ಕ್ರೀಡೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಆತ್ಮ ಸ್ಥೈರ್ಯ ತುಂಬಿ,ಜೀವನ ಕೌಶಲ್ಯತೆಯನ್ನು ಕಲಿಸುತ್ತದೆ,
ಓರ್ವ ಕ್ರೀಡಾಪಟು ಸಮಾಜದಲ್ಲಿ ಉತ್ತಮ ಮನುಷ್ಯನಾಗಿ ಬಾಳುತ್ತಾನೆ
ಎಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಯವರು ಅಂತರಾಷ್ಟ್ರೀಯ ಖ್ಯಾತಿಯ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ರವರ ಕಾರ್ಟೂನ್ ಹಬ್ಬದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಸಂದರ್ಭ ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಸಂಸ್ಥಾಪಕ ನಾಯಕ ಹಾಗೂ ಕೋಚ್ ನಿತ್ಯಾನಂದ ಮುನ್ನಾ,ಚಕ್ರವರ್ತಿ ಕುಂದಾಪುರ ತಂಡದ ಸವ್ಯಸಾಚಿ ಹಾಗೂ ಕೋಚ್ ಪ್ರದೀಪ್ ವಾಜ್,
ಬಾಡಿ ಬಿಲ್ಡರ್ ಹಾಗೂ ತರಬೇತುದಾರ ಶ್ರೀನಿವಾಸ್ ಶೆಟ್ಟಿ ಆನಗಳ್ಳಿ ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿ ಸಂಸ್ಥಾಪಕಾಧ್ಯಕ್ಷ ಹಾಗೂ ನುರಿತ ಸಂಘಟಕ ಗೌತಮ್ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಹಿರಿಯ ಸಾಹಿತಿ ಹಾಗೂ ವಕೀಲರಾದ ಎ.ಎಸ್.ಎನ್ ಹೆಬ್ಬಾರ್,ದೈಹಿಕ ಶಿಕ್ಷಕರು ಹಾಗೂ ಟೊರ್ಪೆಡೋಸ್ ನ ಮಾಜಿ ಆಟಗಾರ ನಾರಾಯಣ ಶೆಟ್ಟಿ,ಕಾರ್ಟೂನ್ ಹಬ್ಬದ ಸಂಘಟಕ ಸತೀಶ್ ಆಚಾರ್ಯ ಉಪಸ್ಥಿತರಿದ್ದರು.
ಕುಂದಗನ್ನಡದ ಕಾಮಿಡಿ ಕಿಲಾಡಿಗಳಾದ ಮನು ಹಂದಾಡಿ ಹಾಗೂ ಚೇತನ ನೈಲಾಡಿಯವರಿಂದ
ಸ್ಟ್ಯಾಂಡಪ್ ಕಾಮಿಡಿ ಕಾರ್ಯಕ್ರಮ ನಡೆಯಿತು.
ಆರ್.ಕೆ.ಆಚಾರ್ಯ ಕೋಟ…