2024ರ ಡಬ್ಲ್ಯುಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಿದವು. ಕೊನೆಯ ಹಂತದವರೆಗೂ ಬಾರಿ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಡೆಲ್ಲಿ ಕ್ಯಾಪಿಟಲ್ಸ್ ಅನ್ನು 8 ವಿಕೆಟ್‌ಗಳಿಂದ ಸೋಲಿಸಿ, ಚೊಚ್ಚಲ ಪ್ರಶಸ್ತಿಯನ್ನು ಎತ್ತಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ನೀಡಿದ್ರು, ಆರ್‌ಸಿಬಿಯ ನಮ್ಮ ಕನ್ನಡತಿ ಶ್ರೇಯಾಂಕಾ ಪಾಟೀಲ್ DCಯ ಬ್ಯಾಟಿಂಗ್ ಲೈನ್ ಅಪ್ ಗೆ ಬ್ರೇಕ್ ನೀಡಿದರು. RCB ಬೌಲಿಂಗ್ ದಾಳಿಗೆ DC ತತ್ತರಗೊಂಡಿತು. ಬೆಂಕಿ ಬೌಲಿಂಗ್ ಮಾಡಿದ ಆರ್ ಸಿ ಬಿ ಪಡೆ ಯಾವುದೇ ಎಡವಟ್ಟು ಮಾಡದೆ ಪಂದ್ಯವನ್ನು ಗೆದ್ದುಕೊಂಡು ಟ್ರೋಫಿಗೆ ಮುತ್ತಿಕ್ಕಿ 16 ವರ್ಷಗಳ ಕನಸನ್ನು ನನಸಾಗಿಸಿತು. ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಕ್ರಿಪ್ಟ್ ಇತಿಹಾಸ, ಅದ್ಭುತ ಶೈಲಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ!
ಕನಸು ಈಡೇರಿದೆ. 16 ವರ್ಷಗಳ ಟ್ರೋಫಿ ಬರ ನೀಗಿಸಿದ ಆರ್‌ಸಿಬಿ ಗರ್ಲ್ಸ್ ತಂಡಕ್ಕೆ ಅಭಿನಂದನೆಗಳು.ಬೆನ್ನು ತಟ್ಟಲೇಬೇಕು: ಕಂಗ್ರಾಜುಲೇಷನ್ಸ್ ಹೇಳಲೇಬೇಕು ಆರ್‌ಸಿಬಿ ಸಿಂಹಿಣಿಯರಿಗೆ…ನಮ್ಮ ಆರ್‌ಸಿಬಿಯ ಆಪತ್ಬಾಂಧವಿ ಎಲ್ಲಿಸ್ ಪೆರ್ರಿ ಮತ್ತು ಕನ್ನಡತಿ ಶ್ರೇಯಾಂಕಾ ಪಾಟೀಲ್ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಒಡತಿಯರಾದರು. WPL-T20 ಫೈನಲ್‌ನಲ್ಲಿ ಜಯಗಳಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು! ತಮ್ಮ ತಂಡವು ಜಯ ಸಾಧಿಸುತ್ತಿದ್ದಂತೆ RCB ಅಭಿಮಾನಿಗಳು ಸಂತೋಷದ ಸಂಭ್ರಮದಲ್ಲಿದ್ದಾರೆ!
ಆರ್‌ಸಿಬಿ ಅಭಿಮಾನಿಗಳು ಪದೇ ಪದೇ ಹೇಳುವ ‘ಈ ಸಲ ಕಪ್ ನಮ್ದೇ’ ಎಂಬ ಘೋಷ ವಾಕ್ಯವನ್ನು ಸ್ಮೃತಿ ಮಂಧಾನ ‘ಈ ಸಲ ಕಪ್ ನಮ್ದು’ ಎಂದು ಬದಲಿಸಿದರು.
ಹೆಣ್ಮಕ್ಕಳೇ ಸ್ಟ್ರಾಂಗ್ ಗುರು…