ಕ್ರೀಡಾ ಸಂಸ್ಥೆಯೊಂದು ತನ್ನ ಎಲ್ಲಾ ಸದಸ್ಯರ ಸಭೆ ಕರೆದು ನಾಯಕನನ್ನು ಆಯ್ಕೆ ಮಾಡಿರುವ ಅತಿ ವಿರಳ ಪ್ರಕರಣಗಳಲ್ಲಿ ಇದು ಒಂದಾಗಿದ್ದು, ಕಲೆ,ಕ್ರೀಡೆ,ಸಾಹಿತ್ಯ,ಪತ್ರಿಕೋದ್ಯಮ ಹೀಗೆ ಹಲವು ಆಯಾಮಗಳಲ್ಲಿ ಗುರುತಿಸಿಕೊಂಡಿರುವ ರಾಕ್ ಯೂತ್ ಕ್ಲಬ್ 2020-21 ನೇ ಸಾಲಿನ ನಾಯಕರನ್ನಾಗಿ ಪ್ರದೀಪ್ ಕುಮಾರ್ ಶಂಕು,ಉಪನಾಯಕನಾಗಿ ಭರತ್ ಹಾಗೂ ಫೀಲ್ಡ್ ಕ್ಯಾಪ್ಟನ್ ಆಗಿ ಅಜೇಯ್ ಆಯ್ಕೆಯಾಗಿದ್ದಾರೆ.
ತುಮಕೂರಿನ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ರಾಕ್ ಯೂತ್ ಕ್ಲಬ್ ನ ಹಾಲಿ ಸಂಯೋಜಕರು,ಜಿಲ್ಲಾ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು(ರಾಕ್ ರಾಜು),ಪ್ರಧಾನ ಕಾರ್ಯದರ್ಶಿ ರಾಕ್ ಲೈನ್ ರವಿಕುಮಾರ್,ಕ್ಲಬ್ ನ ಉಪಾಧ್ಯಕ್ಷ ಬೆಳ್ಳಿ ಲೋಕೇಶ್ ಸೇರಿದಂತೆ ಹಲವಾರು ಹಿರಿಯ ಕ್ರೀಡಾಪಟುಗಳು ಭಾಗವಹಿಸಿದ್ದರು.
ಈ ಸಂದರ್ಭ ಮಾತನಾಡಿದ ರಾಕ್ ರಾಜು ರವರು,1989 ರಲ್ಲಿ ಆರಂಭವಾದ ಕ್ರೀಡಾ ಕ್ಲಬ್ ಹಲವಾರು ಎಡರು ತೊಡರುಗಳ ನಡುವೆ ಒಂದು ದಿನವೂ ಅಭ್ಯಾಸ ನಿಲ್ಲಿಸದೆ,ಇದುವರೆಗೂ ನಿರಂತರವಾಗಿ ಮುನ್ನಡೆಸಿಕೊಂಡು ಬಂದಿದೆ.ನಮ್ಮ ನಂತರದ ಪೀಳಿಗೆಗೂ ನಾಯಕತ್ವದ ಪರಿಚಯವಾಗಬೇಕು,ಅವರು ತಂಡವನ್ನು ಮುನ್ನಡೆಸುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ನಾಯಕನ ಆಯ್ಕೆ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ರಾಕ್ ಯೂತ್ ಕ್ಲಬ್ ನ ಉಪಾಧ್ಯಕ್ಷ ಬೆಳ್ಳಿ ಲೋಕೇಶ್ ಮಾತನಾಡಿ,ನಮ್ಮ ತಂಡ ಇಡೀ ರಾಜ್ಯದಲ್ಲಿಯೇ ಶಿಸ್ತು ಮತ್ತು ತಾಳ್ಮೆಗೆ ಹೆಸರಾಗಿದೆ,ಯುವ ಪ್ರತಿಭೆಗಳಿಗೆ ತಂಡ ವೇದಿಕೆ ಕಲ್ಪಿಸಿಕೊಡಬೇಕೆಂಬ ಆಶಯ ವ್ಯಕ್ತ ಪಡಿಸಿದರು.
ಈ ವೇಳೆ ತಂಡದ ಮೆನೇಜರ್ ರಾಕ್ ರವಿ ಹಾಗೂ ಹಿರಿಯ ಕ್ರೀಡಾಪಟುಗಳಾದ ರವಿ,ಪ್ರದೀಪ್ ಕುಮಾರ್,ಗುರುಪ್ರಸಾದ್ ಸೇರಿದಂತೆ ಹಲವರು ನೂತನ ನಾಯಕನಿಗೆ ಶುಭಹಾರೈಸಿದರು.