ನ್ಯೂ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಕೋಟೇಶ್ವರ ತಂಡ 74 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ
ಕ.ಪ.ಸ್ಕೂಲ್ ಕೋಟೇಶ್ವರದ ಅಂಗಣದಲ್ಲಿ ಸತತ 8 ನೇ ಬಾರಿ ಆಯೋಜಿಸಿದ್ದ ಕೆ.ಪಿ.ಎಲ್ -2020 ಪಂದ್ಯಾವಳಿಯ ಪ್ರಶಸ್ತಿಯನ್ನು ರೈಸಿಂಗ್ ಸ್ಟಾರ್ ಕೋಟೇಶ್ವರ ತಂಡ ಜಯಿಸಿದೆ.
ಲೀಗ್ ಮಾದರಿಯಲ್ಲಿ ಸಾಗಿದ ಈ ಪಂದ್ಯಾವಳಿಯಲ್ಲಿ 4 ತಂಡಗಳು ಭಾಗವಹಿಸಿದ್ದು,ರೋಚಕ ಸೆಮಿಫೈನಲ್ ಪಂದ್ಯಗಳಲ್ಲಿ ಕ್ರಮವಾಗಿ ರೈಸಿಂಗ್ ಸ್ಟಾರ್, ಕೊಂಕಣ್ ಎಕ್ಸ್‌ಪ್ರೆಸ್ ತಂಡವನ್ನು,
ಮುದ್ದೇರಕಟ್ಟೆ ಲಯನ್ಸ್, ನಾಗಬನ ಚಾಲೆಂಜರ್ಸ್ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತ್ತು.
ಅಂತಿಮವಾಗಿ ರೈಸಿಂಗ್ ಸ್ಟಾರ್ ತಂಡ ಮುದ್ದೇರಕಟ್ಟೆ ಲಯನ್ಸ್(M.K.S)ತಂಡವನ್ನು ಸೋಲಿಸಿ ಪ್ರಥಮ ಪ್ರಶಸ್ತಿ ರೂಪದಲ್ಲಿ 22,000
ನಗದು,
ಸ್ಥಾನಿ ಮುದ್ದೇರಕಟ್ಟೆ ಲಯನ್ಸ್ ತಂಡ 11,000 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಸಚಿನ್ ಕೋಣಿ ಸರಣಿ ಶ್ರೇಷ್ಠ, ನಯಾಜ್ ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಶರತ್ ಬೆಸ್ಟ್ ಬೌಲರ್ ಗೌರವಕ್ಕೆ ಪಾತ್ರರಾದರು.ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಧರ್,ಬಾಲಚಂದ್ರ, ಪ್ರವೀಣ್ ಹಾಗೂ ಯೂಸುಫ್
ಹಾಗೂ ತಂಡದ ಸದಸ್ಯರಾದ ರಾಜೇಶ್ ಪ್ರಭು,ಪುರುಷೋತ್ತಮ ಕಾಮತ್,ಸತೀಶ್ ಕಾಮತ್,ಜೀವನ್,ಸುಧಾಕರ್,
ರಜತ್ ಸುಮಂತ್,ನರೇಶ್ ಭಟ್,ಅಜಿತ್ ಆಚಾರ್ ಇನ್ನಿತರರು ಉಪಸ್ಥಿತರಿದ್ದರು…