ಭಾನುವಾರ ಶಾರ್ಜಾದ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದಐ.ಪಿ.ಎಲ್ ನ ರೋಚಕ ಕದನವೊಂದರಲ್ಲಿ ರಾಜಸ್ಥಾನ ರಾಯಲ್ಸ್ ,ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಭರ್ಜರಿಯಾಗಿ ಸೋಲಿಸಿ ಗೆಲುವಿನ ನಗೆ ಬೀರಿದೆ.
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತ್ತು.ಕಿಂಗ್ಸ್ ನ ಪರವಾಗಿ ಕನ್ನಡಿಗರಾದ ಮಾಯಾಂಕ್ ವೇಗದ ಶತಕ (50 ಎಸೆತಗಳಲ್ಲಿ 106)ಹಾಗೂ ಕೆ.ಎಲ್.ರಾಹುಲ್ ಅರ್ಧಶತಕ 69 ರನ್ ಗಳ ಭರ್ಜರಿ ಆರಂಭ ಒದಗಿಸಿದ್ದರು ಹಾಗೂ 20 ಓವರ್ ಗಳಿಗೆ ಕೇವಲ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು.
ಅಸಾಧ್ಯದ ಗುರಿಯನ್ನು ಬೆಂಬತ್ತಿದ ರಾಜಸ್ಥಾನ ರಾಯಲ್ಸ್ ಸಂಜು ಸ್ಯಾಮ್ಸನ್ ವೇಗದ ಅರ್ಧಶತಕ 42 ಎಸೆತಗಳಲ್ಲಿ 85 ರನ್ ಹಾಗೂ ಸ್ಟೀವ್ ಸ್ಮಿತ್ ಅರ್ಧಶತಕ 27 ಎಸೆತಗಳಲ್ಲಿ 50 ರನ್ ಸಿಡಿಸಿ ಭರ್ಜರಿ ಆರಂಭ ನೀಡಿದ್ದರು.
*ತೆವಳುತ್ತಾ ತೆವಳುತ್ತಾ ಎದುರಾಳಿಗಳ ಗೆಲುವಿನ ಬಿಸಿ ತೇವಗೊಳಿಸಿದ ತೇವಾಟಿಯಾ*
ಇವರೀರ್ವರ ವಿಕೆಟ್ ಪತನದ ಬಳಿಕ
ರನ್ ವೇಗದಲ್ಲಿ ಹಠಾತ್ ಕುಸಿತ ಅನುಭವಿಸಿದ ಸಂದರ್ಭ ಕ್ರೀಸ್ ಗೆ ಆಗಮಿಸಿದ ಎಡಗೈ ದಾಂಡಿಗ ರಾಹುಲ್ ತೇವಾಟಿಯ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರು. ಅಂತಿಮ ಹಂತದಲ್ಲಿ ಪಂಜಾಬ್ ನ ಸುಲಭ ಗೆಲುವಿನ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ ತೇವಾಟಿಯ, ಕಾಟ್ರೆಲ್ ಒಂದೇ ಓವರ್ ನಲ್ಲಿ 5 ಸಿಕ್ಸರ್ ಗಳನ್ನು ಚಚ್ಚಿ ಒಟ್ಟು 7 ಭರ್ಜರಿ ಸಿಕ್ಸರ್ ಗಳ ನೆರವಿನಿಂದ
ಅರ್ಧಶತಕ 31 ಎಸೆತಗಳಲ್ಲಿ 53 ರನ್ ಗಳಿಸಿ ರಾಜಸ್ಥಾನ ರಾಯಲ್ಸ್ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದ್ದರು.