ಪಡುಕೋಣೆ-ಕಳೆದ 15 ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ ಹಾಗೂ ಕ್ರೀಡಾ ಸೇವೆಯಲ್ಲಿ ತೊಡಗಿಸಿಕೊಂಡ ಪಡುಕೋಣೆ ಎಜ್ಯುಕೇಶನ್ & ಸ್ಪೋರ್ಟ್ಸ್ ಪ್ರಮೋಟರ್ಸ್ ಇವರ ವತಿಯಿಂದ ಅಗಲಿದ ಹಿರಿಯ ಕ್ರೀಡಾಪ್ರೋತ್ಸಾಹಕರಾದ ದಿ.ಸುರೇಶ್.ಡಿ. ಪಡುಕೋಣೆ ಮತ್ತು ದಿ.ಪ್ರಭು ಅರ್ಥರ್ ಪಿರೇರಾ ಇವರ ಸ್ಮರಣಾರ್ಥ ನಾಡ ಪಡುಕೋಣೆಯ ಗ್ರೆಗರಿ ಪ್ರೌಢಶಾಲಾ ಮೈದಾನದಲ್ಲಿ ಮಾರ್ಚ್ 24 ರಿಂದ 26 ರ ವರೆಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಆಟಗಾರರನ್ನೊಳಗೊಂಡ ಹೊನಲು ಬೆಳಕಿನ ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
*ದಿ.ಪ್ರಭು ಅರ್ಥರ್ ಪಿರೇರಾ ಸ್ಮರಣಾರ್ಥ ವಾಲಿಬಾಲ್ ಪಂದ್ಯಾಟ*
ದಿ.ಪ್ರಭು ಅರ್ಥರ್ ಪಿರೇರಾ ಇವರು ನಾಡ ಗುಡ್ಡೆ ಅಂಗಡಿಯ ಗೇರುಕಟ್ಟೆ ಪರಿಸರದಲ್ಲಿ ಜನಿಸಿ,
ಶೈಕ್ಷಣಿಕ,ಸಾಮಾಜಿಕ ಮತ್ತು ಕ್ರೀಡಾ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸಂಸ್ಥೆಯ ಸ್ಥಾಪಕ ಸದಸ್ಯರಾಗಿ ಹಾಗೂ ಕೋಶಾಧಿಕಾರಿಯಾಗಿ 8 ವರ್ಷಗಳ ದೀರ್ಘಾವಧಿಯ ಸೇವೆ ಸಲ್ಲಿಸಿ 25-4-2021 ರಂದು ನಿಧನರಾದರು. ಇವರ ಸ್ಮರಣಾರ್ಥ ಮಾರ್ಚ್ 24 ರಂದು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಆಯೋಜಿಸಲಾಗಿದೆ.
*ದಿ.ಸುರೇಶ್.ಡಿ.ಪಡುಕೋಣೆ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ*
ದಿ.ಸುರೇಶ್.ಡಿ.ಪಡುಕೋಣೆ ಇವರು ಪಡುಕೋಣೆಯ ಕೋಟಿನಕಳಿಯಲ್ಲಿ ಜನಿಸಿ,ತಮ್ಮೂರಿನ ಹೆಸರನ್ನು ಗಗನದೆತ್ತರಕ್ಕೇರಿಸಿದ ಮಹಾನ್ ವ್ಯಕ್ತಿ.ಇವರು ಉಡುಪಿ ಮತ್ತು ಮುಂಬಯಿಯಲ್ಲಿ ಅಪೋಲೋ ಬೋರಿಂಗ್ ಇಂಜಿನಿಯರಿಂಗ್ ವರ್ಕ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗ ನೀಡಿ,ಪ್ರಗತಿಪರ ಉದ್ಯಮಿ ಎನಿಸಿಕೊಂಡು ತಾನು ಕಲಿತ ಶಾಲೆಗೆ,ಬಡ ಮಕ್ಕಳ ಶಿಕ್ಷಣ,ದೈವಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಾ,ಪಡುಕೋಣೆಯಲ್ಲಿ ಅಪೋಲೋ ಟ್ರೋಫಿ ಪಂದ್ಯಾಟ ಸಂಘಟಿಸಿ,ಕ್ರಿಕೆಟ್ ಕ್ರಾಂತಿ ಎಬ್ಬಿಸಿ,
13/2/2022 ರಂದು ನಿಧನರಾದರು.ಇವರ ಸ್ಮರಣಾರ್ಥ ಮಾರ್ಚ್ 25 ಮತ್ತು 26 ರಂದು ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಮಾರ್ಚ್ 24 ರ ಸಂಜೆ 5.30 ಕ್ಕೆ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು,ವೇದಿಕೆಯಲ್ಲಿ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.ಈ ಸಂದರ್ಭ ವಿದ್ಯಾರ್ಥಿ ವೇತನ ವಿತರಣೆ ಮತ್ತು ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಾರ್ಚ್ 26 ರ ಸಂಜೆ 6.30 ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ.
ಪಡುಕೋಣೆ ಎಜ್ಯುಕೇಶನ್ ಮತ್ತು ಸ್ಪೋರ್ಟ್ಸ್ ಪ್ರಮೋಟರ್ಸ್ ಇವರ ಸಾಮಾಜಿಕ,ಶೈಕ್ಷಣಿಕ ಮತ್ತು ಕ್ರೀಡಾಸೇವೆಯಲ್ಲಿ ಕೈ ಜೋಡಿಸಿವವರು ಈ ಕೆಳಗೆ ನಮೂದಿಸಿದ ಬ್ಯಾಂಕ್ ಖಾತೆಗೆ ಆರ್ಥಿಕ ಸಹಾಯವನ್ನು ಮಾಡಬಹುದಾಗಿದೆ.
*ಬ್ಯಾಂಕ್ ಮಾಹಿತಿ*
Bank Name-BANK OF BARODA
Account Holder-Padukone Education & Sports Promoters
Acount Number-81920100007634
IFSC Code-BARB0VJNADA