಡೆದುಕೊಂಡರು.
ಆರ್.ಕೆ.ಆಚಾರ್ಯ ಕೋಟ.







