ಏನಾಯ್ತು? ಮತ್ತೊಂದು ಸಲ ಇನ್ನೊಂದು ನಿರಾಸೆ. ಏನ್ ಹೇಳೋದು? ಮೂರು ಜನ ಪ್ಲೇಯರ್ಸ್ ಹಿಡ್ಕೊಂಡ್ರೆ ಮೂರು ಮ್ಯಾಚ್ ಗೆಲ್ಲಬಹುದು. ಅಬ್ಬಬ್ಬಾ ಅಂದ್ರೆ ಇನ್ನೊಂದು ಮೂರು ಮ್ಯಾಚ್ ಗೆಲ್ಲಬಹುದು. ಆರು ಮ್ಯಾಚ್ ಗೆಲ್ಲಬಹುದು. ಕಪ್ ಗೆಲ್ಲೋಕ್ಕೆ ಆಗುತ್ತಾ? ಕಪ್ ಗೆಲ್ಲಬೇಕು ಅಂದ್ರೆ ಕಪ್ ಗೆಲ್ಲೋ ಟೀಮ್ ತರಹ ಇರಬೇಕು. ಇಂಡಿಯನ್ ಬ್ಯಾಟ್ಸಮನ್ ಎಲ್ಲಿದ್ದಾರೆ ಆರ್‌ಸಿಬಿಯಲ್ಲಿ? ವಿರಾಟ್ ಕೊಹ್ಲಿ ಒಬ್ಬನ ಹತ್ರ 7000 ರನ್ಸ್ ಇದೆ. ಅದು ಬಿಟ್ರೆ ನೆಕ್ಸ್ಟ್ ಇಂಡಿಯನ್ ಬ್ಯಾಟರ್ಸ್ ಎಲ್ಲಿದ್ದಾರೆ? ಯಾರೂ ಇಲ್ಲ. ಹೇಗೆ ಕಪ್ ಗೆಲ್ಲೋಕೆ ಆಗುತ್ತೆ?
ನಾವು ನೀವು ಇದನ್ನೆಲ್ಲಾ ನೋಡ್ತೇವೆ, ಆಲೋಚನೆ ಮಾಡುತ್ತೇವೆ. ಆದರೆ ಮ್ಯಾನೇಜ್ಮೆಂಟ್ ಇದನ್ನೆಲ್ಲಾ ನೋಡುತ್ತಾ? ಮ್ಯಾನೇಜ್ಮೆಂಟ್ ನೋಡ್ತಾ ಇಲ್ಲ. ಯಾಕೆ ಏನು ರೀಸನ್?
ಅದಕ್ಕೆ ನಾವು ಹೇಳ್ತಾ ಇರೋದು Lets dissolve this management.We will build the team. ಫಂಡ್ ರೈಸ್ ಮಾಡಬೇಕಾ? We will raise the funds.ಅವರಿಗಿಂತ 10 ಪಟ್ಟು ಹೆಚ್ಚು ಫಂಡ್ ರೈಸ್ ಮಾಡುತ್ತೇವೆ. ಟೀಮ್ ಮಾಡಬೇಕಾ? ನಾವು ಮಾಡುತ್ತೇವೆ. ನಮಗೆ 15 -16 ವರ್ಷಗಳನ್ನು ನೀಡಬೇಡಿ. ನಮಗೆ ಐದು ವರ್ಷ ಕೊಡಿ. ಕಪ್ ಗೆದ್ದಿಲ್ಲ ಅಂದ್ರೆ ಆಮೇಲೆ ನಮ್ಮನ್ನು ಪ್ರಶ್ನೆ ಮಾಡಿ. ದೊಡ್ಡದಾಗಿ ಆರ್ ಸಿ ಬಿ Unbox ಈವೆಂಟ್ ಅಂತ ಮಾಡ್ತಾರೆ. ಮ್ಯಾಚ್ ಗಳೆಲ್ಲ ಆದಮೇಲೆ ಸೀಸನ್ ರಿವ್ಯೂ ಮಾಡೋಣ ಬನ್ನಿ. ಫ್ಯಾನ್ಸ್ ಗಳೆಲ್ಲ ದುಡ್ಡು ಕೊಟ್ಟು ಬರ್ತೀವಿ. ರಿವ್ಯೂ ಮಾಡೋಣ. ಎಲ್ಲಿ ತಪ್ಪಾಯಿತು , ಏನು ತಪ್ಪಾಯ್ತು ಅಂತ. Lets come next year with the bang. ನೆಕ್ಸ್ಟ್ ಇಯರ್ ಕಪ್ ನಮ್ದೇ ಅಂತ ಸುಮ್ನೆ ಹೇಳಿಕೊಂಡು ಓಡಾಡೋದು ಬೇಡ. ಅದೇ ತರ ಟೀಮ್ ಮಾಡಿಕೊಂಡು ಕಪ್ ಗೆಲ್ಲಬೇಕು. ಒಳ್ಳೆಯ ಟೀಮ್ ಮಾಡಿಕೊಂಡು ಬಂದರೆ ನಾವು ಕಪ್ ಗೆಲ್ಲಬಹುದು. ಯಾರನ್ನು ನಾವು ತುಂಬಾ ಇಷ್ಟಪಡುತ್ತೇವೋ ಅವರೇ ನಮ್ಮನ್ನು ತುಂಬಾ ಬೇಜಾರು ಮಾಡೋದು. ಈಗ ನಮಗೆ ತುಂಬಾ ಬೇಜಾರು ಆಗ್ತಾ ಇದೆ. ಯಾಕೆಂದರೆ ಈ ಸಲ ಕಪ್ ನಮ್ದು, ಕಪ್ ನಮ್ದು ಅನ್ನೋದು. ಕಪ್ ಗೆಲ್ಲೋ ಟೀಮ್ ಅಲ್ಲ ಅಂದ್ರು ಈ ಸಲ ಕಪ್ ಗೆಲ್ತಿವಿ, ಕಪ್ ಗೆಲ್ತಿವಿ ಅನ್ಕೋತೀವಿ.
ಫಾಫ್ ಡು ಪ್ಲೆಸ್ಸಿಸ್ ನೋಡಿದ್ರೆ ಅಯ್ಯೋ ಅನಿಸುತ್ತೆ. ಆ ವ್ಯಕ್ತಿ ಚೆನ್ನೈ ಅಥವಾ ಬೇರೆ ಯಾವುದಾದರೂ ಟೀಮ್ ಗೆ ಆಡಿದ್ದಿದ್ದರೆ ಅವರು ಕಪ್ ಗೆಲ್ಲಬಹುದಿತ್ತು. This is very very pathetic from the managemnt. ಪ್ಲೀಸ್, ಫ್ಯಾನ್ಸ್ ಗಳು ಇದ್ದೀವಿ. ಫ್ಯಾನ್ಸ್ ಗಳನ್ನು ಕೇಳಿ.ಅವರನ್ನು ಪರಿಗಣಿಸಿ. ಯಾರೆಲ್ಲಾ ಆರ್‌ಸಿಬಿ ಫ್ಯಾನ್ಗಳು ಇದ್ದಾರೋ ನೆಕ್ಸ್ಟ್ ಟೈಮ್ ಕಪ್ ನಮ್ದೇ ಎಂದು ಸುಮ್ನೆ ಹೇಳಬೇಡಿ. ಅವರು ನೆಕ್ಸ್ಟ್ ಸಲ ಕಪ್ ಗೆಲ್ಲೋ ತರಹ ಟೀಮ್ ಮಾಡಿಕೊಂಡು ಬರಲಿ. ಪ್ರತಿ ಮ್ಯಾಚ್ ಗು ಬರ್ತೀವಿ. ಹತ್ತು ಪಟ್ಟು ಹೆಚ್ಚು ಸಪೋರ್ಟ್ ಮಾಡ್ತೀವಿ. ಬಿಟ್ಟುಕೊಡಲ್ಲ ಆರ್‌ಸಿಬಿ ನ. ಆದರೆ ದಯವಿಟ್ಟು ಸ್ವಲ್ಪ ಸೆನ್ಸಿಬಲ್ ಆಗಿ ಯೋಚನೆ ಮಾಡಿ. ಫ್ಯಾನ್ಸ್ ಗಳಿಗೆ ಕರೆಕ್ಟಾಗಿ ಗೊತ್ತಿದೆ ಪ್ಲೇಯರ್ಸ್ ಆಡುತ್ತಾರೋ ಇಲ್ವಾ ಅಂತ. ನಮಗೆ ಗೊತ್ತು, ನಿಮಗೆ ಗೊತ್ತಾಗುವುದಿಲ್ಲವೋ ? ನಾನು ಮ್ಯಾನೇಜ್ಮೆಂಟ್ ಅನ್ನು ವಿನಂತಿಸುತ್ತೇನೆ ದಯವಿಟ್ಟು ಸ್ವಲ್ಪ ಚೆನ್ನಾಗಿರೋ ಟೀಮ್ ಮಾಡಿ ಅಷ್ಟೇ.
Thats it from ದ ನೊಂದ ನೊಂದ ಆರ್‌ಸಿಬಿ ಫ್ಯಾನ್.