20.8 C
London
Sunday, July 14, 2024
Homeಬ್ಯಾಡ್ಮಿಂಟನ್ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸೆಮಿ ಪೈನಲ್ ಹಂತಕ್ಕೆ

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸೆಮಿ ಪೈನಲ್ ಹಂತಕ್ಕೆ

Date:

Related stories

ವಿನಯ್ ಕುಮಾರ್ ಕರ್ನಾಟಕ ಕೋಚ್ ಆಗುವುದು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬೇಕಿಲ್ಲವೇ?

10 ವರ್ಷ..  ಕರ್ನಾಟಕ ತಂಡ ಕೊನೆಯ ಬಾರಿ ರಣಜಿ ಟ್ರೋಫಿ ಗೆದ್ದು.. 10 ವರ್ಷ..  ಕರ್ನಾಟಕ...

ಶಿಖರದ ತುದಿ ಕಂಡವನಿಗೆ ಸಣ್ಣ ಸೋಲು ಲೆಕ್ಕಕ್ಕೆ ಬಾರದು…!!!

ತುಂಬ ಸಲ ಹೀಗಾಗುತ್ತದೆ. ಕೆಲವೊಮ್ಮೆ ಯಾವುದಾದರೂ  ಸಾಧಕರ ಮೇಲೆ ನಮಗೆ ವಿನಾಕಾರಣದ...

ಭಾರತ ತಂಡಕ್ಕೆ ‘ರಿಂಗ್ ಮಾಸ್ಟರ್’ ಗಂಭೀರ್ ಕೋಚ್.. ನೆನಪಾಗುತ್ತಿದ್ದಾನೆ ಗ್ರೆಗ್ ಚಾಪೆಲ್..!

ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡ ಕ್ಷಣದಿಂದಲೂ...

ಜಸ್ಪ್ರೀತ್ ಬುಮ್ರಾ: ಅಪ್ಪ ಇಲ್ಲ.. ಅಜ್ಜ ಕೇರ್ ಮಾಡಲಿಲ್ಲ! ಅನಾಥನಂತೆ ಬದುಕಿದ ಬುಮ್ರಾ!

ಜಸ್ಪ್ರೀತ್ ಬುಮ್ರಾ.. ಯಾವುದೇ ಪರಿಚಯದ ಅಗತ್ಯವಿಲ್ಲದ ಹೆಸರು. ಅವರು ಈ ಪೀಳಿಗೆಯ...

ರೋಹಿತ್ ಶರ್ಮಾ.. ನೀನು ನಿಜಕ್ಕೂ ಧರ್ಮರಾಯನೇ..!

ಆ ಸುದ್ದಿ ಕೇಳಿದ ನಂತರ ರೋಹಿತ್ ಶರ್ಮಾ ಬಗ್ಗೆ ಇದ್ದ ಗೌರವ...
spot_imgspot_img
spot_imgspot_img
spot_imgspot_img
spot_imgspot_img
ಟೋಕಿಯೋ: ವಿಶ್ವ ಬ್ಯಾಡ್ಮಿಂಟನ್ ಅಂಕಣದಲ್ಲಿ ಇಬ್ಬರೂ ಮದಗಜಗಳ ಹೋರಾಟವೆಂದೆ ಖ್ಯಾತಿ ಪಡೆದ  ಪಿ.ವಿ. ಸಿಂಧು ಮತ್ತು ಯಮಗುಚಿ ನಡುವಿನ ಪಂದ್ಯದಲ್ಲಿ ಪಿ ವಿ ಸಿಂಧು ಗೆಲುವಿನ ನಗೆಬಿರಿವುದರ ಜೋತೆಗೆ ಪದಕದ ಖಚಿತದೊಂದಿಗೆ ಸೆಮಿ ಪೈನಲ್ ಹಂತಕ್ಕೆ ತಲುಪಿದ್ದಾರೆ
ಮೊದಲಿನ ಸೆಟ್ ನಲ್ಲಿ ಇಬ್ಬರೂ ಅಂಕ ಪಡೆಯಲು ಹೋರಾಟ ನಡೆಸಿದರೂ ಸಿಂಧು ತಮ್ಮ ಆಕ್ರಮಣಕಾರಿ ಆಟದಿಂದ  ಮೇಲುಗೈ ಸಾಧಿಸಿದರು. ಆದರೆ ಎರಡನೇ ಸೆಟ್ ಅಷ್ಟು ಸುಲಭದ್ದಾಗಿರಲಿಲ್ಲ ಅದರಲ್ಲೂ ಸ್ಕೋರ್ 10 ರ ಮೇಲೆ ತಲುಪಿದ ಮೇಲೆ ಇಬ್ಬರೂ ಜಿದ್ದಿಗೆ ಬಿದ್ದವರಂತೆ ಹೋರಾಡಿದರು
ಆದರೆ ಸಿಂಧು ಹೊಡೆತವನ್ನು ನಿಭಾಯಿಸಲು ಯಮಗುಚಿ ತಪ್ಪು ಮಾಡಿದ್ದರಿಂದ ಒತ್ತಡ ಬಿದ್ದು  ಸೋತಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಯಮಗುಚಿ ಒತ್ತಡಕ್ಕೆ ಸಿಲುಕಿ ನಿಭಾಯಿಸಲಾಗದೇ ಕೆಲವೊಂದು ತಪ್ಪು ಆಟವಾಡಿದರೆ  ಸಿಂಧು ಒತ್ತಡವನ್ನು ಕೂಲ್ ಆಗಿ ತೆಗೆದುಕೊಂಡು ಕೊನೆಯವರೆಗೂ ತಾಳ್ಮೆ ಕಳೆದುಕೊಳ್ಳದೆ ಆಟವಾಡಿ  ಗೆಲುವಿಗೆ ದಡ ಸೇರಿದರು.
ಈ ಬಾರಿ ಒಲಿಂಪಿಕ್ಸ್ ಗಾಗಿ ಸಿಂಧು ಭರ್ಜರಿ ತಯಾರಿಯನ್ನೇ ಮಾಡಿಕೊಂಡಿದ್ದರು ಲಂಡನ್ ಗೆ ತೆರಳಿ ವಿಶೇಷವಾಗಿ ಮಾನಸಿಕವಾಗಿ ಫಿಟ್ ಆಗಿರಲು ತರಬೇತಿ ಪಡೆದಿದ್ದರು. ಅದೆಲ್ಲದರ ಫಲ ಅವರಿಗೆ ಇಂದಿನ ಪಂದ್ಯದಲ್ಲಿ ಕೈ ಹಿಡಿಯಿತು. ಸಿಂಧು ಇಂದು ಆಡಿದ ರೀತಿ ಆಕೆ 2019 ರಲ್ಲಿ ವಿಶ್ವ ಚಾಂಪಿಯನ್ ಶಿಪ್ ಚಿನ್ನದ ಪದಕ ಗೆಲ್ಲುವಾಗ ಇದ್ದಂತಹ ಹುರುಪು ಕಂಡುಬಂತು. ಇದೇ ಫಾರ್ಮ್ ಮುಂದುವರಿಸಿದರೆ ಆಕೆ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಅಥವಾ ಚಿನ್ನದ ಪದಕ ಗೆಲ್ಲುವುದನ್ನು ಯಾರಿಂದಲೂ ತಪ್ಪಿಸಲಾಗದು.
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

ten + 19 =