“ದೇಶದ ಭವಿಷ್ಯ ಯುವ ಸಮಾಜದ ಕೈಯ್ಯಲ್ಲಿದೆ.ಸೃಷ್ಟಿ ಲೋಕೇಶ್ ರವರು ಯುವ ಪ್ರತಿಭೆಗಳಿಗೆ ಕ್ರೀಡಾಕೂಟವನ್ನು ಸಂಘಟಿಸಿ,ಗ್ರಾಮಾಂತರ ಪ್ರತಿಭೆಗಳಿಗೆ ಉತ್ತಮ ಭವಿಷ್ಯ ನೀಡುವಲ್ಲಿ ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ.ಮುಂದಿನ ದಿನಗಳಲ್ಲಿ ದಾಸನಪುರ ಹೋಬಳಿಯಲ್ಲಿ ಸರಕಾರಿ ಜಮೀನುಗಳಲ್ಲಿ 2-3 ಎಕರೆ ಜಾಗ ಸರಕಾರಿ ಮೈದಾನ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದ್ದೇನೆ” ಎಂದು ಯಲಹಂಕ ಶಾಸಕರು,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್ ಹೇಳಿದರು.
ಇವರು ಸೃಷ್ಟಿ ಲೋಕೇಶ್ ರವರ ಸಾರಥ್ಯದಲ್ಲಿ ಬೆಂಗಳೂರಿನ ಮಾದವಾರ ನೈಸ್ ಗ್ರೌಂಡ್ ನಲ್ಲಿ ನಡೆಯುತ್ತಿರುವ 1 ವಾರಗಳ ಕ್ರಿಕೆಟ್ ಹಬ್ಬ “ಚಾಂಪಿಯನ್ಸ್ ಲೀಗ್-ಕೆ.ಟಿ.ಪಿ.ಎಲ್-2022” ಪಂದ್ಯಾಟವನ್ನು ದೀಪ ಬೆಳಗಿಸಿ,ಶಾಂತಿ-ಸಾಮರಸ್ಯದ ಸಂಕೇತ ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಟೂರ್ನಮೆಂಟ್ ನ ಸಂಘಟಕರಾದ ಸೃಷ್ಟಿ ಲೋಕೇಶ್, ಯಲಹಂಕ ಗ್ರಾಮಾಂತರ ಮಂಡಳಿ ಅಧ್ಯಕ್ಷ ಹನುಮಯ್ಯ,ಉದ್ಯಮಿ ಅಭಿನಾಷ್ ಗಣೇಶ್,
ಅಡಕಮಾರನಹಳ್ಳಿ ಯುವ ಮುಖಂಡರು ಶಿವಕುಮಾರ್,ಉದ್ಧಂಡಯ್ಯ ಮಾಚಾವಳಿ,ಮಾದನನಾಯಕನ ಹಳ್ಳಿ ವೃತ್ತ ನಿರೀಕ್ಷಕ ಮಂಜುನಾಥ್,ಶ್ರೀನಿವಾಸ್ ಮೂರ್ತಿ ಸ್ಟೋವ್ನೆಸ್ಟ್,ಯುವ ಮುಖಂಡ ಆಕಾಶ್ ಗೌಡ,ಚಿಕ್ಕಣ್ಣ,ಸಿದ್ಧರಾಜು
ಮತ್ತು 10 ತಂಡಗಳ ಮಾಲೀಕರು ಉಪಸ್ಥಿತರಿದ್ದರು.
ವಿಶೇಷ ಆಕರ್ಷಣೆ ರೂಪದಲ್ಲಿ ಪ್ರಸಿದ್ಧ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಿರ್ದೇಶಕ ಮತ್ತು ಹಾಸ್ಯನಟರು ಸುಜಯ್ ಶಾಸ್ತ್ರಿ ಪಂದ್ಯಾವಳಿಯ ಮೆರುಗು ಹೆಚ್ಚಿಸಿದರು.
ಉದ್ಘಾಟನಾ ಪಂದ್ಯದಲ್ಲಿ ಶಾರದಾಂಬಾ ಕ್ರಿಕೆಟರ್ಸ್,ಎರಡನೇ ಪಂದ್ಯದಲ್ಲಿ ಮೆಮ್ಮಿ ಸ್ಪೋರ್ಟ್ಸ್ ಕ್ಲಬ್,ಮೂರನೇ ಪಂದ್ಯದಲ್ಲಿ ಕ್ರಿಕೆಟ್ ನಕ್ಷತ್ರ,ಅಂತಿಮ ಪಂದ್ಯದಲ್ಲಿ ಜಿ.ಜೆ ಆರ್ಮಿ ಗೆಲುವು ಸಾಧಿಸಿದರು.
ವರ್ಣರಂಜಿತ ಉದ್ಘಾಟನಾ ಕಾರ್ಯಕ್ರಮವನ್ನು ಹಿರಿಯ ವೀಕ್ಷಕ ವಿವರಣೆಕಾರರಾದ ಶಿವನಾರಾಯಣ್ ಐತಾಳ್ ಕೋಟ ನಿರೂಪಿಸಿದರು…