ವಿಶಾಕಪಟ್ಟಣದಲ್ಲಿ ನಿನ್ನೆ ನಡೆದ 2 ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ವಿರುದ್ದ 107 ರನ್ ಗಳ ಬೃಹತ್ ಜಯ ಸಾಧಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ವಿಂಡೀಸ್ ಈ ಒಂದು ತಪ್ಪು ನಿರ್ಣಯದಿಂದ ದುಬಾರಿ ಬೆಲೆ ತೆರಬೇಕಾಯಿತು. ಮೊದಲ ಇನ್ನಿಂಗ್ಸ್ ಅನ್ನು ಸರಿಯಾಗಿಯೇ ಉಪಯೋಗಿಸಿಕೊಂಡ ಅತಿಥಿಯೇಯರು ರೋಹಿತ್ ಮತ್ತು ರಾಹುಲ್ ಭರ್ಜರಿ ಶತಕದ ನೆರವಿನಿಂದ ಭಾರತ 50 ಓವರ್ ಗಳಲ್ಲಿ 5 ವಿಕೆಟ್ ಗೆ 387 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಆರಂಭಿಕ ದಾಂಡಿಗರದ ರೋಹಿತ್ ಮತ್ತು ರಾಹುಲ್ ಮೊದಲ ವಿಕೆಟ್ ಜೊತಯಾಟದಲ್ಲಿ 227 ರನ್ ಗಳ ಬೃಹತ್ ಮೊತ್ತ ಪೇರಿಸಿದರು. ರೋಹಿತ್ 159(138) ಮತ್ತು 104(102) ರನ್ ಗಳಿಸಿದರು. ತದನಂತರ ಬಂದ ಕೊಹ್ಲಿ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು. ತದನಂತರ ಬಂದ ಪಂತ್ ಮತ್ತು ಅಯ್ಯರ್ ಬಿರುಸಿನ ಆಟಕ್ಕೆ ಒಟ್ಟುಕೊಟ್ಟು ತಂಡವನ್ನು 350 ರ ಗಡಿ ದಾಟಿಸಿದರು. ಪಂತ್ 39(16) ಮತ್ತು ಅಯ್ಯರ್ 53(32) ಬಿರುಸಿನ ಆಟ ಪ್ರದರ್ಶಿಸಿದರು. ಅಂತಿಮವಾಗಿ ಭಾರತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 387 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು.ವಿಂಡೀಸ್ ಪರ ಕಾಟ್ರೆಲ್ 2 ವಿಕೆಟ್ ಪಡೆದರೆ ಪೊಲಾರ್ಡ್ ಮತ್ತು ಜೋಸೆಫ್ ತಲಾ ಒಂದು ವಿಕೆಟ್ ಕಬಳಿಸಿದರು.
ಬೃಹತ್ ಮೊತ್ತ ಬೆನ್ನತ್ತಲು ಇನ್ನಿಂಗ್ಸ್ ಆರಂಭಿಸಿದ ಪ್ರವಾಸಿಗರು ಆರಂಭದಲ್ಲಿ ಉತ್ತಮ ಮೊತ್ತ ಕಲೆಹಾಕಿದರು ಮೊದಲ ವಿಕೆಟ್ ಜೊತೆಯಾಟದಲ್ಲಿ 61 ರನ್ ಕಲೆ ಹಾಕಿದರು. ಉತ್ತಮವಾಗಿ ಆಡುತ್ತಿದ್ದ ಲಿವಿಸ್ 31 ರನ್ ಗಳಿಸಿ ಶಾರ್ದೂಲ್ ಠಾಕೂರ್ ಗೆ ವಿಕೆಟ್ ಒಪ್ಪಪಿಸಿದರು.ತದನಂತರ ಬಂದ ಮಧ್ಯಮ ಕ್ರಮಾಂಕದ ಆಟಗಾರರು ಯಾರೂ ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಒಂದೆಡೆಯಾಗಿ ಹೋರಾಟ ಮಾಡುತ್ತಿದ್ದ
ಹೋಪ್ ಗೆ ಯಾರೂ ಕೂಡ ಸರಿಯಾದ ಜೊತೆಯಾಟ ನೀಡಲಿಲ್ಲ. ತದನಂತರ ಕ್ರೀಸ್ ಗೆ ಆಗಮಿಸಿದ ಪುರಾನ್ ಹೋಪ್ ಗೆ ಉತ್ತಮ ಸಾತ್ ಕೊಟ್ಟು ತಂಡವನ್ನು 200 ರ ಗಡಿ ತಲುಪಿಸುವಲ್ಲಿ ಯಶಸ್ವಿಯಾದರು.ನಂತರ ಬಂದ ಕಿಮೋ ಪೌಲ್ ಬಿರುಸಿನ 46 ರನ್ ಕಲೆಹಾಕಿ ತಂಡವನ್ನು 250 ರ ಗಡಿ ದಾಟಿಸಿ ಗೌರವ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು.ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ 43.3 ಓವರ್ ಗಳಲ್ಲಿ 280 ರನ್ ಗಳಲ್ಲಿ ಸರ್ವಪತನ ಕಂಡಿತು. ಭಾರತ ಪರ ಕುಲದೀಪ್ ಮತ್ತು ಶಮಿ ತಲಾ 3 ವಿಕೆಟ್ ಪಡೆದು ಮಿಂಚಿದರು. ಹಾಗೆ ರವೀಂದ್ರ ಜಡೇಜಾ 2 ಮತ್ತು ಠಾಕೂರ್ 1 ವಿಕೆಟ್ ಪಡೆದು ವಿಂಡೀಸ್ ಬ್ಯಾಟ್ಸ್ ಮನ್ ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.
ಕುಲದೀಪ್ ಯಾದವ್ ಹ್ಯಾಟ್ರಿಕ್:
33 ನೇ ಓವರ್ ನಲ್ಲಿ ದಾಳಿಗಿಳಿದ ಯಾದವ್ 4ನೇ ಎಸೆತದಲ್ಲಿ ಹೋಪ್ ವಿಕೆಟ್ ಪಡೆದರೆ, 5 ನೇ ಎಸೆತದಲ್ಲಿ ಹೋಲ್ಡರ್ ವಿಕೆಟ್ ಮತ್ತು ಅಂತಿಮವಾಗಿ 6 ನೇ ಎಸೆತದಲ್ಲಿ ಜೋಸೆಫ್ ವಿಕೆಟ್ ಪಡೆಯುವುದರೊಂದಿಗೆ ಕುಲದೀಪ್ ಯಾದವ್ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 2 ನೇ ಭಾರಿ ಹ್ಯಾಟ್ರಿಕ್ ಪಡೆದುಕೊಂಡರು.
ಸರಣಿಯಲ್ಲಿ 1-1 ಸಮಬಲ ಸಾಧಿಸಿದ ಉಭಯ ತಂಡಗಳು ಭಾನುವಾರದ 3 ನೇ ಪಂದ್ಯದ ಮೇಲೆ ಕಣ್ಣಿಟ್ಟಿದ್ದು ಸರಣಿ ಗೆಲ್ಲಲ್ಲು ಕಾತರದಲ್ಲಿದ್ದಾರೆ.
– ಪ್ರೀತಮ್ ಹೆಬ್ಬಾರ್