Categories
ಕ್ರಿಕೆಟ್

ಯುಪಿ ಟಿ20 ಲೀಗ್‌ನಲ್ಲಿ ಸೂಪರ್ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಮೂಲಕ ಹೀರೋ ಆದ ರಿಂಕು ಸಿಂಗ್

ರಿಂಕು ಸಿಂಗ್ ಐರ್ಲೆಂಡ್ ವಿರುದ್ಧದ T20I ಸರಣಿಯಲ್ಲಿ ತಮ್ಮ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದರು.
ಇಂಡಿಯನ್ ಪ್ರೀಮಿಯರ್ ಲೀಗ್ 2023 ಸ್ಪರ್ಧೆಯ ಉದ್ದಕ್ಕೂ ಕೆಲವು ಅದ್ಭುತ ಪ್ರದರ್ಶನಗಳನ್ನು ಕಂಡಿತು. ಅದರಲ್ಲಿ ಅನೇಕ ಸೂಪರ್‌ಸ್ಟಾರ್‌ಗಳು ಬಂದು ತಮ್ಮಲ್ಲಿರುವ ಕೌಶಲ್ಯಗಳನ್ನು ತೋರಿಸುತ್ತಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್‌ನ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಎಲ್ಲರನ್ನೂ ಆಕರ್ಷಿಸಿದ ಅಂತಹ ಆಟಗಾರ . ಟೂರ್ನಿಯಲ್ಲಿ ಕೆಕೆಆರ್ ಪರ ಎಡಗೈ ಬ್ಯಾಟರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು . ಅವರು ವಿಶ್ವದ ಗಮನ ಸೆಳೆದ ಕೆಲವು ನಂಬಲಾಗದ ನಾಕ್‌ಗಳನ್ನು ಆಡಿದರು.
ಆ ಪ್ರದರ್ಶನವು ಅವರಿಗೆ ಭಾರತ ತಂಡಕ್ಕೆ ಅವರ ಮೊದಲ ಕರೆಯನ್ನು ತಂದುಕೊಟ್ಟಿತು  ಮತ್ತು ಐರ್ಲೆಂಡ್ ವಿರುದ್ಧದ T20I ಸರಣಿಯಲ್ಲಿ ಅವಕಾಶ ನೀಡಿದಾಗ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಫಾರ್ಮ್ ಅನ್ನು ಮುಂದುವರೆಸಿದರು. ಆದಾಗ್ಯೂ, ಎಡಗೈ ಆಟಗಾರ ನಡೆಯುತ್ತಿರುವ ಯುಪಿ ಟಿ 20 ಲೀಗ್‌ನಲ್ಲಿ ತಮ್ಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ . ರಿಂಕು ಮೀರತ್ ಮೇವರಿಕ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ, ಅಲ್ಲಿ ಅವರು ಸೂಪರ್ ಓವರ್‌ನಲ್ಲಿ ಸತತ ಮೂರು ಸಿಕ್ಸರ್‌ಗಳೊಂದಿಗೆ ಏಕಾಂಗಿಯಾಗಿ ಪಂದ್ಯವನ್ನು ಗೆದ್ದರು.
ಯುಪಿ ಟಿ20 ಲೀಗ್‌ನಲ್ಲಿ ಕಾಶಿ ರುದ್ರ ಮತ್ತು ಮೀರತ್ ಮೇವರಿಕ್ಸ್ ನಡುವೆ ರೋಚಕ ಪಂದ್ಯ ನಡೆಯಿತು .ರಿಂಕು ಸಿಂಗ್ ಸೂಪರ್ ಓವರ್‌ನಲ್ಲಿ ಮೀರತ್ ಮೇವರಿಕ್ಸ್‌ಗೆ ಜಯ ತಂದುಕೊಟ್ಟರು. ಕಾನ್ಪುರದಲ್ಲಿ ನಡೆದ ಯುಪಿ ಟಿ20 ಲೀಗ್‌ನಲ್ಲಿ ಕಾಶಿ ರುದ್ರಸ್ ವಿರುದ್ಧದ ಪಂದ್ಯ ರೋಚಕ ಟೈನಲ್ಲಿ ಕೊನೆಗೊಂಡಿತು. ಇದರಿಂದಾಗಿ ಪಂದ್ಯ ಸೂಪರ್ ಓವರ್‌ಗೆ ಹೋಯಿತು. ಕಾಶಿ ಮೊದಲು ಬ್ಯಾಟ್ ಮಾಡಿ ಸೂಪರ್ ಓವರ್‌ನಲ್ಲಿ 16 ರನ್ ಗಳಿಸಿ ಮೀರತ್‌ಗೆ ಕಠಿಣವಾಗಿಸಿದರು. ಆದರೆ ರಿಂಕು ಸಿಂಗ್ ಸತತ ಮೂರು ಸಿಕ್ಸರ್‌ಗಳೊಂದಿಗೆ ಏಕಪಕ್ಷೀಯವಾಗಿ ತನ್ನ ತಂಡಕ್ಕೆ ಗೆಲುವಿನ ಒಪ್ಪಂದವನ್ನು ಮುದ್ರೆಯೊತ್ತಿದರು. ಸ್ಪಿನ್ನರ್ ಶಿವ ಸಿಂಗ್ ಎಸೆದ ಮೊದಲ ಬಾಲ್ ಡಾಟ್ ಆಗಿತ್ತು. ಆದರೆ ನಂತರ ಅವರು ಓವರ್‌ನ ಎರಡನೇ ಎಸೆತವನ್ನು ಸಿಕ್ಸರ್-ಓವರ್ ಲಾಂಗ್-ಆಫ್‌ಗೆ ಸ್ಮ್ಯಾಶ್ ಮಾಡಿದರು. ಮೂರನೇ ಎಸೆತವು ಫುಲ್-ಟಾಸ್ ಆಗಿತ್ತು, ಅದು ಲೆಗ್ ಸೈಡ್‌ಗೆ ಸಿಕ್ಸರ್‌ಗೆ ಠೇವಣಿಯಾಯಿತು. ನಾಲ್ಕನೇ ಎಸೆತದಲ್ಲಿ ಅವರು ಮತ್ತೊಂದು ಸಿಕ್ಸರ್ ಹೊಡೆದು ಆಟ ಮುಗಿಸಿದರು.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಉಭಯ ತಂಡಗಳು 20 ಓವರ್‌ಗಳಲ್ಲಿ ಕ್ರಮವಾಗಿ 181 ರನ್‌ ಗಳಿಸಿದ್ದವು.  ಈ ಪಂದ್ಯದ ಫಲಿತಾಂಶವನ್ನು ಸೂಪರ್ ಓವರ್ ಮೂಲಕ ನಿರ್ಧರಿಸಲಾಯಿತು. ಸೂಪರ್ ಓವರ್‌ನಲ್ಲಿ, ಮೀರತ್ ಮೇವರಿಕ್ಸ್ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ   ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. UPT20 ನ ಐತಿಹಾಸಿಕ ಮೊದಲ ಆವೃತ್ತಿಯಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ ಮೀರತ್ ಮೇವರಿಕ್ಸ್  ಸೂಪರ್ ಓವರ್ ಥ್ರಿಲ್ಲರ್‌ನಲ್ಲಿ ಕಾಶಿ ರುದ್ರರನ್ನು ಸೋಲಿಸಿ ಸ್ಮರಣೀಯ ವಿಜಯವನ್ನು ಪಡೆದಿದೆ. ಸೂಪರ್ ಓವರ್‌ನಲ್ಲಿ 17 ರನ್‌ಗಳನ್ನು ಬೆನ್ನಟ್ಟಿದ ಮೀರತ್ ಮೇವರಿಕ್ಸ್‌ನ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಕಾಶಿ ರುದ್ರಸ್‌ಗೆ ಸತತ ಮೂರು ಸಿಕ್ಸರ್‌ಗಳನ್ನು ಹೊಡೆದರು. ರಿಂಕು ಸಿಂಗ್ ಅವರ ಈ ಹೊಡೆತವು ಗುಜರಾತ್ ಟೈಟಾನ್ಸ್ ವಿರುದ್ಧದ ಅವರ ಪರಾಕ್ರಮವನ್ನು ಅನೇಕ ಅಭಿಮಾನಿಗಳಿಗೆ ನೆನಪಿಸಿತು, ಅಲ್ಲಿ ಅವರು ಯಶ್ ದಯಾಲ್ ಅವರ ಐದು ಸತತ ಸಿಕ್ಸರ್‌ಗಳನ್ನು ಹೊಡೆದು KKR ಗೆ ಅವರ ಕೊನೆಯ ಐದು ಎಸೆತಗಳಲ್ಲಿ 29 ರನ್‌ಗಳ ಅಗತ್ಯವಿದ್ದಾಗ ಅದ್ಭುತ ಗೆಲುವು ಸಾಧಿಸಿದ್ದರು.
 ರಿಂಕು ಸಿಂಗ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ರಿಂಕು ಸಿಂಗ್ ಅವರ ಸ್ಫೋಟಕ ಮುಕ್ತಾಯವು ಯುಪಿಟಿ 20 ನಲ್ಲಿ ಕಾಶಿ ರುದ್ರಸ್ ವಿರುದ್ಧ ಮೀರತ್ ಮೇವರಿಕ್ಸ್‌ಗೆ ಜಯ ತಂದಿದೆ . ತಂಡಕ್ಕೆ ಸ್ಮರಣೀಯ ಜಯ ತಂದು ಗೆಲುವಿನ ಹೀರೋ ಆದ ರಿಂಕು ಸಿಂಗ್ ಇಂತಹ ಪರಿಸ್ಥಿತಿಯಲ್ಲಿ ಸತತ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್ ಬಾರಿಸಿದ  ರಿಂಕು ಸಿಂಗ್ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ನಿರಂತರವಾಗಿ ನೀಡುತ್ತಿದ್ದಾರೆ.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ.
Categories
ಕ್ರಿಕೆಟ್

ಮಂಗಳಾಪುರ ಟ್ರೋಫಿ 2023 ಜಿ.ಎಸ್.ಬಿ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಕೂಟ

ಟೀಮ್ ಮಂಗಳಾಪುರ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ಮಂಗಳೂರಿನಲ್ಲಿ ಮಂಗಳಾಪುರ ಟ್ರೋಫಿ 2023 ಎಂಬ ಜಿ ಎಸ್ ಬಿ   ಕ್ರಿಕೆಟ್ ಪಂದ್ಯಾಕೂಟ ಅಕ್ಟೋಬರ್ 28 ಮತ್ತು 29ರಂದು ಮಂಗಳೂರಿನ ಊರ್ವ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. ಇದು ಜಿ ಎಸ್ ಬಿ ಗಳ ಹರಾಜು ಆಧಾರಿತ ಪಂದ್ಯಾಕೂಟವಾಗಿದ್ದು 10 ತಂಡಗಳು ಈ ಪಂದ್ಯಾಕೂಟಕ್ಕೆ ತಮ್ಮ ನೊಂದಣಿಯನ್ನು ಮಾಡಿವೆ.
ಮಂಗಳಾಪುರ ಟ್ರೋಫಿ 2023 ಗಾಗಿ ಭಾಗವಹಿಸುವ ತಂಡಗಳ ಹೆಸರುಗಳು ಈ ರೀತಿ ಇವೆ:
1.ಡೆಡ್ಲಿ ಪ್ಯಾಂಥರ್ಸ್ ®️
2.ಸಪ್ತಮಿ ವಾರಿಯರ್ಸ್
3.ಮಂಜುಳೇಶ ಕ್ರಿಕೆಟರ್ಸ್
4. ರೈಸಿಂಗ್ ಸ್ಟಾರ್ಸ್ ಮಂಗಳೂರು
5. ಜಿಎಸ್‌ಬಿ ಗರುಡಾಸ್
6. ಕಾರ್ತಿಕ್ Xl
7. ಆಶ್ರಯ ಯುನೈಟೆಡ್
8. ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್
9. ಆರ್ ಕೆ ಸ್ಟ್ರೈಕರ್ಸ್
10.TC ಸ್ಕಾರ್ಚರ್ಸ್
ಜಿ ಎಸ್ ಬಿ ಸಮುದಾಯಕ್ಕೆ  ಸೇರಿದ ಆಟಗಾರರಿಗೆ ಮಾತ್ರ ಆಡಲು ಅವಕಾಶವಿರುವ ಈ ಪಂದ್ಯಾಕೂಟದಲ್ಲಿ ಆಟಗಾರರ ನೋಂದಣಿಗಳು ಈಗ ತೆರೆದಿವೆ!
ನಾಲ್ಕನೇ  ಆವೃತ್ತಿಯ   ಕ್ರಿಕೆಟ್ ಪಂದ್ಯಾಕೂಟಕ್ಕೆ  ಪೂರ್ವ ಸಿದ್ಧತಾ ಕಾರ್ಯಕ್ರಮ ಆಯೋಜಕರು ನಡೆಸುತ್ತಿದ್ದು ಸಮುದಾಯದ ಯುವ ಸಮೂಹವನ್ನು ಒಂದುಗೂಡಿಸಿ ಸಾಗುತ್ತಿರುವ ಕಾರ್ಯ ಅದ್ಭುತವಾಗಿದೆ. ಟೂರ್ನಿ ಯಶಸ್ವಿಯಾಗಲಿ ಎಂಬ ಹಾರೈಕೆ.
ಸುರೇಶ್ ಭಟ್ ಮೂಲ್ಕಿ
ಟೀಮ್ ಸ್ಪೋರ್ಟ್ಸ್ ಕನ್ನಡ
( ನೇರ ಪ್ರಸಾರಕ್ಕಾಗಿ ನಮ್ಮ ಸ್ಪೋರ್ಟ್ಸ್ ಕನ್ನಡ  ಚಾನಲನ್ನು ಸಂಪರ್ಕಿಸಿ : 6363022576-9632178537 )
Categories
ಕ್ರಿಕೆಟ್

ಮಂಗಳೂರಿನಲ್ಲಿ ಪ್ಯಾಂಥರ್ಸ್ ಸೂಪರ್ ಲೀಗ್ ಸೀಸನ್ 2

ಡೆಡ್ಲಿ ಪ್ಯಾಂಥರ್ಸ್ ರಿಜಿಸ್ಟರ್ಡ್ ಕೊಡಿಯಾಲ್ ನೇತೃತ್ವದಲ್ಲಿ ಜಿ ಎಸ್ ಬಿ ಸಮಾಜ ಬಾಂಧವರಿಗಾಗಿ  ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಕೂಟ ಡಿಸೆಂಬರ್ 22 ಶುಕ್ರವಾರ, 23 ಶನಿವಾರ ಮತ್ತು 24 ಆದಿತ್ಯವಾರದಂದು ಮಂಗಳೂರು ಊರ್ವ ಮೈದಾನದಲ್ಲಿ ನಡೆಯಲಿದೆ.
ಸತತ ಮೂರು ದಿನಗಳ ಕಾಲ ಹಗಲು ರಾತ್ರಿಯಲ್ಲಿ ನಡೆಯುವ 16 ತಂಡಗಳ ನಡುವಿನ ಈ ಪಂದ್ಯಾವಳಿ ಹರಾಜು ಆಧಾರಿತ ಓವರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ ಆಗಿರುತ್ತದೆ. ಅತ್ಯುತ್ತಮ ಗುಣಮಟ್ಟದಲ್ಲಿ ಆಯೋಜಿಸಲಾಗುವ ಈ ಪಂದ್ಯಾವಳಿ ಸಮಾಜದ ಕ್ರಿಕೆಟ್ ಆಟಗಾರರ ಬಾಂಧವ್ಯ ಹಾಗೂ ಕ್ರೀಡಾ ಸ್ಫೂರ್ತಿಯ ಹಲವಾರು ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಲಿದೆ.
ಪ್ಯಾಂಥರ್ಸ್ ಸೂಪರ್ ಲೀಗ್ ಸೀಸನ್ 2 ರಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಯಲ್ಲಿ ಭಾಗವಹಿಸುವ  ತಂಡಗಳು ಈ ಕೆಳಗಿನಂತಿವೆ.
1. ವೀರ ವೆಂಕಟೇಶ ವಾರಿಯರ್ಸ್
2. ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್
3. ಸಪ್ತಮಿ ವಾರಿಯರ್ಸ್
4. ಮಲ್ಪೆ ಯುನೈಟೆಡ್
5. ಆರ್ ಕೆ ಸ್ಟ್ರೈಕರ್ಸ್
6. ರೈಸಿಂಗ್ ಸ್ಟಾರ್ಸ್ ಮಂಗಳೂರು
7. ಟೀಮ್ ಮಂಗಳಾಪುರ
8.ಕೊಡಿಯಾಲ್ ಸೂಪರ್ ಕಿಂಗ್ಸ್
9. ಎಂಜಾಯ್ ಟೈಟಾನ್ಸ್
10.ಕಿಂಗ್ಸ್ ಇಲೆವೆನ್ ಉಳ್ಳಾಲ
11. ಟಿ ಸಿ ಸ್ಕಾರ್ಚರ್ಸ್
12.ವೀರಾಂಜನೇಯ ಕ್ರಿಕೆಟರ್ಸ್ ಕಾಪು
13.ರಾಯಲ್ ಚಾಲೆಂಜರ್ಸ್ ಬಳ್ಳಂಬೆಟ್ಟು
14. ಆಶ್ರಯ ಯುನೈಟೆಡ್
15.ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್
16.  ಗೋಲ್ಡನ್ ಗರುಡಾಸ್ ಗೋಶ್ರೀಪುರಂ
ಆಟಗಾರರ ಆಯ್ಕೆ ಪ್ರಕ್ರಿಯೆ ಬಿಡ್ಡಿಂಗ್ ಮುಖಾಂತರ ಆಯಾ ತಂಡದ ನಾಯಕರು ಹಾಗೂ ಮಾಲಕರ ಸಮ್ಮುಖದಲ್ಲಿ ನಡೆಸಲಾಗುವುದು. ಜಿ ಎಸ್ ಬಿ ಸಮಾಜಕ್ಕೆ ಸೇರಿದ ಆಟಗಾರರಿಗೆ ಮಾತ್ರ  ಆಡಲು ಅವಕಾಶವಿರುವ ಈ ಪಂದ್ಯಾಕೂಟದಲ್ಲಿ, ಓರ್ವ ಅಟಗಾರನನ್ನು ಐಕಾನ್ ಆಟಗಾರರನ್ನಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ರಾಜ್ಯದ 16 ತಂಡಗಳು ಭಾಗವಹಿಸುತ್ತಿದ್ದು, ಪ್ರಥಮ ವಿಜೇತ ತಂಡ ರೂ. 1,00,001ಮತ್ತು ಶಾಶ್ವತ ಫಲಕ, ದ್ವಿತೀಯ ಸ್ಥಾನಿ ರೂ. 50,001 ನಗದು ಮತ್ತು ಶಾಶ್ವತ ಫಲಕ ಪಡೆಯಲಿದೆ.  ತೃತೀಯ ಸ್ಥಾನ ಪಡೆದುಕೊಳ್ಳುವ ತಂಡಕ್ಕೂ ಕೂಡ ನಗದು ಹಾಗೂ ಶಾಶ್ವತ ಫಲಕ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. ಇವಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿ ,ಸರಣಿ ಶ್ರೇಷ್ಠ ಪ್ರಶಸ್ತಿ, ಪಂದ್ಯಾಕೂಟದ ಅತ್ಯುತ್ತಮ ದಾಂಡಿಗ ಹಾಗೂ ಅತ್ಯುತ್ತಮ ಎಸೆತಗಾರ ಪುರಸ್ಕತರಿಗೆ  ಪ್ರಶಸ್ತಿ ದೊರಕಲಿದೆ.
ನೆಮ್ಮದಿಯ ವಾತಾವರಣ ಹಾಗೂ ಶಾಂತಿ ಸಹಬಾಳ್ವೆಗೆ ಸಮಾಜ ಭಾಂಧವರನ್ನು ಒಗ್ಗೂಡಿಸಲು ಕ್ರಿಕೆಟ್ ಒಂದು ಉತ್ತಮ ಕ್ರೀಡೆ . ಈ ಮೂಲಕ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಕೂಡ ಪ್ಯಾಂಥರ್ಸ್ ಸೂಪರ್ ಲೀಗ್ ಕ್ರಿಕೆಟ್ ಸಹಕಾರಿಯಾಗಲಿದೆ.
-ಸುರೇಶ್ ಭಟ್ ಮುಲ್ಕಿ
ಟೀಮ್ ಸ್ಪೋರ್ಟ್ಸ್ ಕನ್ನಡ
ಮೊ: 98454 83433
( ನೇರ ಪ್ರಸಾರಕ್ಕಾಗಿ ನಮ್ಮ ಸ್ಪೋರ್ಟ್ಸ್ ಕನ್ನಡ  ಚಾನಲನ್ನು ಸಂಪರ್ಕಿಸಿ : 6363022576-9632178537 )
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಕ್ರಿಕೆಟ್ ಭರವಸೆಯ ಬೆಳಕು

ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ವೈಷ್ಣವಿ ಕಡಿಯಾಳಿ

ವೈಷ್ಣವಿ ಆಚಾರ್ಯ ಕಡಿಯಾಳಿ ಎನ್ನುವ ಉಡುಪಿ  ಮೂಲದ ಹುಡುಗಿ  ಬೆಂಗಳೂರಿನ ಜಸ್ಟ್ ಕ್ರಿಕೆಟ್  ಅಕಾಡೆಮಿಯಲ್ಲಿ ಕ್ರಿಕೆಟ್  ತರಬೇತಿಯನ್ನು ಪಡೆಯುತ್ತಿದ್ದು ಬೌಲಿಂಗ್ ನಲ್ಲಿ ಮಿಂಚುತ್ತಿದ್ದಾರೆ.
ಬೆಂಗಳೂರು ಓಕೆಶನಲ್ಸ್  ತಂಡದ ಪರವಾಗಿ ಆಡುವ ಇವರು  ಬೌಲಿಂಗ್ ನಲ್ಲಿ ತಮ್ಮ ತಂಡಕ್ಕೆ ಪ್ರಧಾನ ಆಧಾರಸ್ತಂಭವಾಗಿದ್ದಾರೆ. ಇತ್ತೀಚೆಗೆ ಕೆ ಎಸ್ ಸಿ ಎ  ಆಯೋಜಿಸಿದ  ಜೆಎಸ್ಎಸ್  ಮೈದಾನದಲ್ಲಿ ನಡೆದ ಪಂದ್ಯಾಕೂಟದಲ್ಲಿ ಅತ್ಯುತ್ತಮವಾದ ಬೌಲಿಂಗ್ ದಾಳಿಯನ್ನು ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.
ಮಿನರ್ವ ತಂಡದ ವಿರುದ್ಧ ಮೊದಲ ಲೀಗ್ ಪಂದ್ಯದಲ್ಲಿ  ತಾನು ಎಸೆದಂತ 6 ಓವರುಗಳಲ್ಲಿ 33ಕ್ಕೆ ಐದು ವಿಕೆಟ್  ಪಡೆದುಕೊಂಡು ಅತ್ಯುತ್ತಮ ಬೌಲರ್ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ತಾನು ಆಡಿದ ಎರಡನೇ ಪಂದ್ಯದಲ್ಲಿ  3 ಓವರುಗಳಲ್ಲಿ ಒಂದು ವಿಕೆಟ್ ಪಡಕೊಂಡು ವಿಜಯದ ರೂವಾರಿಯೂ ಈಕೆ ಆಗಿದ್ದಾರೆ. ಮೂರನೇ ಪಂದ್ಯದಲ್ಲಿ ನಿಯಂತ್ರಣಕಾರಿ ಬೌಲಿಂಗ್ ನಡೆಸಿದ್ದರು. ಬೆಂಗಳೂರು ಓಕೆಶನಲ್ಸ್ ನ್ನು ಪ್ರತಿನಿಧಿಸುವ ವೈಷ್ಣವಿ  ಕಡಿಯಾಳಿಯವರ ತಂಡ  ಇದೀಗ ನಾಕೌಟ್ ಸುತ್ತಿಗೆ ಅರ್ಹತೆ ಪಡೆದಿದೆ. ತಮ್ಮ ತಂಡವನ್ನುಈ ಹಂತದ ವರೆಗೆ ಕರೆದೊಯ್ದ ಕೀರ್ತಿ ವೈಷ್ಣವಿ ಗೆ ಸಲ್ಲುತ್ತದೆ.
ಇಷ್ಟೇ ಅಲ್ಲದೆ  ಪ್ರಸ್ತುತ ಸನ್ನಿವೇಶದಲ್ಲಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಯುವ ಸೆಲೆಕ್ಷನ್ ಟ್ರಯಲ್ಸ್ ಫಾರ್ ಅಂಡರ್ 19 ಗೆ ಸಿದ್ದತೆಯನ್ನು ನಡೆಸುತ್ತಿದ್ದಾರೆ.
ಈ ಮೊದಲು ಕಟಪಾಡಿಯ ಕೆ ಆರ್ ಎಸ್ ಅಕಾಡೆಮಿ ಮತ್ತು ಉಡುಪಿ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ತರಬೇತಿಯನ್ನು ಪಡೆಯುತ್ತಿದ್ದ ವೈಷ್ಣವಿ ಕಡಿಯಾಳಿ ಅವರ ಪ್ರತಿಭೆಯನ್ನು  ಶಾಲಾ ಮತ್ತು ಸ್ಥಳೀಯ ಕ್ರೀಡಾಕೂಟಗಳಲ್ಲಿ ಗಮನಿಸಲಾಯಿತು. ಕ್ರಿಕೆಟ್ ನತ್ತ ಪ್ರೇರಣೆ ಪಡೆದು  ಕ್ರೀಡಾ ವೃತ್ತಿಯನ್ನು ತೆಗೆದುಕೊಳ್ಳುವ ಮೂಲಕ ತನ್ನ ಕೌಶಲ್ಯವನ್ನು ಸಾಬೀತು ಪಡಿಸಲು ಬೆಂಗಳೂರಿನ ಜಸ್ಟ್ ಕ್ರಿಕೆಟ್  ಅಕಾಡೆಮಿ ಸೇರಿ ವೃತ್ತಿಪರ ತರಬೇತಿಯನ್ನು  ಬೌಲಿಂಗ್ ಕೋಚ್ ಆದ ಮೊಹಮ್ಮದ್ ಆಲಿ ಮತ್ತು ನೂರುದ್ದೀನ್ ಇವರುಗಳ ಮಾರ್ಗದರ್ಶನದಡಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.  ತನ್ನ ಕನಸನ್ನು ಸಾಧಿಸಲು ತನ್ನ ತನ್ಮನಗಳನ್ನು ಸಮರ್ಪಿಸಿ ನಿಯಮಿತ  ಅಭ್ಯಾಸವನ್ನು ನಡೆಸಿ ತನ್ನ ಕನಸನ್ನು ಮುಂದುವರೆಸುತ್ತಿದ್ದಾರೆ.
ವೈಷ್ಣವಿ ಕಡಿಯಾಳಿ ಎನ್ನುವ ಪ್ರತಿಭೆ ಇದೇ ರೀತಿ ಮುಂದುವರೆದು ಶ್ಲಾಘನೀಯ ಪ್ರದರ್ಶನ ನೀಡಿ ಉಡುಪಿಯನ್ನು ಹೆಮ್ಮೆಪಡುವಂತೆ ಮಾಡಲಿ.
Categories
ಕ್ರಿಕೆಟ್

ಮಹಾರಾಜ ಟ್ರೋಫಿ ಚಾಂಪಿಯನ್ ಪಟ್ಟಕ್ಕೇರಿದ ಹುಬ್ಬಳ್ಳಿ ಟೈಗರ್ಸ್

ಮಹಾರಾಜ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ ಮೈಸೂರ್ ವಾರಿಯರ್ಸ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಟ ನಡೆಸಿದವು.
ಚಿನ್ನಸ್ವಾಮಿಯ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಮಹಾ ಫೈನಲ್ ನ ಸೆಣಸಾಟದಲ್ಲಿ ಮೈಸೂರ್ ವಾರಿಯರ್ಸ್  ವಿರುದ್ಧ ಹುಬ್ಬಳ್ಳಿ ಟೈಗರ್ಸ್  ತಂಡ ಗೆದ್ದು ಜಯಭೇರಿ ಬಾರಿಸಿದೆ. ದಿಟ್ಟ ಹೋರಾಟ ತೋರಿಸಿದ  ಮೈಸೂರ್ ವಾರಿಯರ್ಸ್  8 ರನ್‌ಗಳ ಅಂತರದಿಂದ ಸೋಲನ್ನೊಪ್ಪಿ ರನ್ನರ್ ಅಪ್ ಗೆ ತೃಪ್ತಿಪಡಬೇಕಾಯಿತು.
ಮೊದಲು ಬ್ಯಾಟಿಂಗ್ ಮಾಡಿದ  ಹುಬ್ಬಳ್ಳಿ  ಟೈಗರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ  204 ರನ್‌ಗಳ ಗುರಿ  ಮೈಸೂರ್ ವಾರಿಯರ್ಸ್ ಗೆ ನೀಡಿತು. ಈ ಗುರಿ ಬೆನ್ನಟ್ಟಿದ ಮೈಸೂರ್ ವಾರಿಯರ್ಸ್ ಉತ್ತಮ ಆರಂಭವನ್ನು ಪಡಕೊಂಡು ಮೊದಲ ವಿಕೆಟ್‌ಗೆ 57 ರನ್‌ಗಳ ಜೊತೆಯಾಟ ಬಂದಿತ್ತು. ಆರಂಭಿಕ ಆಟಗಾರ ಆರ್ ಸಮರ್ಥ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 63 ರನ್‌ಗಳನ್ನುಗಳಿಸಿದರು.  ನಾಯಕ ಕರುಣ್ ನಾಯರ್ ಮತ್ತೊಮ್ಮೆ  ಆರ್ಭಟ ತೋರುವ ಸೂಚನೆ ನೀಡಿದ್ದರು. ಆದರೆ 20 ಎಸೆತಗಳ ಮುಂದೆ 37 ರನ್‌ಗಳಿಸಿದ್ದ ಸಂದರ್ಭ  ಕರಿಯಪ್ಪ  ಔಟ್ ಮಾಡುವಲ್ಲಿ ಯಶಸ್ವಿಯಾದರು. ಕೆಳ ಕ್ರಮಾಂಕದ ಬ್ಯಾಟರ್ಸ್ ಗಳಿಂದ ನಿರೀಕ್ಷಿತ ಪ್ರದರ್ಶನ ಬಾರದೇ ಇದ್ದ ಕಾರಣ ವಾರಿಯರ್ಸ್  ದಾಂಡಿಗರು ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಬೇಕಾಯಿತು. ಅಂತಿಮವಾಗಿ  ಕೊನೆಯ ಓವರ್‌ವರೆಗೂ ಸಾಗಿದ  ರಣರೋಚಕ ಕದನದಲ್ಲಿ  ಮೈಸೂರ್ ವಾರಿಯರ್ಸ್  8 ರನ್‌ಗಳ  ಹಿನ್ನಡೆಯಿಂದಾಗಿ  ಮನೀಶ್ ಪಾಂಡೆ ನೇತೃತ್ವದ  ಹುಬ್ಬಳ್ಳಿ ಟೈಗರ್ಸ್  ಮಹಾರಾಜ ಟ್ರೋಫಿ 2023ರ ಚಾಂಪಿಯನ್ ಆಗಿ  ಹೊರಹೊಮ್ಮುವಂತಾಯಿತು.
ಕರುಣ್ ನಾಯರ್ ನೇತೃತ್ವದ ಮೈಸೂರ್ ವಾರಿಯರ್ಸ್ ತಂಡ ಸೆಮಿಫೈನಲ್‌ನಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು 36 ರನ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಕರುಣ್ ನಾಯರ್ ಅವರ ಸ್ಪೋಟಕ ಶತಕದಿಂದಾಗಿ ಸೆಮಿಫೈನಲ್‌ನಲ್ಲಿ ಭಾರೀ ಅಂತರದಿಂದ ಜಯಗಳಿಸಿತ್ತು. ಮತ್ತೊಂದೆಡೆ ಹುಬ್ಬಳ್ಳಿ ಟೈಗರ್ಸ್ ತಂಡ ಶಿವಮೊಗ್ಗ ತಂಡದ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶ ಪಡೆದುಕೊಂಡಿತ್ತು  ಫೈನಲ್‌ ಕಣಕ್ಕಿಳಿದಿದ್ದಎರಡೂ ತಂಡಗಳು ಕೂಡ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ ತಂಡಗಳಾಗಿದ್ದರಿಂದ ಕೊನೆಯ ಓವರ್‌ವರೆಗೂ ಜಿದ್ದಾಜಿದ್ದಿನ ಕದನ ನಡೆದಿತ್ತು.  ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್ ತಂಡ 8 ರನ್‌ಗಳ ಅಂತರದಿಂದ ಗೆದ್ದು ಚಾಂಪಿಯನ್ ಅನಿಸಿಕೊಂಡಿತು.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಭೋಸ್ ಆರ್ಮಿ- ಇಂಡಿಪೆಂಡೆನ್ಸ್ ಡೇ ಟ್ರೋಫಿ ಸೀಸನ್ 4 ಚಾಂಪಿಯನ್ಸ್

ಕುಂದಾಪುರ-ಇಲ್ಲಿನ ಗಾಂಧಿ ಮೈದಾನ ಕ್ರಿಕೆಟ್ ಕಾಶಿ ಎಂದೇ ಹೆಸರುವಾಸಿಯಾದಂತ ತಾಣ. ಇಲ್ಲಿ ಆಗಸ್ಟ್ 20,  2023 ರ ಭಾನುವಾರ ಗಾಂಧಿ ಮೈದಾನದಲ್ಲಿ ಪ್ರತಿ ದಿ‌ನ  ಆಡುವ  ಆಟಗಾರರಿಗೆ ಮೀಸಲಾದ  ಕ್ರಿಕೆಟ್ ಪಂದ್ಯಾಕೂಟವು ನಡೆಯಿತು.ಭಾರತದ 77 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ  ನಾಲ್ಕನೇಯ  ಆವೃತ್ತಿಯ “ಇಂಡಿಪೆಂಡೆನ್ಸ್ ಡೇ ಟ್ರೋಫಿ ಸೀಸನ್ 4” ಆಯೋಜಿಸಲಾಗಿತ್ತು.
ಲೀಗ್ ಕಮ್ ನಾಕೌಟ್ ಮಾದರಿಯ 6 ಓವರುಗಳ ಈ ಪಂದ್ಯಾಕೂಟದಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿ ಒಟ್ಟು 5 ತಂಡಗಳಿದ್ದವು.  ಭಗತ್ ಸಿಂಗ್ ವಾರಿಯರ್ಸ್,ನೇತಾಜಿ ವಾರಿಯರ್ಸ್, ರಾಯಣ್ಣ ವಾರಿಯರ್ಸ್, ಬೋಸ್ ಆರ್ಮಿ ಮತ್ತು ಸುಖದೇವ್ ವಾರಿಯರ್ ಎನ್ನುವ ಐದು ತಂಡಗಳನ್ನು ಈ ಟೂರ್ನಮೆಂಟ್ ಕೂಡಿತ್ತು. ಆಯಾ ತಂಡಗಳನ್ನು ಹುರಿದುಂಬಿಸಲು ಆಟದ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು.ಬೋಸ್ ಆರ್ಮಿ ಹಾಗೂ  ರಾಯಣ್ಣ ವಾರಿಯರ್ಸ್ ಈ ಎರಡು ತಂಡಗಳ ನಡುವಿನ ಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.  ಆದ್ದರಿಂದ  ಪಂದ್ಯಾವಳಿಯ ವಿಜೇತರನ್ನು ನಾಣ್ಯ ಟಾಸ್ ಮೂಲಕ ಆಯ್ಕೆ ಮಾಡಲಾಯಿತು. ಪ್ರಶಸ್ತಿ ಪ್ರಧಾನ ಸಂದರ್ಭ  ಚಾಂಪಿಯನ್ ಎಂದು ಘೋಷಿಸಲಾದ ದಿನೇಶ್ ಮದ್ದುಗುಡ್ಡೆ ಸಾರಥ್ಯದ ಬೋಸ್ ಆರ್ಮಿ ತಂಡಕ್ಕೆ ಇಂಡಿಪೆಂಡೆನ್ಸ್ ಡೇ ಟ್ರೋಫಿ ಸೀಸನ್ 4 ನ್ನು  ಹಸ್ತಾಂತರಿಸಲಾಯಿತು.
ಫೈನಲ್‌ನಲ್ಲಿ ಅಕ್ಷಯ್ ಆಚಾರ್ ಪಂದ್ಯಶ್ರೇಷ್ಠ ಪ್ರಶಸ್ತಿ, ರಾಘು (ರಾಘವೇಂದ್ರ) ಗೋಲ್ಡನ್ ಮಿಲ್ಲರ್ ಪಂದ್ಯಾವಳಿಯ ಬೆಸ್ಟ್ ಬ್ಯಾಟ್ಸ್‌ಮನ್, ದಿನೇಶ್ ಮದ್ದುಗುಡ್ಡೆ ಪಂದ್ಯಾವಳಿಯ ಬೆಸ್ಟ್ ಬೌಲರ್, ನಾಗೇಶ ನಾವಡ ಬೆಸ್ಟ್ ಫೀಲ್ಡರ್, ಯೋಗೀಶ್ ಗೋಲ್ಡನ್ ಮಿಲ್ಲರ್ ಬೆಸ್ಟ್ ವಿಕೆಟ್ ಕೀಪರ್ ಮತ್ತು ಸರಣಿ ಶ್ರೇಷ್ಠ ಆಟಗಾರನಾಗಿ ಅಕ್ಷಯ್ ಆಚಾರ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರೆ,ನೋಲನ್ ಭರವಸೆಯ ಯುವ ಆಟಗಾರನಾಗಿ ಮೂಡಿ ಬಂದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸ್ಪೋರ್ಟ್ಸ್ ಕನ್ನಡ  ಸಂಪಾದಕರಾದ ಕೋಟ ರಾಮಕೃಷ್ಣ ಆಚಾರ್ “ಯುವಕರು ಕ್ರೀಡಾಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಬೇಕಾದರೆ ಹಿರಿಯರ ಮಾರ್ಗದರ್ಶನ ಅತ್ಯಗತ್ಯ” ಎಂದರು.
ಬಹುಮಾನ ವಿತರಣಾ ಸಮಾರಂಭದಲ್ಲಿ  ಅತಿಥಿಗಳಾಗಿ ಮನೋಜ್ ನಾಯರ್, ಸಂತೋಷ್ ಪೂಜಾರಿ ಮೂಡ್ಲಕಟ್ಟೆ,ನಾಗೇಶ ನಾವಡ, ಶ್ರೀಧರ್ ಸುವರ್ಣ ,ರಾಜು ಬನ್ಸಾಲೆ,ವಿಶ್ವಾಸ್ ಶೆಟ್ಟಿ  ಭಾಗವಹಿಸಿದ್ದರು.
ನಿತೇಶ್ ಗೋಲ್ಡನ್ ಮಿಲ್ಲರ್ ಕಾರ್ಯಕ್ರಮ ನಿರೂಪಿಸಿದರು.
ಸತತ ನಾಲ್ಕನೇ ವರ್ಷ ಸನತ್ ಆಚಾರ್ಯ ಮತ್ತು ಅಕ್ಷಯ್ ಅವರ ಮುಂದಾಳುತ್ವದಲ್ಲಿ  ಅವರ ಸ್ನೇಹಿತರ ಬಳಗ ಮತ್ತು ಗಾಂಧಿ ಮೈದಾನದ ಆಟಗಾರರ ಎಲ್ಲಾ ಸದಸ್ಯರ ಬೆಂಬಲದೊಂದಿಗೆ ಟೂರ್ನಮೆಂಟ್ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಎಲ್ಲಾ ತಂಡಗಳ ಆಟಗಾರರು ಕ್ರೀಡಾ ಸ್ಫೂರ್ತಿಯನ್ನು ಮೆರೆದು ಗಾಂಧಿ ಮೈದಾನದ ಕ್ರಿಕೆಟನ್ನು ಶಾಶ್ವತವಾಗಿ ಚಿರಕಾಲ ಇರುವಂತೆ ಮಾಡಿದರು. ನೆರೆದಿದ್ದವರೆಲ್ಲರೂ ಈ ಕ್ರಿಕೆಟ್ ಪಂದ್ಯಾವಳಿಯನ್ನು ಅತ್ಯಂತ ಉತ್ಸಾಹದಿಂದ ಆನಂದಿಸಿದರು.
ಸ್ಟಾರ್ ವರ್ಟೆಕ್ಸ್ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ಪಂದ್ಯಾವಳಿಯ  ನೇರ ಪ್ರಸಾರವನ್ನು ಪ್ರಸ್ತುತಪಡಿಸಿತು. ನೇರಪ್ರಸಾರ ಕಾರ್ಯಕ್ರಮ ಕಣ್ಮನ ಸೆಳೆಯುವಂತಿದ್ದು ಎಲ್ಲರೂ ಉತ್ಸಾಹದಿಂದ ಕಾಣುವಂತಾಯಿತು. ಕುಂದಾಪುರದ ಗಾಂಧಿ ಮೈದಾನದಲ್ಲಿ ಮೊದಲ ಬಾರಿಗೆ ಸ್ಪೋರ್ಟ್ಸ್ ಕನ್ನಡಕ್ಕೆ ನೇರಪ್ರಸಾರ ಮಾಡಲು ಅವಕಾಶ ನೀಡಿದ ಪಂದ್ಯಾವಳಿಯ ಆಯೋಜಕರಿಗೆ ಟೀಮ್ ಸ್ಪೋರ್ಟ್ಸ್ ಕನ್ನಡ ಧನ್ಯವಾದಗಳನ್ನು ಅರ್ಪಿಸುತ್ತದೆ.
Categories
ಭರವಸೆಯ ಬೆಳಕು ಸ್ಪೋರ್ಟ್ಸ್

ಚೆಸ್ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟ ಪ್ರಗ್ನಾನಂದ್

ಭಾರತದ ಭರವಸೆಯ ಯುವ ಚೆಸ್ ಆಟಗಾರ ಆರ್.ಪ್ರಗ್ನಾನಂದ ಅವರು ಚೆಸ್ ವಿಶ್ವಕಪ್ ಫೈನಲ್‌ಗೆ ತಲುಪಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮಾಸ್ಟರ್​ ಗೇಮ್​ ಚೆಸ್​ನಲ್ಲಿ ತಮಿಳುನಾಡಿನ 16 ರ ಹರೆಯದ ಹುಡುಗ ಜೂನಿಯರ್ ಗ್ರಾಂಡ್ ಮಾಸ್ಟರ್  ಆರ್​  ಪ್ರಗ್ನಾನಂದ್​ ವಿಶ್ವ ಚಾಂಪಿಯನ್​ ನಾರ್ವೆಯ ಮ್ಯಾಗ್ನಸ್​ ಕಾರ್ಲ್‌ಸನ್​ರನ್ನು ಮತ್ತೊಮ್ಮೆ ಸೋಲಿಸುವ ಮೂಲಕ 6 ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ಶಾಕ್​ ನೀಡಿದ್ದಾರೆ.
ಆರ್ ಪ್ರಗ್ನಾನಂದ್ ರ  ಗೆಲುವನ್ನು ಚೆಸ್ ಲೋಕ ಸಂಭ್ರಮಿಸಿದೆ. ಸೆಮಿಫೈನಲ್‌ನಲ್ಲಿ ಪ್ರಗ್ನಾನಂದನ್ ಅವರು ಟೈಬ್ರೇಕರ್‌ನಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಅವರನ್ನು 3.5-2.5 ರಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಪ್ರಗ್ನಾನಂದ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ಈ ಗೆಲುವಿನೊಂದಿಗೆ ಪ್ರಗ್ನಾನಂದ ಅವರು ಫಿಡೆ ಚೆಸ್ ನಲ್ಲಿ ಫೈನಲ್ ತಲುಪಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ವಿಶ್ವನಾಥನ್ ಆನಂದ್ ಅವರು ಪ್ರಗ್ನಾನಂದ ಅವರಿಗಿಂತ ಮೊದಲು ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದರು. ಪ್ರಗ್ನಾನಂದನ್ ಈಗ ಕಾರ್ ಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ಸನ್‌ರನ್ನು ಎದುರಿಸಲಿದ್ದಾರೆ. ಪ್ರಗ್ನಾನಂದನ್ ಫೈನಲ್ ಪಂದ್ಯದಲ್ಲಿ FIDE ಚೆಸ್ ಪ್ರಶಸ್ತಿಯನ್ನು ಗೆಲ್ಲಲು ಪ್ರಯತ್ನಿಸುತ್ತಾರೆ.
ಈ ಗೆಲುವಿಗಾಗಿ ಮಾಜಿ ವಿಶ್ವ ಚಾಂಪಿಯನ್ ಮತ್ತು ರಷ್ಯಾದ ಚೆಸ್ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಕಾಸ್ಪರೋವ್ ಪ್ರಗ್ನಾನಂದ ಅವರನ್ನು ಅಭಿನಂದಿಸಿದ್ದಾರೆ.
ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧದ ಪ್ರಶಸ್ತಿ ಹಣಾಹಣಿಗಾಗಿ ಅವರಿಗೆ ಶುಭ ಹಾರೈಸಿದರು.
ಪ್ರಗ್ನಾನಂದ್ ಅವರನ್ನು ಈ ಹಂತಕ್ಕೆ ತಲುಪುವಲ್ಲಿ ಅವರ ತಾಯಿ ನಾಗಲಕ್ಷ್ಮಿ ಅವರ ಪಾತ್ರವಿದೆ,  ಈ ಪಂದ್ಯಾವಳಿಯ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಪ್ರಗ್ನಾನಂದ್ ಅವರು ತಮ್ಮ ತಾಯಿಯ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು. ನನ್ನ ತಾಯಿ ಯಾವಾಗಲೂ ನನ್ನನ್ನು ಬೆಂಬಲಿಸುತ್ತಾರೆ. ನನ್ನ ತಾಯಿಯೇ ನನ್ನ ದೊಡ್ಡ ಬೆಂಬಲ ಮತ್ತು ನನಗೆ  ಸರ್ವಸ್ವ! ಆಟದಲ್ಲಿ ಸೋತ ನಂತರವೂ, ಅವಳು ನನ್ನನ್ನು ನಿಭಾಯಿಸಲು ಮತ್ತು ಶಾಂತಗೊಳಿಸಲು ಪ್ರಯತ್ನಿಸುತ್ತಾಳೆ ಎಂದು ಅವರು ಹೇಳಿದರು. ಇದರೊಂದಿಗೆ ಪ್ರತಿ ಟೂರ್ನಮೆಂಟ್‌ಗೆ ಮಗನ ಜೊತೆಗಿರುವ ಪ್ರಗಣಾನಂದ್ ಅವರ ತಾಯಿಯೂ ಮೆಚ್ಚುಗೆಗೆ ಪಾತ್ರರಾದರು.
Categories
ಕ್ರಿಕೆಟ್

ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದ ಕರ್ನಾಟಕದ ಮಿಂಚಿನ ವೇಗಿ ಪ್ರಸಿದ್ಧ ಕೃಷ್ಣ

ಉತ್ತಮ ಬೌಲಿಂಗ್ ಆ್ಯಾಕ್ಷನ್ ಮತ್ತು ಸುಮಾರು 145 kmph ಗಿಂತ ಹೆಚ್ಚಿನ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವ ಕರ್ನಾಟಕದ ವೇಗದ ಬೌಲರ್ ಮುರಳಿಕೃಷ್ಣ ಪ್ರಸಿದ್ಧ್ ಕೃಷ್ಣ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಏಷ್ಯಾಕಪ್‌ಗಾಗಿ ಪ್ರಕಟಿಸಲಾದ ತಂಡದಲ್ಲಿ ಹೆಸರಿಸಲಾದ ಐವರು ವೇಗದ ಬೌಲರ್‌ಗಳಲ್ಲಿ ಪ್ರಸಿದ್ಧ ಕೃಷ್ಣ ಒಬ್ಬರಾಗಿದ್ದು, ಈ ಮೂಲಕ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸಿದ್ದಾರೆ.
ಪ್ರಸಿದ್ಧ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಎಸೆತದಲ್ಲೇ ಒಂದು ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದರು. ಗಾಯದಿಂದ ಚೇತರಿಸಿಕೊಂಡು ಅದ್ಭುತ ಪ್ರದರ್ಶನ ನೀಡುವ ಮೂಲಕ ತಿರುಗೇಟು ನೀಡಿದ ಕನ್ನಡಿಗ ಯುವ ವೇಗಿ ಇದೀಗ ಏಷ್ಯಾಕಪ್ ಸರಣಿಗೆ ಆಯ್ಕೆಯಾಗುವ ಮೂಲಕ ದೊಡ್ಡ ವೇದಿಕೆಯಲ್ಲಿ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.  ವೇಗಿಗಳಿಗೆ ಅಗತ್ಯವಿರುವ ಎಲ್ಲಾ ಅಂಶಗಳನ್ನು ಪ್ರಸಿದ್ಧ್ ಕೃಷ್ಣ ಹೊಂದಿದ್ದು ಅವರನ್ನು ಎದುರಿಸಲು ಬ್ಯಾಟ್ಸ್‌ಮನ್‌ಗಳಿಗೆ ಕಷ್ಟವಾಗುವುದರಲ್ಲಿ ಸಂದೇಹವಿಲ್ಲ.
ಐರ್ಲೆಂಡ್ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಪ್ರಸಿದ್ಧ್ ಕೃಷ್ಣ ಕೂಡ ಗಾಯದ ಸಮಸ್ಯೆಯಿಂದ ದೂರ ಉಳಿದಿದ್ದರು. ಆದರೆ ಇದೀಗ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಭಾರತ ತಂಡಕ್ಕೆ ಹಳೆಯ ಚೈತನ್ಯ ಮತ್ತು ಉತ್ಸಾಹದಿಂದ ಮರಳಿ ಕಮ್ ಬ್ಯಾಕ್ ಮಾಡಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ 20 ಸರಣಿಯ ಮೊದಲ ಪಂದ್ಯವು ಚುಟುಕು ಮಾದರಿಯಲ್ಲಿ ಎರಡು ವಿಕೆಟ್ ಪಡೆದ ಕೃಷ್ಣ ಅವರಿಗೆ ಚೊಚ್ಚಲ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ಅವರು ಎರಡು ವಿಕೆಟ್ ಪಡೆದರು. ಎರಡನೇ ಪಂದ್ಯದಲ್ಲಿ ಕೂಡ ಎರಡು ವಿಕೆಟ್ ಕಬಳಿಸುವ ಮೂಲಕ ಭರ್ಜರಿ ಪುನರಾಗಮನ ಮಾಡಿದರು.
ಏಷ್ಯಾಕಪ್‌ಗೆ ಆಯ್ಕೆಯಾಗಿರುವ ತಂಡದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಇಬ್ಬರು ಆಟಗಾರರಲ್ಲಿ ಕೈಷ್ನಾ ಒಬ್ಬರು. ಕನ್ನಡಿಗ ವೇಗಿ ಪ್ರಸಿದ್ಧ್ ಅವರನ್ನು ನೋಡಿದಾಗ ಇವರು ಖಂಡಿತಾ ಪ್ರಸಿದ್ಧ ಆಟಗಾರನಾಗುತ್ತಾರೆ ಎನ್ನುವ ಭರವಸೆ ಮೂಡಿದೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಕ್ರಿಕೆಟ್

ಕೋಟೇಶ್ವರ ಪ್ರೀಮಿಯರ್ ಲೀಗ್ ಸೀಸನ್ 11-ಕೊಂಕಣ್ ಎಕ್ಸ್‌ಪ್ರೆಸ್‌ ಚಾಂಪಿಯನ್ಸ್

ಕೋಟೇಶ್ವರ: ನ್ಯೂ ಫ್ರೆಂಡ್ಸ್ ಕ್ರಿಕೆಟರ್ಸ್ ಕೋಟೇಶ್ವರ ಇವರ ಆಶ್ರಯದಲ್ಲಿ 76 ನೇ ಸ್ವಾತಂತ್ರೋತ್ಸವದ ಪ್ರಯುಕ್ತ  ಲೀಗ್ ಮಾದರಿಯ 60 ಗಜಗಳ ಕೆ.ಪಿ.ಎಲ್ ಸೀಸನ್-11 ಕ್ರಿಕೆಟ್ ಪಂದ್ಯಾಟವನ್ನು ಆಗಸ್ಟ್ 15 ರಂದು ಕೋಟೇಶ್ವರ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು.
ನ್ಯೂ ಫ್ರೆಂಡ್ಸ್ ಕ್ರಿಕೆಟರ್ಸ್ ಕೋಟೇಶ್ವರ ಇದರ ಸದಸ್ಯರುಗಳ ಸಮರ್ಥ ಮಾರ್ಗದರ್ಶನದಲ್ಲಿ ಪಂದ್ಯಾವಳಿ ಯಶಸ್ವಿಯಾಯಿತು. ಎಲ್ಲಾ ತಂಡಗಳು
ಅತ್ಯಂತ ಉತ್ಸಾಹ ಮತ್ತು ಕ್ರೀಡಾಮನೋಭಾವದಿಂದ ಭಾಗವಹಿಸಿದರು.
ಅಂತಿಮವಾಗಿ ಕೊಂಕಣ್ ಎಕ್ಸ್ ಪ್ರೆಸ್ ಕೋಟೇಶ್ವರ ಮತ್ತು ವಿಜಯ ಕ್ರಿಕೆಟರ್ಸ್ ಕೋಟೇಶ್ವರ ನಡುವೆ ಫೈನಲ್ ಪಂದ್ಯ ನಡೆಯಿತು, ಇದರಲ್ಲಿ ಕೊಂಕಣ್ ಎಕ್ಸ್ ಪ್ರೆಸ್ ಜಯಭೇರಿ ಬಾರಿಸಿ ವಿಜಯಶಾಲಿಯಾಯಿತು.
ಪ್ರಶಸ್ತಿ ವಿಜೇತ ಕೊಂಕಣ ಎಕ್ಸ್ ಪ್ರೆಸ್56789 ರೂ,ರನ್ನರ್ ಅಪ್- ವಿಜಯ್ ಕ್ರಿಕೆಟರ್ಸ್ 43,210 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.
ಫೈನಲ್ ಪಂದ್ಯ ಶ್ರೇಷ್ಠ ಮತ್ತು ಪಂದ್ಯಾಟದ ಅತ್ಯುತ್ತಮ ಬ್ಯಾಟರ್ ಶರತ್ ಉತ್ತಪ್ಪ,ಅತ್ಯುತ್ತಮ ಬೌಲರ್- ಹರೀಶ್ ಪ್ರಗತಿ,ಅತ್ಯುತ್ತಮ ಫೀಲ್ಡರ್- ಸುಕೇಶ್,ನಯಾಜ್ ಸರಣಿ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.
 ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಪ್ರೋತ್ಸಾಹಕರಾದ  ಸುಭಾಸ ಶೆಟ್ಟಿ ಕೋಟೇಶ್ವರ, ಇಮ್ರಾನ್ ಕೋಟೇಶ್ವರ, ಶ್ರೀಧರ್ ನಾಯ್ಕ್, ನರೇಶ್ ಭಟ್. ಸರ್ದಾರ್, ರಂಜನ್ ಮಿಥ್ಯಾಂತಾಯ ಮತ್ತು ರಾಜೇಶ್ ಪ್ರಭು ಉಪಸ್ಥಿತರಿದ್ದರು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಭಾಗವಹಿಸಿದ ಎಲ್ಲಾ ತಂಡಗಳ ಆಟಗಾರರ ಮತ್ತು ಆಯೋಜಕರ ಪ್ರಯತ್ನವನ್ನು ಶ್ಲಾಘಿಸಿದರು.
Categories
ಕ್ರಿಕೆಟ್

ಭಾರತ ತಂಡಕ್ಕೆ ಆಯ್ಕೆಯಾದ ಭರವಸೆಯ ಯುವ ಮಿಂಚು ರಿಂಕು ಸಿಂಗ್

ಐಪಿಎಲ್‌ನಲ್ಲಿ ಕೆಕೆಆರ್‌ಗಾಗಿ ಸತತ ಐದು ಸಿಕ್ಸರ್‌ಗಳನ್ನು ಬಾರಿಸಿದ ನಂತರ ರಿಂಕು ಸಿಂಗ್ ಹೆಸರು ಬೆಳಕಿಗೆ ಬಂದಿತು. ರಿಂಕು ಅವರನ್ನು ಶೀಘ್ರವೇ ಭಾರತ ತಂಡಕ್ಕೆ ಸೇರಿಸಿಕೊಳ್ಳಬೇಕೆಂಬ ಬೇಡಿಕೆಯೂ ಇತ್ತು. ಈ ಕ್ಷಣ ಐರ್ಲೆಂಡ್ ಪ್ರವಾಸದಲ್ಲೂ ರಿಂಕು ಸಿಂಗ್  ಬಂದಿದ್ದು, ಭಾರತಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿದೆ. ರಿಂಕು ಸಿಂಗ್ ಇಲ್ಲಿಗೆ, ಈ ಮಟ್ಟಕ್ಕೆ ಬರಲು  ಬರಲು ಶ್ರಮಿಸಿದ್ದು, ತಂಡಕ್ಕೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ.
ಅನೇಕ ಜನರು ಐಪಿಎಲ್ ಆಡಿದ್ದಾರೆ ಆದರೆ ಟೀಮ್ ಇಂಡಿಯಾದಲ್ಲಿ ಕೆಲವೇ ಆಟಗಾರರು ಆಯ್ಕೆಯಾಗಿದ್ದಾರೆ. ತಂಡಕ್ಕೆ ಬರಲು ಐಪಿಎಲ್ ನಲ್ಲಿ ಹೆಚ್ಚಿನದನ್ನು ಮಾಡಬೇಕೆಂದು ಅವರು ಬಯಸಿದ್ದರು. 10-12 ವರ್ಷಗಳ ಹಿಂದೆಯೇ  ಟೀಂ ಇಂಡಿಯಾದಲ್ಲಿ ಆಡುವ ಗುರಿಯನ್ನು ಹೊಂದಿದ್ದರು  ರಿಂಕು ಸಿಂಗ್. ಈ ಕ್ಷಣಕ್ಕಾಗಿ ಅವರು ಬಹಳ ಸಮಯದಿಂದ ಕಾಯುತ್ತಿದ್ದರು. ಈಗ ಅವರ ಕನಸು ನನಸಾಗಿದೆ.ಆರ್ಥಿಕ ಬೆಂಬಲ ಇಲ್ಲದಿದ್ದರೂ ಅಡೆತಡೆಗಳನ್ನು ಮೆಟ್ಟಿ ನಿಲ್ಲುವಂತೆ ಮಾಡಿದ್ದು ಆಟದ ಮೇಲಿನ ಅವರ ಉತ್ಸಾಹ .
ರಿಂಕು ಸಿಂಗ್ ಅವರ ಚೊಚ್ಚಲ ಪಂದ್ಯವು ಬ್ಯಾಟಿಂಗ್ ಲೈನ್‌ಅಪ್‌ಗೆ ಹೊಸ ಆಯಾಮವನ್ನು ನೀಡುತ್ತದೆ. ಅಂತರವನ್ನು ಹುಡುಕುವ ಮತ್ತು ತ್ವರಿತವಾಗಿ ಸ್ಕೋರ್ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ಸಿಂಗ್ ಅವರ ದೇಶೀಯ ದಾಖಲೆಯು ಮಧ್ಯಮ ಕ್ರಮಾಂಕಕ್ಕೆ ಕ್ರಿಯಾತ್ಮಕ ಕೊಡುಗೆ ನೀಡಬಹುದು ಎಂದು ಸೂಚಿಸುತ್ತದೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಅವರು ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.
ರಿಂಕು ಸಿಂಗ್ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ  ಪಾದಾರ್ಪಣೆ  ಮಾಡುವ ಅವಕಾಶ ಪಡೆದಿರುವುದು ಗಮನಾರ್ಹ. ಮೊದಲ ಟಿ20ಯಲ್ಲಿ ರಿಂಕು ಪಾದಾರ್ಪಣೆ ಮಾಡಿದರೂ, ಮಳೆಯಿಂದಾಗಿ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಲು ಅವರಿಗೆ ಅವಕಾಶ ಸಿಗಲಿಲ್ಲ. ರಿಂಕು ಸಿಂಗ್ ಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಮಳೆಯ ನಂತರ ಭಾರತ ತಂಡ ಡಕ್‌ವರ್ತ್‌ ಲೂಯಿಸ್‌ ನಿಯಮದಡಿ ಗೆಲುವು ಸಾಧಿಸಿತು.
ಎರಡನೇ ಟಿ20ಯಲ್ಲಿ ರಿಂಕು ಬ್ಯಾಟಿಂಗ್ ನೋಡುವ ಭರವಸೆ ಅಭಿಮಾನಿಗಳಲ್ಲಿದೆ.