ಹೊಸ್ಮಾರು ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರು ಸಮಾಜರತ್ನ,ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಡಾ.ಗೋವಿಂದ ಬಾಬು ಪೂಜಾರಿ ಇವರ ನೂತನ ರೆಸ್ಟೋರೆಂಟ್ ಲೋಕಾರ್ಪಣೆಗೊಳಿಸಿದರು.
ಉಪ್ಪುಂದ ಶನಿಮಂದಿರದ ಶ್ರೀ ವಿಜಯ ಪಾತ್ರಿಯವರು ಕ್ಯಾಶ್ ಕೌಂಟರ್ ಉದ್ಘಾಟಿಸಿದರು. ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ರಾಜ್ಯಧ್ಯಾಕ್ಷರಾದ ಶ್ರೀ ಬಿ.ಕೆ. ತಿಮ್ಮೇಗೌಡರು ಹಾಗೂ ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷರಾದ ಶ್ರೀ ವೇದ್ ಕುಮಾರ್ ಅವರು ಕಿಚನ್ ಉದ್ಘಾಟಿಸಿದರು. ಎಸಿ ರೆಸ್ಟೊರೆಂಟ್‌ನ್ನು ಮಾಜಿ ಶಾಸಕರಾದ ಶ್ರೀ ಕೆ. ಗೋಪಾಲ ಪೂಜಾರಿ ಅವರು ಉದ್ಘಾಟಿಸಿದರು. ಈ ಸಂದರ್ಭ ವಿವಿಧ ಅತಿಥಿ ಗಣ್ಯರು, ಹಿತೈಷಿಗಳು ಉಪಸ್ಥಿತರಿದ್ದರು.