Categories
Action Replay

ಹಳೆಯಂಗಡಿ : ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟದ ಸಮಾರೋಪ ಸಮಾರಂಭ

ಹಳೆಯಂಗಡಿ : ಇಲ್ಲಿನ ವೃತ್ತಿಪರ ಇಂಜಿನಿಯರ್ಸ್‍ಗಳಿಗಾಗಿ ಗೌತಮ್ ಶೆಟ್ಟಿ ನಿರ್ದೇಶಕನದ ಟೊರ್ಪೆಡೋಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಕಳೆದ ವಾರ ಆಯೋಜಿಸಿದ್ದ ಅಂತರ್ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟದ ಸಮಾರೋಪ ಸಮಾರಂಭ,ಬಹುಮಾನ ವಿತರಣಾ ಕಾರ್ಯಕ್ರಮ ರವಿವಾರ ನಡೆಯಿತು.

     

ವಿಜೇತರು ಪುರುಷರ ಸಿಂಗಲ್ಸ್ ವಿಭಾಗ : ಪ್ರಥಮ-ಪವನ್ ಬಜಗೋಳಿ, ದ್ವಿತೀಯ-ದಾಮೋದರ್ ಮಂಗಳೂರು

ಪುರುಷರ ಡಬಲ್ಸ್ ವಿಭಾಗ : ಪ್ರಥಮ-ಪವನ್&ರಂಜಿತ್ ಉಡುಪಿ, ದ್ವಿತೀಯ-ಮನೋಜ್ ಶೆಣೈ&ಅಜಯ್ ಪಡುಬಿದ್ರಿ.

ಸಮಾರೋಪ ಸಮಾರಂಭದಲ್ಲಿ ಟೊರ್ಪೆಡೋಸ್ ಸ್ಪೋಟ್ರ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ವಿಜೇತರನ್ನು ಅಭಿನಂದಿಸಿ, ಕ್ಲಬ್ ನ ನಿರಂತರ ಕ್ರೀಡಾ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಉಪಾಧ್ಯಕ್ಷರಾದ ನಾಗಭೂಷಣ್ ರೆಡ್ಡಿ, ಸ್ಪೋಟ್ರ್ಸ್ ಡೆನ್ ಈವೆಂಟ್ ನ ಸಂಘಟಕ ಗಣೇಶ್ ಕಾಮತ್,ರಾಜೇಶ್ ಶೆಟ್ಟಿ, ಪಂದ್ಯಾಕೂಟದ ಮುಖ್ಯ ರೆಫರಿ ಸಂದೀಪ್ ಶೆಟ್ಟಿ, ಟೊರ್ಪೆಡೋಸ್ ಸ್ಪೋಟ್ರ್ಸ್ ಕ್ಲಬ್ ನ ಮೆನೇಜರ್ ಕೆ.ಪಿ.ಸತೀಶ್, ಬ್ಯಾಡ್ಮಿಂಟನ್ ಕೋಚ್ ಸಂತೋಷ್ ಖಾರ್ವಿ ಹಾಗೂ ಕಾರ್ತಿಕ್ ಉಪಸ್ಥಿತರಿದ್ದರು.

ಆರ್.ಕೆ.ಆಚಾರ್ಯ ಕೋಟ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

two × four =