ಬೈಂದೂರು-“ಪ್ರೀತಿ,ಸಹಬಾಳ್ವೆಯ ಪ್ರತೀಕ ಕ್ರೀಡೆ.ಇದರಿಂದ ಹಲವಾರು ಯುವಕರು ಬದುಕನ್ನು ಕಟ್ಟಿಕೊಂಡಿದ್ದಾರೆ.ಬೈಂದೂರಿನ ಗಾಂಧಿ ಮೈದಾನಕ್ಕೆ ಹಲವಾರು ವರ್ಷಗಳ ಇತಿಹಾಸವಿದ್ದು ಹಲವಾರು ಕ್ರೀಡಾಪಟುಗಳನ್ನು ರಾಷ್ಟ್ರ,ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದೆ.ಈ ಭಾಗದಲ್ಲಿ ಯಥೇಚ್ಛ ಸರಕಾರಿ ಜಾಗಗಳಿದ್ದು,ಪುರಭವನವನ್ನು ಬೇರೆಡೆಗೆ ಸ್ಥಳಾಂತರಿಸಿ,ಗಾಂಧಿ ಮೈದಾನದಲ್ಲಿ ಸುಸಜ್ಜಿತ ಸ್ಟೇಡಿಯಂ ನಿರ್ಮಿಸಿ” ಎಂದು ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಕರೆ ನೀಡಿದರು.
ಇವರು ಗಿರೀಶ್ ಬೈಂದೂರು ನೇತೃತ್ವದಲ್ಲಿ ನಡೆಯುತ್ತಿರುವ “ಗಾಂಧಿ ಮೈದಾನ ಉಳಿಸಿ” ಬೃಹತ್ ಧರಣಿ ಮತ್ತು ಪ್ರತಿಭಟನಾ ಸಭೆಯಲ್ಲಿ ಗೌತಮ್ ಶೆಟ್ಟಿ ಟೊರ್ಪೆಡೋಸ್ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖರಾದ ಗಿರೀಶ್ ಬೈಂದೂರು “ಮೊಗೇರಿ ಗೋಪಾಲಕೃಷ್ಣ ಅಡಿಗರ ಸ್ಮಾರಕ ಪುರಭವನಕ್ಕೆ ಯಾರ ವಿರೋಧವೂ ಇಲ್ಲ.ಅಡಿಗರ ಪುರಭವನ ನಿರ್ಮಾಣವಾಗುತ್ತಿರುವುದು ಸಂತೋಷದ ವಿಚಾರ,ಆದರೆ ಅದನ್ನು ಆಟದ ಮೈದಾನದಲ್ಲಿ ನಿರ್ಮಾಣ ಮಾಡುವುದು ಸೂಕ್ತವಲ್ಲ.ಇದಕ್ಕೂ ಮೀರಿ ಗಾಂಧಿ ಮೈದಾನದ ಜಾಗದಲ್ಲಿ ಪುರಭವನ ನಿರ್ಮಾಣಕ್ಕೆ ಮುಂದಾದರೆ ನಮ್ಮ ಬಳಿ ದಾಖಲೆಗಳಿದ್ದು ಕೋರ್ಟಿನ ಮೊರೆಹೋಗುತ್ತೇವೆ” ಎಂದರು.
ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಕೋಟ ರಾಮಕೃಷ್ಣ ಆಚಾರ್ “ಗಾಂಧಿ ಮೈದಾನದಲ್ಲಿ ಉಡುಪಿ ಜಿಲ್ಲೆಯಲ್ಲದೇ ರಾಜ್ಯದ ಬೇರೆ ಬೇರೆ ಜಿಲ್ಲೆಯ ಆಟಗಾರರು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದು,ಅವರೆಲ್ಲರನ್ನೂ ಈ ಹೋರಾಟದಲ್ಲಿ ಭಾಗವಹಿಸುವಂತೆ ಕರೆ ನೀಡುವುದಾಗಿ ತಿಳಿಸಿದರು.