ಕಾರ್ಕಳ-ಇಲ್ಲಿನ ಬಂಡಿಮಠ ಅಯ್ಯಪ್ಪ ಮಂದಿರದ ಹಾಲ್ ನಲ್ಲಿ ಆರ್.ಸಿ.ಸಿ ಗುತ್ತಿಗೆದಾರರ ಸಂಘದ ಲಾಂಛನ ಮತ್ತು ಸಮವಸ್ತ್ರ ಬಿಡುಗಡೆ ಸಮಾರಂಭ ಜರುಗಿತು.
ಸಂಘದ ಮಾಜಿ ಅಧ್ಯಕ್ಷ ಸಯ್ಯದ್ ಯೂನುಸ್ ರವರ ಮೊಮ್ಮಗ,ಪ್ರಸಿದ್ಧ ಮಾಡೆಲ್
ಮಾಸ್ಟರ್ ಸಯ್ಯದ್ ಸಧಾಫ್ ಆರ್.ಸಿ.ಸಿ ಗುತ್ತಿಗೆದಾರರ ಸಂಘದ ಲಾಂಚನವನ್ನು ಹಾಗೂ ವಿನ್ಯಾಸ್ ಶ್ರೀಪತಿ ಪ್ರಭು ಸಮವಸ್ತ್ರ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಆರ್.ಸಿ.ಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೋಟ ದಾಮೋದರ ಆಚಾರ್
“ಕಳೆದ 15 ವರ್ಷಗಳಿಂದ
ಆರ್.ಸಿ.ಸಿ ಸಂಘ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.
ಇದೀಗ ವಿನೂತನವಾಗಿ ಆಯ್ಕೆಯಾದ ಸಂಘಟನೆಯಿಂದ ಹಲವಾರು ಮಹತ್ವಾಕಾಂಕ್ಷಿ
ಯೋಜನೆಗಳನ್ನು ಹಮ್ಮಿಕೊಂಡಿದ್ದು,ಪ್ರಮುಖವಾಗಿ ಗ್ರಾಹಕರು ಗುತ್ತಿಗೆದಾರರ ನಡುವಿನ ನ್ಯಾಯಯುತ ಹೊಂದಾಣಿಕೆ ವೃದ್ಧಿಸಲು,ಕಾರ್ಮಿಕರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲು,
ಕಾರ್ಮಿಕ ಇಲಾಖೆಯಿಂದ ಸರಕಾರದ ಸವಲತ್ತುಗಳು ಕಾರ್ಮಿಕರಿಗೆ ದೊರಕಿಸಲು,ಸಂಘಕ್ಕಾಗಿ ನಿವೇಶನ ಖರೀದಿಸಿ ಸ್ವತಃ ಕಟ್ಟಡ ನಿರ್ಮಾಣ,ಈ ಎಲ್ಲಾ ಯೋಚನೆ ಯೋಜನೆಗಳನ್ನು ಸಾಕಾರಗೊಳಿಸುವ ಸಲುವಾಗಿ ಮಾರ್ಚ್ 29 ರಂದು ವಿಶೇಷವಾದ ಕ್ರಿಕೆಟ್ ಪಂದ್ಯಾಟ ಆಯೋಜಿಸಿದ್ದು,ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಸಹಕರಿಸಬೇಕಾಗಿ ವಿನಂತಿಸಿದರು.
ಗೌರವಾಧ್ಯಕ್ಷ ಸಯ್ಯದ್ ಯೂನುಸ್ ಶುಕ್ರವಾರ ನಡೆಯಲಿರುವ ಪಂದ್ಯಾವಳಿಗೆ
ಶುಭಹಾರೈಸಿದರು.ಸಂಘದ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.
ಮಾಸ್ಟರ್ ಸಮರ್ಥ್ ಪ್ರಾರ್ಥನೆಗೈದರೆ,ಪ್ರಶಾಂತ್ ಆಚಾರ್ಯ ನಿರೂಪಣೆ ಹಾಗೂ ಚಂದ್ರಶೇಖರ್ ಆಚಾರ್ಯ ಕಾರ್ಯಕ್ರಮ ಸಂಯೋಜಿಸಿದರು.