ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬಾಲಿಂಗ್ ಮಾಡಿತು. ಆರ್.ಸಿ.ಬಿ ಬ್ಯಾಟ್ಸಮನಗಳನ್ನ ಯಾರ್ಕರ್ ಬಾಲ್ಗಳ ಮೂಲಕ ಎಡೆಬಿಡದೆ ಕಾಡಿತು. ವಿರಾಟ್ ವಿಕೆಟು ಬೇಗ ಕೊಟ್ಟಾಗಿತ್ತು. 3 ಬೌಂಡರಿಗಳ ನಂತರ ದೇವರು ಕೈ ಬಿಟ್ಟಾಗಿತ್ತು.
ಮೂರಕ್ಕೇರಿದ ಪಾಟಿದಾರ ಆಟ ಚೂರು ಸಮಾಧಾನಕರ. 1 ಸಿಕ್ಸು 2 ಬೌಂಡರಿ ಮಾತ್ರ ಬಾರಿಸಿ ಮಿನಿಮಮ್ ಆದ ಮ್ಯಾಕ್ಸು, 75 ರನ್ನು ಬಾರಿಸಿದ ಆರ್ಸಿಬಿಯ ಆಪತ್ಬಾಂಧವ ಎಬಿ ಡಿವಿಲಿಯರ್ಸ್ ಮತ್ತೆ ರಾಕ್ಸು.
ಗೆಲ್ಲಲು 172 ರನ್ನುಗಳ ಗಳಿಸಬೇಕಿದ್ದ ಡೆಲ್ಲಿ ಹೈರಾಣಾಯಿತು ಆರಂಭಿಕ ವಿಕೆಟ್ಗಳ ಚೆಲ್ಲಿ. ಕೇವಲ 6 ರನ್ನುಗಳಿಗೆ ಉರುಳಿದ ಶಿಖರ
4 ರನ್ನುಗಳಿಗೆ ಚಿತ್ತಾದ ಸ್ಮಿತ್ತು. ಮೂರು ಬೌಂಡರಿಗಳ ನಂತರ ತಿರುಗದ ಪೃಥ್ವಿ, 22 ರನ್ನುಗಳಿಗಿಂತ ಹೆಚ್ಚು ಮಾರ್ಕಾಗದ ಮಾರ್ಕು.
ವಿಕೆಟ್ ಮೇಲೆ ವಿಕೆಟ್ ಹೋದರು ಹೆದರಲಿಲ್ಲ ಪಂತು ಕೊನೆಯ ಕ್ಷಣದವರೆಗೂ ಹೋರಾಡಿದ ಕ್ರೀಸ್ ಮೇಲೆ ನಿಂತು. ಆದರೆ ಸೋಲುತಿದ್ದ ತಂಡವನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದ ಅಸಲಿ ವಾರಿಯರ್ ಸಿಕ್ಸುಗಳ ಸುರಿಮಳೆಗೈದ ಸಿಮ್ರನ್ ಹೆಟ್ಮಾಯರ್.
ಇನ್ನೇನು ಗೆದ್ದೇ ಬಿಟ್ರು ದಿಲ್ಲಿ ಅನ್ನುವಾಗಲೇ ಒಂದ್ನಿಮಿಷ ನಿಲ್ಲಿ ಅಂತ ಬಂದ ಸಿರಾಜ್ ಭಾಯ್ ಎರಡು ಬೌಂಡರಿ ಕೊಟ್ರೂ ಗೆಲ್ಲಲು ಬಿಡದೆ ಡೆಲ್ಲಿಗೆ ಹೇಳಿದ ಬಾಯ್ ಬಾಯ್.
ನಾಯಕನ ಆಟ ಆಡಿದ ಪಂತು, ಮೀಸ್ಟೇಕ್ ಮಾಡೇಬಿಟ್ಟ ಅಂತೂ. ಹೆಟ್ಟುತ್ತಿದ್ದ ಹೆಟ್ಮಾಯರಗೆ ಕೊನೆ ಎರಡು ಬಾಲು ಸಿಗಲೇ ಇಲ್ಲ. ಟೇಬಲ್ ಟಾಪ್ ಗೆ ಹಾರಿದ ಆರ್.ಸಿ.ಬಿ ನೋಡಿ ‘ಎಲ್ಲೋ’ ಕೆಲವರು ನಗಲೇ ಇಲ್ಲ