ಇತ್ತೀಚೆಗಷ್ಟೇ ಶ್ರೀಲಂಕಾದಲ್ಲಿ ನಡೆದ ಆತ್ಮಾಹುತಿ ದಾಳಿಗೆ ಬಲಿಯಾದ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಮೇರು ವ್ಯಕ್ತಿತ್ವ,ಜೆ.ಡಿ.ಎಸ್ ನಾಯಕ,ಟೆನ್ನಿಸ್ ಕ್ರಿಕೆಟ್ ಗೆ ವೈಭವದ ಸ್ಪರ್ಶ ನೀಡಿದ ದಿ|ರಂಗಣ್ಣ ಹಾಗೂ ಇನ್ನೋರ್ವ ಜೆ.ಡಿ.ಎಸ್ ನ ಧೀಮಂತ ನಾಯಕ ದಿ| ಹನುಮಂತರಾಯಪ್ಪ ಸ್ಮರಣಾರ್ಥ ರಾಷ್ಟ್ರೀಯ ಮಟ್ಟದ ಟೆನ್ನಿಸ್ ಕ್ರಿಕೆಟ್ ಪಂದ್ಯಾಕೂಟ 20,21 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಮಂಜುನಾಥ್, ಅಧ್ಯಕ್ಷ ಎಮ್.ಮುನಿಸ್ವಾಮಿ, ಯುವ ನಾಯಕ ಕಿರಣ್ ಮಂಜುನಾಥ್ ಸಹಕಾರದಲ್ಲಿ ಹಾಗೂ ಟಿ.ದಾಸರಹಳ್ಳಿ ಯುವ ಜನತಾದಳದ ಅಧ್ಯಕ್ಷ ಜಿ.ಗುರುಪ್ರಸಾದ್ ರವರ ದಕ್ಷ ಸಾರಥ್ಯದಲ್ಲಿ ಈ ಪಂದ್ಯಾಕೂಟ ಅತ್ಯಂತ ವ್ಯವಸ್ಥಿತವಾಗಿ ನಡೆಯಲಿದೆ.
ಟಿ ದಾಸರಹಳ್ಳಿಯ MEI Layout ಅಂಗಣದಲ್ಲಿ ನಡೆಯುವ ಈ ಪಂದ್ಯಾಕೂಟದ ವಿಜೇತ ತಂಡ 3 ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ,ರನ್ನರ್ ಅಪ್ ತಂಡ 1.5 ಲಕ್ಷ ಸಹಿತ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲಿದ್ದು,ಇನ್ನಿತರ ವೈಯಕ್ತಿಕ ಆಕರ್ಷಕ ಪ್ರಶಸ್ತಿಗಳು ಆಟಗಾರರನ್ನು ಹುರಿದುಂಬಿಸಲಿದೆ.
ಬರೋಡಾ ಹಾಗೂ ಗುಜರಾತ್ ನ 2 ಬಲಿಷ್ಠ ತಂಡಗಳ ಸಹಿತ,ರಾಜ್ಯದ ಪ್ರತಿಷ್ಟಿತ 14 ತಂಡಗಳು ಪ್ರತಿಷ್ಟಿತ ಪಂದ್ಯಾಕೂಟದಲ್ಲಿ ಹಣಾಹಣಿಗಿಳಿಯಲಿದೆ.ಜಿದ್ದಾ ಜಿದ್ದಿನ ಈ ಸಮರವನ್ನು ಸಚಿನ್ ಮಹಾದೇವ್ ನೇತೃತ್ವದ M.SPORTS ಯೂ ಟ್ಯೂಬ್ ಚಾನೆಲ್ ಪ್ರಪಂಚದಾದ್ಯಂತ ಬಿತ್ತರಿಸಲಿದೆ.
ಆರ್.ಕೆ.ಆಚಾರ್ಯ ಕೋಟ…