Categories
ಕ್ರಿಕೆಟ್

ಭಾರತ ಕ್ರಿಕೆಟ್ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲಬಹುದೇ?

ಮುಂದೈತೆ ಕಷ್ಟದ ಹಾದಿ, ಭಾರತಕ್ಕೆ ಇವೆ ನೂರಾರು ಸವಾಲುಗಳು. 
ಗೆದ್ದು ಬಾ ಭಾರತ ಅನ್ನೋದೇ ನಮ್ಮ ಹಾರೈಕೆ. 
———————————–
ಇಂದು ಭಾರತ ಏಷಿಯಾ ಕಪ್ ಗೆದ್ದು ಸಂಭ್ರಮ ಪಟ್ಟಿತು. ಭಾರತ ಗೆಲ್ಲುವುದು ಖಾತ್ರಿ ಇತ್ತು. ಆದರೆ ಇಷ್ಟೊಂದು ಸುಲಭವಾಗಿ ನಮ್ಮ ಹುಡುಗರು ಗೆಲ್ಲುತ್ತಾರೆ ಅನ್ನೋದು ಗೊತ್ತಿರಲಿಲ್ಲ.
ಮೊಹಮ್ಮದ್ ಸಿರಾಜ್ – ದ ಫೈಟಿಂಗ್ ಸ್ಪಿರಿಟ್! 
———————————-
ಇಂದಿನ ವಿಜಯದ ಶ್ರೇಯಸ್ಸು ಖಂಡಿತವಾಗಿಯೂ ಈ ಹುಡುಗನಿಗೆ ದೊರೆಯಬೇಕು. ಹೈದರಾಬಾದಿನ ಒಬ್ಬ ಬಡ ರಿಕ್ಷಾ ಡ್ರೈವರ್ ಮಗನಾಗಿ ಕಷ್ಟದ ಬಾಲ್ಯವನ್ನು ಕಳೆದ ಆತ RCB ತಂಡದಲ್ಲಿ ಐಪಿಎಲ್ ಆಡುತ್ತಾ ಹೋರಾಟದ ಮೂಲಕ ತನ್ನ ಕ್ರಿಕೆಟ್ ಬದುಕನ್ನು ಕಟ್ಟಿಕೊಂಡವನು. 7-1-21-6 ಒಂದು ಘಾತಕವಾದ ಸ್ಪೆಲ್. ಅದು ಏಷಿಯಾ ಕಪ್ ಫೈನಲಿನಲ್ಲಿ ಬಂತು ಎನ್ನುವಾಗ ಆತನ ಬಗ್ಗೆ ಹೆಮ್ಮೆ ಮೂಡುತ್ತದೆ. ಮುಂದಿನ ವಿಶ್ವಕಪ್ ಕೂಟದಲ್ಲಿ ಕೂಡ ಬುಮ್ರ ಮತ್ತು ಸಿರಾಜ್ ಅವರ ಆರಂಭಿಕ ಸ್ಪೆಲ್ ಭಾರತಕ್ಕೆ ನಿರ್ಣಾಯಕ ಆಗಬಹುದು.
ಈ ವರ್ಷ ಭಾರತದಲ್ಲಿ ಕ್ರಿಕೆಟ್ ದೀಪಾವಳಿ.
———————————-
ಭಾರತದಲ್ಲಿ ಅಕ್ಟೋಬರ್ ಮತ್ತು ನವಂಬರ್ ತಿಂಗಳಲ್ಲಿ ದೀಪಾವಳಿ ಹಬ್ಬ ಜೋರು. ಅದೇ ಹೊತ್ತಿಗೆ ಈ ಬಾರಿ ಭಾರತದಲ್ಲಿ 13ನೆಯ ವಿಶ್ವಕಪ್ ಕ್ರಿಕೆಟ್ ಕೂಟವು  ತೆರೆದುಕೊಳ್ಳುತ್ತಿದೆ. ಈ ಬಾರಿ ಆತಿಥ್ಯ ಕೂಡ ಭಾರತ ಅನ್ನೋದು ನಮಗೆ ಹೆಮ್ಮೆ. ಭಾರತ ಆತಿಥ್ಯ ವಹಿಸುತ್ತಿರುವುದು ಇದು ನಾಲ್ಕನೇ ಬಾರಿ. ಭಾರತದ ರಾಷ್ಟ್ರೀಯ ಕ್ರೀಡೆ ಹಾಕ್ಕೀ ಆದರೂ ಕ್ರಿಕೆಟ್ ನಮ್ಮಲ್ಲಿ ಒಂದು ಧರ್ಮ ಎಂದೇ ಕರೆಯಲ್ಪಡುತ್ತದೆ. ಇಷ್ಟೊಂದು ಕ್ರಿಕೆಟ್ ಅಭಿಮಾನಿಗಳು ಜಗತ್ತಿನ ಬೇರೆ ಯಾವ ದೇಶದಲ್ಲಿಯೂ ಇಲ್ಲ! ಕ್ರಿಕೆಟ್ ಆಟಗಾರರು ಭಾರತದಲ್ಲಿ ಸಿನೆಮಾ ಸ್ಟಾರಗಳಿಗಿಂತ ಹೆಚ್ಚು ಜನಪ್ರಿಯರು. ಚುಟುಕು ಕ್ರಿಕೆಟ್ ಪಂದ್ಯಗಳು ಎಂದಾಗ ಭಾರತದ ಕ್ರಿಕೆಟ್ ಗ್ರೌಂಡುಗಳು ತುಂಬಿ ತುಳುಕುವುದು ಖಂಡಿತ. ಅದರಲ್ಲಿಯೂ ಭಾರತ ಪಾಕ್ ಪಂದ್ಯವು ನಡೆಯುವ ಜಗತ್ತಿನ ಅತೀ ದೊಡ್ಡ ಸ್ಟೇಡಿಯಂ (ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ, ಅಹ್ಮದಾಬಾದ್) ಯಾವ ರೀತಿ ತುಂಬಿ ನಿಲ್ಲಬಹುದು ಎಂದು ಊಹೆ ಮಾಡಲು ನಮಗೆ ಕಷ್ಟ ಆಗಬಹುದು. ಇಂದು ಎಲ್ಲ ಕ್ರಿಕೆಟ್ ತಂಡಗಳಲ್ಲಿಯೂ ಹೊಡಿ ಬಡಿ ಬ್ಯಾಟರಗಳು ಇರುವ ಕಾರಣ ಈ ಬಾರಿಯ ಕ್ರಿಕೆಟ್ ದೀಪಾವಳಿ ಇನ್ನೂ ಹೆಚ್ಚು ಸದ್ದು ಮಾಡಬಹುದು.
ಈ ಬಾರಿ ಭಾರತ ತಂಡ ಹೇಗೆ? 
——————————
1983ರಲ್ಲಿ ಕಪಿಲ್ ದೇವ್ ಮತ್ತು 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಈಗಾಗಲೇ ವಿಶ್ವ ಕಪ್ ಗೆಲ್ಲಿಸಿಕೊಟ್ಟ ಕಪ್ತಾನರು. ಈ ಬಾರಿ ರೋಹಿತ್ ಶರ್ಮಾ ಕಪ್ತಾನ ಆಗಿ ಒಳ್ಳೆಯ ನಾಯಕತ್ವದ ಅರ್ಹತೆ ಹೊಂದಿದ್ದಾರೆ. ಮುಂಬೈ ತಂಡಕ್ಕೆ ಅತೀ ಹೆಚ್ಚು ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ಕಪ್ತಾನ ಅವರು. ಆದ್ದರಿಂದ ಭಾರತಕ್ಕೆ ನಾಯಕತ್ವದ ಸ್ಟ್ರಾಂಗ್ ಬೇಸ್ ಇದೆ. ಭಾರತದ ಅತ್ಯುತ್ತಮ ಆಟಗಾರ ರಾಹುಲ್ ದ್ರಾವಿಡ್ ಅವರ ಅಪಾರ ಅನುಭವ ಮತ್ತು ಕ್ರಿಕೆಟ್ ಪಾಠಗಳು ಭಾರತಕ್ಕೆ ವರವಾಗಿ ಬರುತ್ತವೆ. ಕೋಚಿಂಗ್ ವಿಭಾಗದಲ್ಲಿ ಭಾರತಕ್ಕೆ ಯಾವುದೇ ಸಮಸ್ಯೆ ಇಲ್ಲ.
ಉತ್ತಮ ಸಮತೋಲನದ ತಂಡ.
———————————-
ಆರಂಭಿಕ ಆಟಗಾರರಾಗಿ ರೋಹಿತ್ ಮತ್ತು ಶುಭಮನ ಗಿಲ್ ಏಷಿಯಾ ಕಪ್ ಪಂದ್ಯದಲ್ಲಿ ಸಕತ್ತಾಗಿ ಮಿಂಚಿದ್ದಾರೆ. ಗಿಲ್ ಅವರ ಸರಾಸರಿ 65ರ ಮೇಲೆ ದಾಟಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗಿಲ್ ಸಿಡಿಸಿದ ಶತಕ ತುಂಬಾನೇ ಅತ್ಯುತ್ತಮ ಆಗಿತ್ತು. ಪಾಕ್ ವಿರುದ್ಧ ಕೊಹ್ಲಿ ಮತ್ತು ರಾಹುಲ್ ಹೊಡೆದ ಶತಕಗಳು ಹೆಚ್ಚು ಕಾಲ ಸ್ಮರಣೆಯಲ್ಲಿ ಉಳಿಯುವಂತದ್ದು.
ದೊಡ್ಡ ದೊಡ್ಡ ಪಂದ್ಯಗಳಲ್ಲಿ ವಿರಾಟ್ ಕೋಹ್ಲಿ ನಿರೀಕ್ಷೆ ಮೀರಿ ಹಿಂದೆ ಮಿಂಚಿದ್ದಾರೆ. ಆದ್ದರಿಂದ ಅವರ ಫಾರ್ಮ್  ಬಗ್ಗೆ ತಲೆ ಹೆಚ್ಚು ಕೆಡಿಸುವ ಅಗತ್ಯ ಇಲ್ಲ.
ಮಿಡಲ್ ಆರ್ಡರ್ ಕೆ ಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ ಪಾಂಡ್ಯ ಅವರಿಂದ ಬಲಿಷ್ಠಗೊಂಡಿದೆ. ಏಷಿಯಾ ಕಪ್ ಪಂದ್ಯಗಳಲ್ಲಿ ರಾಹುಲ್ ಅವರ ಕೀಪಿಂಗ್ ಕ್ಲಿಕ್ ಆಗಿದೆ. ಸೂರ್ಯ ಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಅವರು ಕೂಡ ಪ್ರತಿಭಾವಂತರು. ಅವರ ಮೇಲೆ ನಿರೀಕ್ಷೆ ಬೆಟ್ಟದಷ್ಟು ಇದೆ.
ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಉತ್ತಮ ಕೊಡುಗೆ ಆಗಿ ಏಷಿಯಾ ಕಪ್ಪಿನಲ್ಲಿ ಮಿಂಚಿದ್ದಾರೆ. ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಧಾಳಿ ಭಾರತೀಯ ಟ್ರಂಪ್ ಕಾರ್ಡ್ ಆಗುವ ಸಾಧ್ಯತೆ ಇದೆ. ಮೊಹಮ್ಮದ್ ಶಮಿ ವಿಶ್ವದ ಎಲ್ಲ ಗ್ರೌಂಡಗಳಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಶಾರ್ದೂಲ್ ಒಳ್ಳೆಯ ಆಲ್ರೌಂಡರ್ ಆಟಗಾರ. ಆತನ ಮೇಲೆ ಭರವಸೆ ಇಡಬಹುದು. ಹಾರ್ದಿಕ ಪಾಂಡ್ಯ ಬೌಲಿಂಗ್ ಕ್ಲಿಕ್ ಆದರೆ ಭಾರತಕ್ಕೆ ಗೆಲುವು ಸುಲಭ ಅನ್ನೋದು ಏಷಿಯಾ ಕಪ್ ಕೂಟದಲ್ಲಿ ಸಾಬೀತು ಆಗಿದೆ. ಭಾರತದ ಕ್ರಿಕೆಟ್ ತಂಡ ಈ ಬಾರಿ ಹಿಂದಿಗಿಂತ ಹೆಚ್ಚು ಸಮತೋಲನ ಹೊಂದಿದೆ. ವಿರಾಟ್ ಮತ್ತು ರೋಹಿತ್ ನಿಂತು ಆಡಿದರೆ ಎಷ್ಟು ದೊಡ್ಡ ಮೊತ್ತದ ಚೇಸಿಂಗ್ ಕೂಡ ಕಷ್ಟ ಅಲ್ಲ.
ಭಾರಕ್ಕೆ ಇರುವ ಸವಾಲುಗಳು.
——————————
೧) ನಿರ್ಣಾಯಕ ಪಂದ್ಯಗಳಲ್ಲಿ ಸೂರ್ಯ, ಶ್ರೇಯಸ್ ಅಯ್ಯರ್ ಕೈ ಕೊಡುತ್ತಾರೆ.
೨) ಅತಿಯಾಗಿ ಏಕ್ಸಪೇರಿಮೆಂಟ್ ಮಾಡುವ ರಾಹುಲ್ ದ್ರಾವಿಡ್. ಏಷಿಯಾ ಕಪ್ ಕೂಟದಲ್ಲಿ ಬಾಂಗ್ಲಾ ವಿರುದ್ಧ ಸೋಲಲು ಇದು ಕಾರಣ.
೩) ಭಾರತದ ಫೀಲ್ಡಿಂಗ್ ನೇಪಾಳ ವಿರುದ್ಧದ ಪಂದ್ಯದಲ್ಲಿ ಕೈ ಕೊಟ್ಟಿತ್ತು.  ಫೀಲ್ಡಿಂಗ್ ಇನ್ನೂ ಬಿಗಿ ಆಗಬೇಕು.
೪) ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕ, ನ್ಯುಜಿಲಾಂಡ್, ಇಂಗ್ಲೆಂಡ್ ಹೆಚ್ಚು ಅಪಾಯಕಾರಿ ತಂಡಗಳು. ಅವುಗಳ ಎದುರು ಭಾರತ ಇತ್ತೀಚೆಗೆ ಹೆಚ್ಚು ಪಂದ್ಯ ಆಡಿಲ್ಲ. ಐದು ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಟೀಮ್ ಈ ಬಾರಿ ಕೂಡ ಹೆಚ್ಚು ಸ್ಟ್ರಾಂಗ್ ಇದೆ. ಚಾಂಪಿಯನ್ ತಂಡ ಇಂಗ್ಲೆಂಡ್ ಈ ಬಾರಿ ಮಿರಾಕಲ್ ಮಾಡಬಹುದು.
೪) ಅಕ್ಷರ್ ಪಟೇಲ್ ಮತ್ತು ಶ್ರೇಯಸ್ ಅವರ ಫಿಟ್ನೆಸ್ ಬಗ್ಗೆ ಗೊಂದಲ ಇದೆ.
೫) ಐವತ್ತು ಓವರ್ ಆಟ ಆದ ಕಾರಣ ನಿಂತು ಆಡುವ ಆಟ ಬೇಕು. ಐಪಿಎಲ್ ಕೂಟದ ಜೋಶನಲ್ಲಿ ಹೋದರೆ ಅಪಾಯ ಹೆಚ್ಚು.
ಇದುವರೆಗೆ ಎರಡು ಬಾರಿ ವಿಶ್ವಕಪ್ ಗೆದ್ದಿರುವ ಭಾರತ ಕ್ರಿಕೆಟ್ ತಂಡ ಮೂರನೇ ಬಾರಿಗೆ ಟ್ರೋಫಿ ಎತ್ತಿ ಮಿಂಚಲಿ ಎನ್ನುವುದು ಶತಕೋಟಿ  ಭಾರತೀಯರ ಹಾರೈಕೆ.
Categories
ಕ್ರಿಕೆಟ್

BCCI U19 ಕ್ರಿಕೆಟ್ ಸಂಭಾವ್ಯರ ಪಟ್ಟಿಯಲ್ಲಿ ಉಡುಪಿಯ ಯುವತಿ ವೈಷ್ಣವಿ ಆಚಾರ್ಯ ಕಡಿಯಾಳಿ ಆಯ್ಕೆ

2023-24ರ ಸಾಲಿನಲ್ಲಿ ನಡೆಯುವ  19 ವರ್ಷದೊಳಗಿನ ಮಹಿಳಾ ಕ್ರಿಕೆಟ್  ಏಕದಿನ ತಂಡದ ಸಂಭವನೀಯರಲ್ಲಿ ಉಡುಪಿಯ ವೈಷ್ಣವಿ ಆಚಾರ್ಯ ಕಡಿಯಾಳಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 25 ಜನ ಆಟಗಾರರ ಪಟ್ಟಿಯನ್ನು ಇಂದು ಪ್ರಕಟಿಸಿದ್ದು ಉಡುಪಿಯ ವೈಷ್ಣವಿ ಆಚಾರ್ಯ ಕಡಿಯಾಳಿ  ಬೌಲರ್ ಕಂ ಬ್ಯಾಟರ್ ಆಗಿ ಶಿಬಿರದಲ್ಲಿ ಭಾಗವಹಿಸಲು 25 ಸಂಭಾವ್ಯರ ಪೈಕಿ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ ನಿಂದ ಭಾರತದಲ್ಲಿ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಆ ಟೂರ್ನಿಯಲ್ಲಿ ಇವರು ಭಾಗವಹಿಸುವ ವಿಶ್ವಾಸದಲ್ಲಿದ್ದಾರೆ. 2022ರಲ್ಲಿ ಕೆಎಸ್‌ಸಿಎ ಅಂಡರ್-19 ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ವೈಷ್ಣವಿ, 2023-24ರ ಅಂಡರ್-19 ಏಕದಿನ ಸಂಭಾವ್ಯ ತಂಡಕ್ಕೂ ಆಯ್ಕೆಯಾಗಿದ್ದಾರೆ.
ಉಡುಪಿಯವರಾದ ಇವರು ತಮ್ಮ ಪ್ರದೇಶದಲ್ಲಿ ಕ್ರಿಕೆಟ್‌ಗೆ ಪರಿಚಯವಾಗಿ ಆಟದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಆ ಹಂತದಲ್ಲಿ ಆಕೆಗೆ ಕ್ರಿಕೆಟ್ ಅನ್ನು ವೃತ್ತಿಯಾಗಿ ತೆಗೆದುಕೊಳ್ಳುವ ಯಾವುದೇ ಸುಳಿವು ಇರಲಿಲ್ಲ. ಎಲ್ಲಾ ವಿರೋಧಾಭಾಸಗಳನ್ನು ಎದುರಿಸಿ, ಅವರು ತಮ್ಮ ಆಟವನ್ನು ಸುಧಾರಿಸಲು ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡರು, ಕ್ರಿಕೆಟ್ ತರಬೇತಿಯನ್ನು ಪಡೆದರು ಮತ್ತು ಅಂಡರ್-19 ತಂಡಕ್ಕೆ ಆಡಲು ಫಿಟ್ ಆಗಲು ತಮ್ಮ ಸರದಿಯನ್ನು ಕಾಯುತ್ತಿದ್ದರು. ತನ್ನ ತಂಡಕ್ಕೆ  ಬೌಲಿಂಗ್ ನಲ್ಲಿ ಅಪಾರ ಕೊಡುಗೆ ನೀಡುವ ಮೂಲಕ ಇಂದು  ಅವರು ಅಂಡರ್-19 ಪಂದ್ಯಾವಳಿಯಲ್ಲಿ ಆಡಲು ಸಮರ್ಥರಾಗಿದ್ದಾರೆ. ಅವರ ಪ್ರದರ್ಶನವನ್ನು ಪರಿಗಣಿಸಿ, ಅವರನ್ನು ಬಿಸಿಸಿಐ ರಾಜ್ಯ ಮಟ್ಟದ ಪಂದ್ಯಗಳಿಗೆ  ಸುಧಾರಿತ ತರಬೇತಿ ಶಿಬಿರಕ್ಕೆ ಅಗ್ರ 25 ಆಟಗಾರರಲ್ಲಿ ಬಲಗೈ ಮಾಧ್ಯಮ  ವೇಗದ  ಬೌಲರ್ ಆಗಿ ಆಯ್ಕೆ ಮಾಡಲಾಗಿದೆ.
ಈ ಯುವ ಪ್ರತಿಭೆಯ ಬಗ್ಗೆ ಸ್ಪೋರ್ಟ್ಸ್ ಕನ್ನಡ ಹೆಮ್ಮೆಪಡುತ್ತದೆ. ಸ್ಪೋರ್ಟ್ಸ್ ಕನ್ನಡದ ಪ್ರವರ್ತಕರು ಕೋಟ ರಾಮಕೃಷ್ಣ ಆಚಾರ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ಇನ್ನೂ ಹೆಚ್ಚಿನ ಸಾಧನೆ ಮಾಡಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲಿ ಎಂದು ಶುಭ ಹಾರೈಸಿದ್ದಾರೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಗೌತಮ್ ಶೆಟ್ಟಿ ಕುಂದಾಪುರ ಆಯ್ಕೆ

ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್ ಇವರು ಕರ್ನಾಟಕ ಟೇಬಲ್ ಟೆನ್ನಿಸ್ ಸಂಸ್ಥೆಯ ಉಪಾಧ್ಯಕ್ಷರಾಗಿ  ಆಯ್ಕೆಯಾಗಿದ್ದಾರೆ.
ಗೌತಮ್ ಶೆಟ್ಟಿ ಅವರು ಭಾನುವಾರ ಧಾರವಾಡದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಮುಂದಿನ ನಾಲ್ಕು ವರ್ಷಗಳ ಕಾಲ ಅವರು ಅಧಿಕಾರದಲ್ಲಿ ಇರಲಿದ್ದಾರೆ.
ಆಯ್ಕೆಯ ಬಳಿಕ ಸ್ಪೋರ್ಟ್ಸ್ ಕನ್ನಡದೊಂದಿಗೆ ಮಾತನಾಡಿದ ಗೌತಮ್ ಶೆಟ್ಟಿ “ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಇದು ಪ್ರಯೋಜನಕಾರಿ,ಏಕಾಗ್ರತೆ ಹೆಚ್ಚಿಸುವ ಆಟಗಳಲ್ಲಿ ಟೇಬಲ್ ಟೆನಿಸ್ ಕೂಡ ಒಂದಾಗಿದ್ದು, ಯುವಕರನ್ನು ಪ್ರೋತ್ಸಾಹಿಸುವ ಮೂಲಕ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುವುದಾಗಿ ಹೇಳಿದರು.
ನೂತನವಾಗಿ ಆಯ್ಕೆಗೊಂಡ KTTA ತಂಡಕ್ಕೆ  ಸ್ಪೋರ್ಟ್ಸ್ ಕನ್ನಡ ಮತ್ತು ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ವತಿಯಿಂದ ಶುಭಾಶಯಗಳು.
Categories
ಸ್ಪೋರ್ಟ್ಸ್

ವಿಶ್ವ ಬಂಟರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಒಕ್ಕೂಟದ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ಆಹ್ವಾನ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಉಡುಪಿ ಅಜ್ಜರಕಾಡು ಮೈದಾನದಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ದಿನಾಂಕ 28.10.2023 ಮತ್ತು 29.10.2023 ರಂದು ನಡೆಯಲಿರುವ  ವಿಶ್ವ ಬಂಟರ ಕ್ರೀಡಾಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ  ಕಾರ್ಯಕ್ರಮ ಒಕ್ಕೂಟದ ನಿರ್ದೇಶಕರಾದ ಶ್ರೀ ಪ್ರವೀಣ್ ಶೆಟ್ಟಿ ವಕ್ವಾಡಿಯವರನ್ನು ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಒಕ್ಕೂಟದ ಪರವಾಗಿ ಹೂಗುಚ್ಚ ನೀಡಿ  ಪ್ರೀತಿಪೂರ್ವಕವಾಗಿ ಆಹ್ವಾನಿಸಿದರು.
ಅಧ್ಯಕ್ಷರ ಆದರದ ಆಹ್ವಾನ ಸ್ವೀಕರಿಸಿದ ಶ್ರೀ ಪ್ರವೀಣ್ ಶೆಟ್ಟಿ ವಕ್ವಾಡಿಯವರು ತನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಉಪಾಧ್ಯಕ್ಷ ಶ್ರೀ ಕರ್ನಿರೆ ವಿಶ್ವನಾಥ್ ಶೆಟ್ಟಿ ಉಪಸ್ಥಿತರಿದ್ದರು.
Categories
ಕ್ರಿಕೆಟ್

ಬೈಂದೂರಿನಲ್ಲಿ ವಿಕ್ರಮ್ ಕ್ರಿಕೆಟ್ ಕ್ಲಬ್ ವೃತ್ತಿಪರ ಕ್ರಿಕೆಟ್ ಕೋಚಿಂಗ್ ಕ್ಯಾಂಪ್

ಆಗಸ್ಟ್ 07, 2023:  ವಿಕ್ರಮ್ ಕ್ರಿಕೆಟ್ ಕ್ಲಬ್ ಕರ್ನಾಟಕದ ಅತ್ಯಂತ ಹಳೆಯ ಮತ್ತು ಅತ್ಯುತ್ತಮ ಕ್ರಿಕೆಟ್ ತಂಡಗಳಲ್ಲಿ ಒಂದಾಗಿದೆ.  ವಿಕ್ರಮ್ ಕ್ರಿಕೆಟ್ ಕ್ಲಬ್  ತನ್ನ ವೃತ್ತಿಪರ ಕ್ರಿಕೆಟ್ ಶಿಬಿರವನ್ನು  ಬೈಂದೂರಿನಲ್ಲಿ ಪ್ರಾರಂಭಿಸಲು ಸಿದ್ಧವಾಗಿದೆ.
10 ರಿಂದ 23 ವರ್ಷ ವಯಸ್ಸಿನ ಬಾಲಕ ಮತ್ತು ಬಾಲಕಿಯರಿಗೆ ಕ್ರಿಕೆಟ್ ತರಬೇತಿ  ಪ್ರಾರಂಭವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ಪ್ರತಿಭೆಗಳಲ್ಲಿ ತೀವ್ರ ಏರಿಕೆ ಕಾಣುತ್ತಿರುವ ಬೈಂದೂರಿನಲ್ಲಿ ಶಿಬಿರವನ್ನು ಸ್ಥಾಪಿಸಲು ವಿಕ್ರಮ್ ಕ್ರಿಕೆಟ್ ಕ್ಲಬ್ ಉತ್ಸುಕರಾಗಿದ್ದಾರೆ.  ಈ ಕ್ರಿಕೆಟ್  ಕ್ಯಾಂಪ್ ಪರಿಣಿತ ಕೋಚಿಂಗ್ ವಿಧಾನಗಳು ಮತ್ತು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಈ ಪ್ರದೇಶದಲ್ಲಿ ಕ್ರಿಕೆಟಿಗರನ್ನು ಬೆಳೆಯಲು ಸಹಾಯ ಮಾಡುತ್ತದೆ. ಬೈಂದೂರಿನಾದ್ಯಂತದ ಪ್ರತಿಭೆಗಳನ್ನು ಪೋಷಿಸುವುದು. ಭವಿಷ್ಯದ ಕ್ರಿಕೆಟಿಗರನ್ನು ಅಭಿವೃದ್ಧಿಪಡಿಸುವುದು ವಿಕ್ರಮ್ ಕ್ರಿಕೆಟ್ ಕ್ಲಬ್ ಅಕಾಡೆಮಿಯ ಪ್ರಾಥಮಿಕ ಉದ್ದೇಶ.
ಈ ಪ್ರದೇಶದಲ್ಲಿ ಆಟದ ಬಗ್ಗೆ ಆಳವಾದ ಉತ್ಸಾಹ ಹೊಂದಿರುವ ಸಾಕಷ್ಟು ಮಕ್ಕಳು ಮತ್ತು ಯುವಕರಿದ್ದಾರೆ ಮತ್ತು ಅವರು ಬೈಂದೂರಿನ ವಿಕ್ರಮ್ ಕ್ರಿಕೆಟ್ ಕ್ಲಬ್ ನ  ತರಬೇತಿ ವಿಧಾನಗಳು ಮತ್ತು ಸೌಲಭ್ಯಗಳಿಗೆ ಒಡ್ಡಿಕೊಳ್ಳುವುದರಿಂದ ಪ್ರಯೋಜನ ಪಡೆಯುತ್ತಾರೆ. ಒಟ್ಟಾಗಿ, ಬೈಂದೂರಿನಿಂದ ಕ್ರಿಕೆಟ್ ಪ್ರತಿಭೆಯನ್ನು ಹೊರತೆಗೆಯಲು ವಿಕ್ರಮ್ ಕ್ರಿಕೆಟ್ ಕ್ಲಬ್  ಆಶಿಸುತ್ತದೆ.
ವಿಕ್ರಮ್ ಕ್ರಿಕೆಟ್ ಕ್ಲಬ್ ಕ್ರಿಕೆಟ್ ತರಬೇತಿ ಶಿಬಿರವು ಅತ್ಯಾಧುನಿಕ ಮೂಲಸೌಕರ್ಯ ಮತ್ತು ಪರಿಣಿತ ತರಬೇತಿಯೊಂದಿಗೆ ಹುಡುಗರು ಮತ್ತು ಹುಡುಗಿಯರಿಗೆ ತರಬೇತಿ ಕೇಂದ್ರವಾಗಿದೆ.  ನೆಟ್ ಸೌಲಭ್ಯಗಳು, ಅಭ್ಯಾಸ ಪಂದ್ಯಗಳು, ಒನ್ ಆನ್ ಒನ್ ಕೋಚಿಂಗ್, ಲೀಗ್ ಪಂದ್ಯಗಳು, ಕ್ರಿಕೆಟ್ ಟೂರ್ನಮೆಂಟ್ ಗಳು  ಹೀಗೆ ವಿವಿಧ ರೀತಿಯಲ್ಲಿ ಅನುಭವಿ ತರಬೇತುದಾರರು ಶಿಬಿರದಲ್ಲಿ ಪಾಲ್ಗೊಂಡು ಮಕ್ಕಳನ್ನು ಪರಿಣಿತರಾಗಿ ಮಾಡಲಿದ್ದಾರೆ. ಇದಲ್ಲದೆ, ಈ ಶಿಬಿರವು ಬೌಲಿಂಗ್ ಕೋಚಿಂಗ್, ಬ್ಯಾಟಿಂಗ್ ಕೋಚಿಂಗ್, ಒನ್ ಆನ್ ಒನ್ ಕೋಚಿಂಗ್ ಮತ್ತು ವರ್ಚುವಲ್ ತರಬೇತಿಯನ್ನು ನೀಡುತ್ತದೆ. ಶಿಬಿರದ ತರಬೇತಿ ಕಾರ್ಯಕ್ರಮಗಳು ಫೀಲ್ಡಿಂಗ್, ಬ್ಯಾಟಿಂಗ್ ಮತ್ತು ಬೌಲಿಂಗ್ ಸೇರಿದಂತೆ ಆಟದ ಎಲ್ಲಾ ಅಂಶಗಳ ಮೇಲೆ ಕೇಂದ್ರೀಕರಿಸುತ್ತವೆ.
ಹೆಚ್ಚಿನ ವಿವರಗಳಿಗಾಗಿ  ಮತ್ತು ನೋಂದಣಿಗಾಗಿ ಮೊಹಮ್ಮದ್ ಅರ್ಮಾನ್, ದಿನೇಶ್ ಕೆ  ಅಥವಾ ರಾಜೇಶ್ ಆಚಾರ್ ಇವರುಗಳನ್ನು ಸಂಪರ್ಕಿಸಬಹುದು.
ದೂರವಾಣಿ:  8792444376, 6363852771, 9916440337
Categories
ಕ್ರಿಕೆಟ್

ಉದ್ಯಾನ ನಗರಿ ಬೆಂಗಳೂರಿನಲ್ಲಿ ಮೋದಿ ಕ್ರಿಕೆಟ್ ಕಪ್ 2023

ಬೆಂಗಳೂರು- ಮೋದಿ ಕ್ರಿಕೆಟ್ ಕಪ್ 2023 ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯು ಸೆಪ್ಟೆಂಬರ್ 16 ರಿಂದ 17 ರವರೆಗೆ ಬೆಂಗಳೂರಿನ ಜಯನಗರದಲ್ಲಿರುವ ಚಂದ್ರಗುಪ್ತ ಮೌರ್ಯ (ಶಾಲಿನಿ)  ಮೈದಾನದಲ್ಲಿ ನಡೆಯಲಿದೆ.
ಈ ಕ್ರಿಕೆಟ್ ಪಂದ್ಯಾವಳಿಯನ್ನು ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುವ  ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ  ತೇಜಸ್ವಿ ಸೂರ್ಯರವರು ಆಯೋಜಿಸಿದ್ದಾರೆ.
ಇದು ಉಚಿತ ಪ್ರವೇಶ ಶುಲ್ಕ  ಹೊಂದಿರುವ  ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿಯಾಗಿದ್ದು,ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಅವರ ಸಾರಥ್ಯದಲ್ಲಿ ನಡೆಯಲಿದೆ. ದಕ್ಷಿಣ ಬೆಂಗಳೂರಿನಾದ್ಯಂತ ಒಟ್ಟು 64 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು ಪ್ರತಿ ತಂಡದಲ್ಲೂ ಕರ್ನಾಟಕದ 3 ಐಕಾನ್ ಆಟಗಾರರು ಪ್ರತಿನಿಧಿಸಲಿದ್ದಾರೆ. ಪಂದ್ಯಾವಳಿಯು ನಾಲ್ಕು ಬೇರೆ ಬೇರೆ ಮೈದಾನಗಳಲ್ಲಿ ನಡೆಯಲಿದೆ.
ಪಂದ್ಯಾವಳಿಯ ವಿಜೇತರು ಟ್ರೋಫಿ ಮತ್ತು 1,00,000 ನಗದು ಬಹುಮಾನವನ್ನು ಪಡೆಯುತ್ತಾರೆ. ರನ್ನರ್ಸ್ ಅಪ್ ತಂಡವು 50,000 ನಗದು ಬಹುಮಾನ ಮತ್ತು ಟ್ರೋಫಿಯನ್ನು ಪಡೆಯುತ್ತದೆ. ಮ್ಯಾನ್ ಆಫ್ ದಿ ಸೀರೀಸ್ ಆಟಗಾರ,  ಅತ್ಯುತ್ತಮ ಬ್ಯಾಟ್ಸ್‌ಮನ್, ಉತ್ತಮ ಬೌಲರ್ ಮತ್ತು  ಮ್ಯಾನ್ ಆಫ್ ದಿ ಮ್ಯಾಚ್ ಆಕರ್ಷಕ ಟ್ರೋಫಿಯನ್ನು ಪಡೆಯುತ್ತಾರೆ. ನಾಕೌಟ್ ಪಂದ್ಯಾವಳಿಯಲ್ಲಿ ವಿಜೇತರ ಟ್ರೋಫಿಗಾಗಿ ಒಟ್ಟು 64 ತಂಡಗಳು ಸೆಣಸಲಿವೆ. ಬಸವನಗುಡಿ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಚಿಕ್ಕಪೇಟೆ, ಗೋವಿಂದರಾಜ ನಗರ, ಜಯನಗರ, ಪದ್ಮನಾಭನಗರ, ವಿಜಯನಗರ ಅಸೆಂಬ್ಲಿ ಕಾನ್ಸ್ಟಿಟ್ಯೂಷನ್ ಗೆ ಸೇರಿದ  ಆಟಗಾರರ ತಂಡಗಳು ಭಾಗವಹಿಸಲಿವೆ.  ಚಂದ್ರಗುಪ್ತ ಮೌರ್ಯ (ಶಾಲಿನಿ)  ಮೈದಾನದಲ್ಲಿ  ನಡೆಯುವ ಪಂದ್ಯಗಳನ್ನು ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ  ವಿವೇಕ್ ಗೌಡ @ 9611260592  ಅಥವಾ   ಪವನ್ ವಸಿಷ್ಠ @ 9611018831 ಇವರನ್ನು ಸಂಪರ್ಕಿಸಬಹುದಾಗಿದೆ.
Categories
ಕ್ರಿಕೆಟ್

ಸೌದಿ ಅರೇಬಿಯಾದಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ 2023- ಕೆ.ಪಿ.ಎಲ್ ಸೀಸನ್-1

ಆಸಿಫ್ ಕೋಡಿ, ಅಫ್ವಾನ್, ಇಮ್ತಿಯಾಜ್ ಮತ್ತು ಇಮ್ರಾನ್ ಇವರೆಲ್ಲರ ಒಗ್ಗೂಡುವಿಕೆಯಿಂದ ಕಿಂಗ್ಡಮ್ ಆಫ್ ಸೌದಿ ಅರೇಬಿಯಾದ ಅಲ್ ಕೋಬರ್ ದಮಾಮ್ ನ  ERCA ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ 2023  ಎಂಬ  ಕ್ರಿಕೆಟ್ ಪಂದ್ಯಾವಳಿಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಪಂದ್ಯಾವಳಿಯ ಆಯೋಜಕರ ವರದಿಗಳು ತಿಳಿಸಿವೆ.
” ಕೆಪಿಎಲ್ ಸೀಸನ್ 1″ ಎಂದು ಕರೆಯಲ್ಪಡುವ ಪಂದ್ಯಾವಳಿಯು ERCA ಗ್ರೌಂಡ್ಸ್ ನಲ್ಲಿ  ಇದೇ  ಸೆಪ್ಟೆಂಬರ್ 28 ಮತ್ತು 29ರಂದು ನಡೆಯಲಿದೆ ಎಂದು ಆಯೋಜಕರು ಹೇಳಿದ್ದಾರೆ. ಈ ಪಂದ್ಯಾವಳಿಯಲ್ಲಿ          ಕರ್ನಾಟಕದ ಆಟಗಾರರನ್ನು ಒಳಗೊಂಡ ಎಂಟು ತಂಡಗಳು ಭಾಗವಹಿಸಲಿವೆ.
ಈ ಪಂದ್ಯಾವಳಿಯಲ್ಲಿ ವಿಜೇತ ತಂಡವು 5001 ಸೌದಿ ರಿಯಾಲ್ ಮತ್ತು ವಿಜೇತ ಟ್ರೋಫಿಯನ್ನು ಪಡೆದುಕೊಳ್ಳುತ್ತದೆ, ರನ್ನರ್ ಅಪ್ ಗಳು 3001 ಸೌದಿ ರಿಯಾಲ್ ಮತ್ತು ಟ್ರೋಫಿಯನ್ನು ಜಯಿಸಲಿದೆ. ಪ್ರತಿ ಪಂದ್ಯದಲ್ಲೂ ಮ್ಯಾನ್ ಆಫ್ ದಿ ಮ್ಯಾಚ್ ಟ್ರೋಫಿ ಮತ್ತು ಆಕರ್ಷಕ  ಉಡುಗೊರೆ ಬಹುಮಾನವನ್ನು ಗೆಲ್ಲುತ್ತಾರೆ. ಅತ್ಯುತ್ತಮ ಬ್ಯಾಟ್ಸ್‌ಮನ್,  ಉತ್ತಮ ಬೌಲರ್ ,ಬೆಸ್ಟ್ ವಿಕೆಟ್ ಕೀಪರ್  ಮತ್ತು ಮ್ಯಾನ್ ಆಫ್ ದಿ ಸೀರೀಸ್ ನಂತಹ ವೈಯಕ್ತಿಕ ವಿಜೇತರಿಗೆ ಕೂಡ ಹಲವಾರು ಬಹುಮಾನಗಳನ್ನು ನೀಡಲಾಗುತ್ತಿದೆ ಎಂದು ಕ್ಲಬ್‌ನ ಮುಖ್ಯಸ್ಥರು ಸ್ಪೋರ್ಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.
Categories
ಕ್ರಿಕೆಟ್

49ರ ಹರೆಯದಲ್ಲೇ ಬದುಕಿನ ಹೋರಾಟ ನಿಲ್ಲಿಸಿದ ಜಿಂಬಾಬ್ವೆಯ ಲೆಜೆಂಡರಿ ಕ್ರಿಕೆಟಿಗ ಮಾಜಿ ನಾಯಕ ಹೀತ್ ಸ್ಟ್ರೀಕ್

ಜಿಂಬಾಬ್ವೆ ಕ್ರಿಕೆಟ್ ತಂಡದ  ಮಾಜಿ ನಾಯಕ ಮತ್ತು ದಿಗ್ಗಜ ಅನುಭವಿ ಆಟಗಾರ ಹೀತ್ ಸ್ಟ್ರೀಕ್ ತಮ್ಮ 49 ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ.  ಭಾನುವಾರ  ಅವರ ಸಾವಿನ ಸುದ್ದಿಯಲ್ಲಿ ಅಭಿಮಾನಿಗಳು ಮುಳುಗಿದ್ದಾರೆ. ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಬೌಲರ್, ಆಲ್ ರೌಂಡರ್ ಆಗಿ ಕ್ರಿಕೆಟ್ ಲೋಕದಲ್ಲಿ ಹೆಸರು ಮಾಡಿದ್ದ  ಹೀತ್ ಸ್ಟ್ರೀಕ್  ಜಿಂಬಾಬ್ವೆಗಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನೇಕ ಪಂದ್ಯ-ವಿಜೇತ ಪ್ರದರ್ಶನಗಳನ್ನು ಗೆಲ್ಲಲು ಶ್ರಮಿಸಿದ್ದರು.
2000 ರಲ್ಲಿ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯು ಚೆಂಡು ಮತ್ತು ಬ್ಯಾಟಿಂಗ್‌ನಲ್ಲಿ ಪ್ರಬಲ ಪ್ರದರ್ಶನ ನೀಡುತ್ತಿದ್ದ  ಹೀತ್ ಸ್ಟ್ರೀಕ್ ಅವರನ್ನು  ಟೆಸ್ಟ್ ಮತ್ತು ODI ಎರಡೂ ತಂಡಗಳಿಗೂ ನಾಯಕನನ್ನಾಗಿ ಮಾಡಿತ್ತು. 2000-2004ರ ಅವಧಿಯಲ್ಲಿ  ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನ ಉತ್ತಮವಾಗಿತ್ತು. ಹೀತ್ ಸ್ಟ್ರೀಕ್ ಜಿಂಬಾಬ್ವೆಗೆ ಸುದೀರ್ಘ ಕಾಲ ನಾಯಕತ್ವ ವಹಿಸಿದ್ದರು.   ಈ ಸಮಯದಲ್ಲಿ, ಅವರು ಅನೇಕ ದೊಡ್ಡ ಪಂದ್ಯಗಳಲ್ಲಿ ತಂಡವನ್ನು ಗೆದ್ದ ಸಾಧನೆ ಮಾಡಿದ್ದರು.  ಹೀತ್ ಸ್ಟ್ರೀಕ್ ಜಿಂಬಾಬ್ವೆ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗ ಎಂದು ಕರೆಸಿಕೊಳ್ಳುತ್ತಾರೆ. ಒಂದು ಹಂತದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಒಬ್ಬಂಟಿಯಾಗಿ ಮೇಲಕ್ಕೆತ್ತುವ ಪ್ರಯತ್ನ  ಹೀತ್ ಸ್ಟ್ರೀಕ್ ನಡೆಸಿದ್ದರು. ಹೀತ್ ಸ್ಟ್ರೀಕ್ ಬೌಲಿಂಗ್ ಮೂಲಕ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಸಾಕಷ್ಟು ಕೊಡುಗೆ ನೀಡಿ ಗಮನಸೆಳೆದಿದ್ದರು.  ಹೀತ್ ಸ್ಟ್ರೀಕ್ ಜಿಂಬಾಬ್ವೆ ಕಂಡ ಸರ್ವಶ್ರೇಷ್ಠ ಕ್ರಿಕೆಟಿಗ ಎಂದು ಕರೆಸಿಕೊಳ್ಳುತ್ತಾರೆ.
ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ದಾಖಲೆಗಳನ್ನು ಕೂಡ ಬರೆದುಕೊಂಡಿರುವ ಇವರು ಜಿಂಬಾಬ್ವೆ ಪರ ಹಲವು ವಿಶೇಷ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಜಿಂಬಾಬ್ವೆ ತಂಡದ ಪರವಾಗಿ 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಏಕೈಕ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 2005ರಲ್ಲಿ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಅಂತ್ಯವಾಗಿತ್ತು. ಇನ್ನು ನಿವೃತ್ತಿಯ ಬಳಿಕವೂ ಹೀತ್ ಸ್ಟ್ರೀಕ್ ಕ್ರಿಕೆಟ್ ಅಂಗಳದಲ್ಲಿ ಕೋಚ್ ಆಗಿ ಸಕ್ರಿಯವಾಗಿದ್ದರು. ಜಿಂಬಾಬ್ವೆ ಸೇರಿದಂತೆ ಸ್ಕಾಟ್ಲೆಂಡ್, ಬಾಂಗ್ಲಾದೇಶ ಹಾಗೂ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೂ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಹೀತ್ ಸ್ಟ್ರೀಕ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಕ್ಯಾನ್ಸರ್ ನ ನಾಲ್ಕನೇ ಹಂತದಲ್ಲಿರುವ ಕಾರಣ, ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೀತ್ ಸ್ಟ್ರೀಕ್ ಅವರ ಆರೋಗ್ಯವು ನಿರಂತರವಾಗಿ ಕ್ಷೀಣಿಸುತ್ತಿತ್ತು. ಹೀತ್ ಸ್ಟ್ರೀಕ್ ಸಾವಿನಿಂದ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ.
ಸುರೇಶ ಭಟ್, ಮುಲ್ಕಿ
ಸ್ಪೋರ್ಟ್ಸ್ ಕನ್ನಡ
Categories
ಕ್ರಿಕೆಟ್

ಏಷ್ಯಾ ಕಪ್-ಭಾರತ Vs ಪಾಕಿಸ್ತಾನ ಪಂದ್ಯದ ಮುನ್ನೋಟ

ಕ್ರಿಕೆಟ್ ಲೋಕದ ಬದ್ದ ವೈರಿಗಳ ಮಹಾ ಕದನ, 166 ಕೋಟಿ ಜನಕ್ಕೆ ಕಿಕ್ಕೇರಿಸುವ ಹೈ ವೋಲ್ಟೇಜ್ ಇಂಡೋ ಪಾಕ್ ಪಂದ್ಯ ಕೊನೆಗೂ ಬಂದಿದೆ. ಬಹಳಾ ದಿನಗಳ ನಂತರ ಕ್ರಿಕೆಟ್ ನ ಸ್ಟಾರ್ ಗಳಾದ ಬುಮ್ರಾ, ಬಾಬರ್, ಕೊಹ್ಲಿ, ರೌಫ್,ಶಾಹೀನ್ , ರೋಹಿತ್ ಮುಖಾಮುಖಿ ಆಗೋದನ್ನ  ಕ್ರಿಕೆಟ್ ಲೋಕ ಕಣ್ತುಂಬಿ ಕೊಳ್ಳುತ್ತೆ. ಕ್ರಿಕೆಟ್ ನ ಶಿಶು ನೇಪಾಳವನ್ನ ಈಜಿಯಾಗಿ ಸೋಲಿಸಿ ಪಾಕ್ ಬರ್ತಾ ಇದ್ದಾರೆ.  ಕಳೆದ ಬಾರಿ ಗ್ರೂಪ್ ಹಂತದಲ್ಲಿ ಹೊರ ಬಿದ್ದಿದ್ದಕ್ಕೆ ಸೇಡು ತೀರಿಸೋಕೆ ರೋಹಿತ್ ಪಡೆ ಕೂಡ ಕಾಯ್ತಾ ಇದೆ.
ಹಾಗಿದ್ರೆ ದಾಯಾದಿಗಳ ಈ ಮಹಾ ಕದನ ಹೇಗಿರುತ್ತೆ, ಎರಡು ಟೀಮ್ ಗಳು ಹೇಗಿರಲಿವೆ, ಸ್ಟ್ರಾಟರ್ಜಿ ಏನಾಗಿರಲಿವೆ, ಪಿಚ್ ಹೇಗಿರುತ್ತೆ, ಮ್ಯಾಚ್ ನಡೆಯುತ್ತಾ ಇಲ್ವಾ
ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇವತ್ತಿನ ಮ್ಯಾಚ್ ಸಾಕ್ಷಿಯಾಗಲಿದೆ.
ಭಾರತ ಪಾಕ್ ಪಂದ್ಯ ಯಾಕೆ  ಹೈ ವೋಲ್ಟೇಜ್ ಪಂದ್ಯ ಅನಿಸುತ್ತೆ ಅಂದ್ರೆ ನೀವು ಎರಡೂ ತಂಡ ಲಾಸ್ಟ್ ಟೈಮ್ ಯಾವಾಗ ODI ಆಡಿದ್ರು ನೋಡಿ.  2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಫಖರ್ ಜಮಾನ್ ಸೆಂಚುರಿ ಹೊಡೆದು ಬುಮ್ರಾ ನೋಬಾಲ್ ಹಾಕಿದ್ದು ನಮಗೆ 6 ವರ್ಷಗಳ ಹಿಂದೆ ಅನಿಸಬಹುದು. ಆದ್ರೆ ಅದಾದ್ ಮೇಲೆ ODI ನಲ್ಲಿ ಎರಡು ಟೀಮ್ ಗಳು ಮುಖಾಮುಖಿಯಾಗಿದ್ದು ಕೇವಲ ಮೂರೇ ಸಲ. ಆದ್ರೆ ಕಳೆದ ಮೂರು ಮ್ಯಾಚ್ ಭಾರತ ಗೆದ್ದಿತ್ತು ಅದು ಬೇರೆ ವಿಚಾರ. ಕೊನೆ ಮ್ಯಾಚ್ ನಡೆದಿದ್ದು 2019ರ ವಿಶ್ವಕಪ್ ನಲ್ಲಿ. ಅಲ್ಲೂ ರೋಹಿತ್ ಸೆಂಚುರಿ ಹೊಡೆದು ಭುವನೇಶ್ವರ್ ಕುಮಾರ್ ಇಂಜುರಿ ಆದಾಗ ಬಂದಂತಹ  ವಿಜಯ್ ಶಂಕರ್ ಫಸ್ಟ್ ಬಾಲ್ ವಿಕೆಟ್ ತೆಗೆದು ಭಾರತ ಗೆದ್ದಿತ್ತು. ಸೊ ಈ ರೇರಿಟಿ ಪ್ಲಸ್ ಐಕಾನಿಕ್ ಮೊಮೆಂಟ್ ಗಳಿಂದಾಗಿ . ಜೊತೆಗೆ ಎರಡು ದೇಶಗಳ ನಡುವಿನ ಹಿಸ್ಟರಿಯಿಂದಾಗಿ ಇಂಡೋ ಪ್ಯಾಕ್ ಮ್ಯಾಚ್ ಎಲ್ಲಾ ಮ್ಯಾಚ್ ಗಳಿಗಿಂತ ಇಂಪಾರ್ಟೆಂಟ್ ಮ್ಯಾಚ್ ಆಗತ್ತೆ. ಬೇರೆಲ್ಲಾ ಟೀಮ್ ಗಳು ಮುಖಾಮುಖಿಯಾದಾಗ ಕ್ರಿಕೆಟ್ ಪ್ಲೇಯರ್ಸ್ ಆಡ್ತಾ ಇರ್ತಾರೆ. ಆದ್ರೆ ಇಲ್ಲಿ ಕೇವಲ
ಕ್ರಿಕೆಟ್ ಪ್ಲೇಯರ್ಸ್ ಆಡ್ತಾ ಇರೋದಿಲ್ಲ. ಆ  ಕ್ರಿಕೆಟ್ ಪ್ಲೇಯರ್ಸ್ ಆಯಾ ದೇಶಗಳನ್ನ ಪ್ರತಿನಿಧಿಸೋ ಸೋಲ್ಜರ್ ಗಳಂತೆ ಆಡ್ತಾ ಇರ್ತಾರೆ. ಅವರು ಕ್ರಿಕೆಟೆ ಆಡ್ತಾ ಇರ್ತಾರೆ. ನೋಡುವವರ ಕಣ್ಣಿಗೆ ಅವರು ಸೋಲ್ಜರ್ಸ್ ತರಹ ಕಾಣ್ತಾ ಇರ್ತಾರೆ. ಎರಡು ರಾಷ್ಟ್ರಗಳ ನಡುವಿನ ಯುದ್ಧದಂತೆ ಜನ ಇದನ್ನ ಫೀಲ್ ಮಾಡ್ಕೋತಿರ್ತಾರೆ.
ಸದ್ಯ ಇವತ್ತು ಅಲ್ಲಿ ನಡಿತಾ ಇರೋದು ಹದಿನಾರನೇ ಆವೃತ್ತಿಯ ಏಷ್ಯಾ ಕಪ್ ನ ಮೂರನೇ ಮ್ಯಾಚ್. ಈ ಹಿಂದೆ ಏಷ್ಯಾ ಕಪ್ 14 ಬಾರಿ ಏಕದಿನ ಫಾರ್ಮ್ಯಾಟ್ ನಲ್ಲಿ, ಎರಡು ಬಾರಿ T20 ಫಾರ್ಮ್ಯಾಟ್ ನಲ್ಲಿ ನಡೆದಿತ್ತು. ಮತ್ತೆ ಈ ಬಾರಿ ಏಕದಿನ ಫಾರ್ಮ್ಯಾಟ್ ನಲ್ಲಿ ನಡಿತಾ ಇದೆ. ಗ್ರೂಪ್ Aನ ಈ ಪಂದ್ಯ ಪಾಕಿಸ್ತಾನದಿಂದ ಆತಿಥ್ಯವನ್ನ ಗುತ್ತಿಗೆ ಪಡೆದಿರುವಂತಹ ಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಮೈದಾನದಲ್ಲಿ ಮಧ್ಯಾಹ್ನ 3:00 ಗಂಟೆಗೆ ನಡಿತಾ ಇದೆ. ಪಾಕಿಸ್ತಾನಕ್ಕೆ ಇದು ಎರಡನೇ ಮ್ಯಾಚ್. ಈಗಾಗಲೇ ಹೇಳಿದ ಹಾಗೆ ಉದ್ಘಾಟನಾ ಪಂದ್ಯದಲ್ಲಿ ಕ್ರಿಕೆಟ್ ಶಿಶು ನೇಪಾಳವನ್ನ ಪಾಕ್ ಈಸಿಯಾಗಿ ಸೋಲಿಸಿ ಬರ್ತಾ ಇದೆ. ಆದರೆ ಭಾರತಕ್ಕೆ ಇದು ಫಸ್ಟ್ ಮ್ಯಾಚ್. ಈ ಹಿಂದೆ ಭಾರತ ಪಾಕ್ ಪಂದ್ಯ ಅಂದ್ರೆ ಭಾರತದ ಬ್ಯಾಟರ್ಸ್ ವರ್ಸಸ್ ಪಾಕ್ ಬೌಲರ್ಸ್ ಅಂತ ಇರ್ತಾ ಇತ್ತು. ಆದ್ರೆ ಈಗ ಹಾಗಲ್ಲ. ಭಾರತದಲ್ಲಿ ಭಯಂಕರ ವೇಗಿಗಳು ಬಂದಿದ್ದಾರೆ. ಭಾರತದಲ್ಲೂ ಒಳ್ಳೆಯ ಬ್ಯಾಟರ್ಸ್ ಗಳು ಇದ್ದಾರೆ. ಜೊತೆಗೆ ಇನ್ನೊಂದು ತಿಂಗಳಲ್ಲೇ ವರ್ಲ್ಡ್ ಕಪ್ ಕೂಡ ಇರೋದ್ರಿಂದ ಈ ಮ್ಯಾಚ್ ನ ಹೀಟ್, ಮಹತ್ವ ಇನ್ನಷ್ಟು ಜಾಸ್ತಿಯಾಗಿದೆ.
ಟೀಮ್ ಇಂಡಿಯಾ ವನ್ನ ನೋಡೋದಾದ್ರೆ ಬಹಳ ದಿನಗಳ ನಂತರ ಭಾರತ ತನ್ನ ಪೂರ್ಣ ಪ್ರಮಾಣದ ಟೀಮ್ ಅನ್ನ ಇಲ್ಲಿ ಕಣಕ್ಕೆ ಇಳಿಸ್ತಾ ಇದೆ. ಗಾಯದ ನಂತರ ಬುಮ್ರಾ , ಅಯ್ಯರ್ ಮೊದಲ ಬಾರಿಗೆ ಟೀಮ್ ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಆರಂಭಿಕನಾಗಿ ಶುಭಮನ್ ಗಿಲ್ ಇರ್ತಾರೆ. ಪಾಕಿಸ್ತಾನ ವಿರುದ್ಧ ಭಾರತ ಮೇಲುಗೈ ಸಾಧಿಸಬೇಕು ಅಂತ ಹೇಳಬೇಕಾದರೆ ಫಾಕ್ ವೇಗದ ಬೌಲರ್ ಗಳ ವಿರುದ್ಧ ಕಂಟ್ರೋಲ್ ಸಾಧಿಸಬೇಕು. ಅದರಲ್ಲೂ ಪವರ್ ಪ್ಲೇ ಅವಧಿಯಲ್ಲಿ ಭಾರತ ಪಾಕ್ ಬೌಲರ್ ಗಳನ್ನ ಹೇಗೆ ಫೇಸ್ ಮಾಡುತ್ತೆ ಅನ್ನೋದು ನಿರ್ಣಾಯಕ ವಾಗುತ್ತೆ. ಹಾಗಾಗಿ ಆರಂಭಿಕರಾಗಿ ರೋಹಿತ್ ಶರ್ಮಾ ಗೆ ಸಾಥ್ ನೀಡಲಿರೋ ಶುಭಮನ್ ಗಿಲ್ ಈ ಪಂದ್ಯದಲ್ಲಿ ಪಾಕ್ ನ ಮಾರಕ ವೇಗಿಗಳಿಗೆ ಭರ್ಜರಿ ಪ್ರತ್ಯುತ್ತರ ಕೊಡೋ ಆತ್ಮವಿಶ್ವಾಸ ದಲ್ಲಿದ್ದಾರೆ. ಉತ್ತಮ ಲಯದಲ್ಲಿರೋ  ಗಿಲ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಎಲ್ಲಾ ಸಾಮರ್ಥ್ಯವನ್ನ ಹೊಂದಿದ್ದಾರೆ. ಇವರ ಜೊತೆಗೆ ಹಿಂದೆ ಎಡಗೈ ವೇಗಿಗಳ ವಿರುದ್ಧ ಸ್ವಲ್ಪ ವೀಕ್ ನೆಸ್ ತೋರಿಸ್ತಾ ಇದ್ದ ರೋಹಿತ್ ಈ ಬಾರಿ ಪಾಕ್ ನ ಶಾಹೀನ್ ಶಾ ಅಫ್ರಿದಿ  ವಿರುದ್ಧ ಹೇಗೆ ಆಡ್ತಾರೆ ಅಂತ ನೋಡಬೇಕಾಗಿದೆ. ರೋಹಿತ್ ಫಾರ್ಮ್ ಕಳ್ಕೊಂಡ್ರೆ ಉಳಿದ ಬ್ಯಾಟರ್ಸ್ ಗಳ ಬಗ್ಗೆ ನಾವು ನೋಡದೆ ಬೇಡ. ಇನ್ನು ಪಾಕ್ ವಿರುದ್ಧ ಕೊಹ್ಲಿಯ ಪರ್ಫಾರ್ಮೆನ್ಸ್ ಬಗ್ಗೆ ಅಂತೂ ನಿಮಗೆ ಗೊತ್ತೇ ಇದೆ. ಅದರ ಬಗ್ಗೆ ಜಾಸ್ತಿ ಹೇಳೋ ಅಗತ್ಯ ಇಲ್ಲ. ವಿರಾಟ್ ಕೊಹ್ಲಿ ಪಾಕ್ ವಿರುದ್ಧ ನಿಂತಾಗ ಪ್ರತಿ ಸಾರಿ ಚಿಂಧಿ ಉಡಾಯಿಸುತ್ತಾರೆ. ಇನ್ನು ಈ ಏಷ್ಯಾ ಕಪ್ ಶ್ರೇಯಸ್ ಅಯ್ಯರ್ ಮತ್ತು ಕೆ ಎಲ್ ರಾಹುಲ್ ಅವರ ಕಮ್ ಬ್ಯಾಕ್ ಗೆ ವೇದಿಕೆ ಆಗಬೇಕಾಗಿತ್ತು. ಆದರೆ ರಾಹುಲ್ ಇನ್ನೂ ಫಿಟ್ ಆಗದೆ ಇರೋದ್ರಿಂದ ಎರಡು ಪಂದ್ಯಗಳಲ್ಲಿ ಕಾಣಿಸಿಕೊಳ್ತಾ ಇಲ್ಲ. ಆದರೇ ಶ್ರೇಯಸ್ ಶ್ರೇಯಸ್ ಅಯ್ಯರ್  ಆಡ್ತಾರೆ. ಭಾರತಕ್ಕೆ ನಂಬರ್ ಫೋರ್ ಯಾವಾಗ್ಲೂ ಕಾಡ್ತಾ ಇದೆ. ಆದ್ರೆ ಶ್ರೇಯಸ್ ಅಯ್ಯರ್ ಇರೋದ್ರಿಂದ ಆ ಚಿಂತೆ ಇಲ್ಲ.  ಯಾಕಂದ್ರೆ ನಂಬರ್ ಫೋರ್ ಜಾಗದಲ್ಲಿ ಶ್ರೇಯಸ್ ಅಯ್ಯರ್ ಕೇವಲ ಭಾರತ ಬ್ಯಾಟರ್ಸ್ ಗಳಿಗೆ ಅಷ್ಟೇ ಅಲ್ಲ,  ವಿಶ್ವಕಪ್ ಆಡೋ 10 ತಂಡಗಳಲ್ಲಿ ಬೆಸ್ಟ್ ನಂಬರ್ಸ್ ಹೊಂದಿದ್ದಾರೆ. 2019ರ ವಿಶ್ವಕಪ್ ನಂತರ ಅಯ್ಯರ್ ಈ ಸ್ಥಾನದಲ್ಲಿ 47.35ರ ಆವರೇಜ್ ನಲ್ಲಿ 94.37ರ ಸ್ಟ್ರೈಕ್ ರೇಟ್ ನಲ್ಲಿ 805 ರನ್ ಗಳಿಸಿದ್ದಾರೆ. ಬೇರೆ ಯಾರು ಈ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ರಷ್ಟು ಒಳ್ಳೆಯ ಎವರೇಜ್, ಹೆಚ್ಚು ಸೆಂಚುರಿ ಹೊಂದಿಲ್ಲ. ಇನ್ನು  ರಾಹುಲ್ ಅಬ್ಸೆಂಟ್ ಆಗಿರೋದ್ರಿಂದ ಇಶಾನ್ ಕಿಶನ್ ರವರ ಜವಾಬ್ದಾರಿ ಹೆಚ್ಚಾಗುತ್ತೆ.
ಕೆ ಎಲ್ ರಾಹುಲ್ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗೋ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಇಶಾನ್ ಕಿಶನ್ ಸ್ಥಾನ ಪಡಿಯೋದು ಖಚಿತ. ವೈಟ್ ಬಾಲ್ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿರೋ ಇಶಾನ್ ಕಿಶನ್ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಅನುಮಾನವೇ ಇಲ್ಲ. ಹಾಗಾಗಿ ಪಾಕಿಸ್ತಾನದ ವಿರುದ್ಧ ಹೈ ವೋಲ್ಟೇಜ್ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಾಗ ಅದನ್ನು ಎರಡು ಕೈಯಲ್ಲಿ ಬಾಚಿ ಕೊಳ್ಳುವ ಸಾಮರ್ಥ್ಯ ಈ ಯುವ ಆಟಗಾರನಿಗೆ ಇದೆ. ಅದನ್ನು ಯೂಸ್ ಮಾಡಬೇಕು ಅಷ್ಟೇ. ಭಾರತದ ಸ್ಟಾರ್ ಆಟಗಾರರ ವಿರುದ್ಧ ಪಾಕ್ ಬೌಲರ್ ಗಳು  ವಿಶೇಷ ರಣತಂತ್ರಗಳನ್ನು ಹೆಣೆಯುತ್ತಿರುವಾಗ ಅವುಗಳಿಗೆ ಟಕ್ಕರ್ ಕೊಟ್ಟು ನಿದ್ದೆಗೆಡಿಸುವ ಸಾಮರ್ಥ್ಯ ಇಶಾನ್ ಕಿಶನ್ ಅವರಿಗೆ ಇದೆ, ಎಕ್ಸ್ ಫ್ಯಾಕ್ಟರ್ ತರಹ ಇವರು ಕ್ಲಿಕ್ ಆಗಿಬಿಟ್ರೆ. ಹಾಗಾಗಿ ಈ ಪಂದ್ಯದಲ್ಲಿ ಇಶಾನ್ ಕಿಶನ್ ಮೇಲೆ ಅಭಿಮಾನಿಗಳು ಕೂಡ ಬಹಳ ಹೋಪ್ ಇಟ್ಟುಕೊಂಡಿದ್ದಾರೆ.
ಉಳಿದಂತೆ ನಂಬರ್ 6, ನಂಬರ್ 7 ನಲ್ಲಿ ಆಲ್ ರೌಂಡರ್ ಗಳಾದಂತಹ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಕಣಕ್ಕಿಳಿಯುತ್ತಾರೆ. ಪಾಕಿಸ್ತಾನ ತಂಡ ಬೌಲಿಂಗ್ ನಲ್ಲಿ ಎಷ್ಟು ಸ್ಟ್ರಾಂಗ್ ಆಗಿದೆಯೋ ಬ್ಯಾಟಿಂಗ್ ವಿಭಾಗದಲ್ಲೂ ಅಷ್ಟೇ ಬ್ಯಾಲೆನ್ಸ್ಡ್ ಆಗಿದೆ. ಟೀಮ್ ನಲ್ಲಿ ಸ್ಥಿರ ಪ್ರದರ್ಶನ ಕೊಡೊ ಸಾಮರ್ಥ್ಯ  ಇರೋ ಹಲವು ಆಟಗಾರರು ಇದ್ದಾರೆ ಪಾಕಿಸ್ತಾನದಲ್ಲಿ. ಪಾಕ್ ನ ಲೆಕ್ಕಾಚಾರ ತಲೆಕೆಳಗೆ ಆಗಿಸೋ ಸಾಮರ್ಥ್ಯವಿರೋ ಬೌಲರ್ ಗಳ ಪಡೆಯೇ ಇದ್ರು ಸದ್ಯ ಸದ್ದಿಲ್ಲದೆ ಆಘಾತ ಕೊಡೊ  ಆಟಗಾರ ಅಂದ್ರೆ ಅದು ಕುಲದೀಪ್ ಯಾದವ್. ಇತ್ತೀಚಿನ ದಿನಗಳಲ್ಲಿ ತಮ್ಮ ಅಮೋಘ ಬೌಲಿಂಗ್ ಮೂಲಕ ಗ ಮನ ಸೆಳೆದಿದ್ದಾರೆ.  ಪಾಕ್ ಗೆ ದೊಡ್ಡ ಆಘಾತ ಕೊಟ್ರೆ ಆಶ್ಚರ್ಯ ಇಲ್ಲ. ಪಲ್ಲೆಕೆಲೆಯ ನಿಧಾನಗತಿಯ ಪಿಚ್ ನ ಲಾಭವನ್ನು ಬಳಸಿಕೊಂಡು ಮ್ಯಾಚ್ ಗೆಲ್ಲಿಸೋ ಸಾಮರ್ಥ್ಯವನ್ನು ಕುಲದೀಪ್ ಯಾದವ್  ಡೆಫಿನೇಟ್ಲಿ ಹೊಂದಿದ್ದಾರೆ. ಅದರಂತೆ ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಕೆ ಪ್ಲೇಯರ್ ಆಗ್ತಾರೆ.
ಎರಡು ತಂಡಗಳಿಗೂ ಚಿಂತೆ ಇರೋದು ಅದಕ್ಕೂ ಭಾರತಕ್ಕೆ ಚಿಂತೆ  ಪಾಕ್ ಮೇಲೆ ಅಲ್ಲ. ವರುಣ ದೇವನ ಮೇಲೆ, ಯಾಕಂದ್ರೆ ಭಾರತ ಪಾಕ್ ಮಧ್ಯೆ ಮ್ಯಾಚ್ ನಡೆಯೋ  ಕ್ಯಾಂಡಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. 70 ರಿಂದ 90% ನಷ್ಟು ಮಳೆ ಪಂದ್ಯಕ್ಕೆ ಅಡ್ಡಿಪಡಿಸುವ ನಿರೀಕ್ಷೆ ಇದ್ದು ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ತಣ್ಣೀರು ಎರಚುವ ಜೋರು ತುಂಬಾ ಜೋರೇ ಇದೆ. ಈ ಕ್ಷಣಕ್ಕೆ ಮಳೆ ಬಂದು ಮ್ಯಾಚ್ ಹಾಳು ಆಗೋ ಚಾನ್ಸ್ ಜಾಸ್ತಿ ಕಾಣಿಸ್ತಾ ಇದೆ.  ಈಗಾಗಲೇ ಲಂಕಾದ ಮಾಧ್ಯಮಗಳು ಈ ಪಂದ್ಯ ಮಳೆಯಲ್ಲಿ ಕೊಚ್ಚಿ ಹೋಗೋದು ಗ್ಯಾರಂಟಿ ಅಂತ ಆಲ್ ರೆಡಿ ಅವರು ಡಿಸಿಷನ್ ತಗೊಂಡು ಆಗಿದೆ.  ಆದ್ರೆ ಒಂದು ಹೋಪ್ ಹಿಡ್ಕೋಳ್ ಬಹುದು ಅಭಿಮಾನಿಗಳು. ಏನು ಅಂದ್ರೆ ಹವಾಮಾನ ಮುನ್ಸೂಚನೆ ಯಾವಾಗಲೂ ಸರಿ ಆಗೋಲ್ಲ.  ಕೆಲವೊಂದು ಸಲ ಅದು ರಾಂಗ್ ಆಗಿ ಬಿಡುತ್ತೆ. ಮಳೆ ಬಾರದೆ ಇರಲಿ,  ಹವಾಮಾನ ಮುನ್ಸೂಚನೆ ಎಡವಟ್ಟಾಗಲಿ. ತಪ್ಪಾಗಲಿ ಅನ್ನೋ ಹೋಪ್,  ಆಸೆಯನ್ನ ಫ್ಯಾನ್ಸ್ ಸದ್ಯಕ್ಕೆ ಇಟ್ ಕೊಳ್ತಾ ಇದ್ದಾರೆ. ಪಂದ್ಯ ರದ್ದಾದರೆ ಒಂದು ಅಂಕ ಪಡೆದು ಸೂಪರ್ ಫೋರ್ ಗೆ ಪಾಕಿಸ್ತಾನ ಪ್ರವೇಶ ಪಡೆಯಲಿದೆ.
ಇನ್ನು ಕೊಹ್ಲಿ ಈ ಮ್ಯಾಚ್ ನಲ್ಲಿ  ಸೆಂಚುರಿ ಹೊಡೆದು 102 ರನ್ ಗಳಿಸಿದ್ರೆ  ODIನಲ್ಲಿ 13000 ರನ್ ಗಳಿಸಿದ ವಿಶ್ವದ ಐದನೇ ಬ್ಯಾಟರ್ ಆಗ್ತಾರೆ.  ಜೊತೆಗೆ ತೆಂಡೂಲ್ಕರ್ ಗಿಂತ ಫಾಸ್ಟ್ ಆಗಿ ರೀಚ್ ಆದ ಹಾಗೆ ಆಗುತ್ತೆ.  ರವೀಂದ್ರ ಜಡೇಜಾ ಆರು ವಿಕೆಟ್ ತೆಗೆದ್ರೆ ODIನಲ್ಲಿ 200 ವಿಕೆಟ್ ತೆಗೆದ ಹಾಗೆ ಆಗ್ತಾರೆ. ಇದರ ಜೊತೆಗೆ ಕಪಿಲ್ ದೇವ್ ನಂತರ
200 ವಿಕೆಟ್ ಹಾಗೂ 2,000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಆಗ್ತಾರೆ.
ಸೋ ಇದು ಭಾರತ ಪಾಕಿಸ್ತಾನ ಮ್ಯಾಚ್ ಪ್ರಿವ್ಯೂ…
– ಸುರೇಶ್ ಭಟ್ ಮುಲ್ಕಿ
ಸ್ಪೋರ್ಟ್ಸ್ ಕನ್ನಡ ವಕ್ತಾರರು
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಜೀವನದ ಯಶಸ್ಸಿನ ಆಧಾರವೇ ಕ್ರೀಡೆ-ಗೌತಮ್ ಶೆಟ್ಟಿ

ಉಡುಪಿ-ಸ್ಪೋರ್ಟ್ಸ್ ಕೌನ್ಸಿಲ್ ಮಾಹೆ ಮಣಿಪಾಲ,
ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ & ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಮತ್ತು ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಜಿಲ್ಲೆ ಸಂಸ್ಥೆಗಳ ಜಂಟಿ ಆಯೋಜನೆಯಲ್ಲಿ, ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಮಾಹೆ ಮಣಿಪಾಲದಲ್ಲಿ  ” ಎ ರಿಫ್ರೆಶರ್ ಕ್ಲಿನಿಕ್ ಆನ್ ಅಥ್ಲೆಟಿಕ್ಸ್ ಮತ್ತು ಕ್ರಿಕೆಟ್ ಅಂಡ್ ಐಕ್ಯೂ ” ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್ ಉದ್ಘಾಟನಾ ಸಮಾರಂಭದಲ್ಲಿ ”ಕ್ರೀಡೆಯು ಜೀವನಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತದೆ,  ಯಾವ ರೀತಿಯ  ಕೌಶಲ್ಯಗಳನ್ನು ಕಲಿಸುತ್ತದೆ. ಕ್ರೀಡಾ ಕೌಶಲ್ಯಗಳು, ಸ್ಥಿತಿಸ್ಥಾಪಕತ್ವ, ನಾಯಕತ್ವ, ಹೊಣೆಗಾರಿಕೆ, ಗೌರವ ಮತ್ತು ತಾಳ್ಮೆಯಂತಹ ವಿಷಯಗಳನ್ನು ಕಲಿಯಲು ನಮಗೆ ಸಹಾಯ ಮಾಡುತ್ತದೆ ಹಾಗೂ ವೈಯಕ್ತಿಕ ಅಭಿವೃದ್ಧಿ ಮತ್ತು ಒಟ್ಟಾರೆ ಯೋಗಕ್ಷೇಮದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ,ಜೀವನದ ಯಶಸ್ಸಿನ ಆಧಾರವೇ ಕ್ರೀಡೆ ” ಎಂದರು.
ಈ‌ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಹೆಚ್.ವಿದ್ಯಾಕುಮಾರಿ,ಮಾಹೆ ಮಣಿಪಾಲ ಮುಖ್ಯಸ್ಥರಾದ ಹೆಚ್.ಎಸ್.ಬಳ್ಳಾಲ್,ಬಿ.ಸಿ.ಸಿ.ಐ ಕೋಚ್ ಮತ್ತು ಅಂಪಾಯರ್ ಅರುಣ್ ಭಾರದ್ವಾಜ್,ಕೆ.ಎಂ.ಸಿ ಡೀನ್ ಡಾ‌‌.ಪದ್ಮರಾಜ್ ಹೆಗ್ಡೆ,ಕೆ.ಎಂ.ಸಿ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ಉಪಸ್ಥಿತರಿದ್ದರು