ಕ್ರೀಡಾ ಕ್ಷೇತ್ರದಲ್ಲಿ ತನ್ನದೆ ಆದ ಚಾಪನ್ನು ಮೂಡಿಸುತ್ತ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವ ಪಡುಬಿದ್ರಿ ಯ ಬೋರ್ಡ್ ಶಾಲಾ ಮೈದಾನದಲ್ಲಿ ಈ ಬಾರಿ ಪಾಣರ ಪ್ರೀಮಿಯರ್ ಲೀಗ್ ಪಂದ್ಯಾಟಕ್ಕೆ ಸಿದ್ದವಾಗಿದೆ.
ಪಡುಬಿದ್ರಿಯ ಯುವ ಉತ್ಸಾಹಿ ಸಂಘಟಕರಾದ ಶ್ರೀ ಶಂಕರ್ ಕಂಚಿನಡ್ಕ ಇವರ ನೇತೃತ್ವದಲ್ಲಿ ತುಳುನಾಡಿನ ದೈವಾರಾಧನೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಲಿಕೆ ಯಾನೆ ಪಾಣರ ಸಮಾಜ ಬಾಂಧವರ ಒಗ್ಗಟ್ಟನ್ನು ಬಲಪಡಿಸುವ ಮತ್ತು ಸಮಾಜದ ಆಸಕ್ತ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಂಡರ್ ಆರ್ಮ್ ಮಾದರಿಯಲ್ಲಿ ಪ್ರೀಮಿಯರ್ ಲೀಗ್ ಪಂದ್ಯಾಟವನ್ನು ಪ್ರಥಮ ಬಾರಿಗೆ ಆಯೋಜಿಸಲಾಗಿದೆ.
ಆಕ್ಷನ್ ಪ್ರಕ್ರಿಯೆ
ಓವರ್ ಆರ್ಮ್ ಮಾದರಿಯ ಸಾಕಷ್ಟು ಪಂದ್ಯಾಟಕ್ಕೆ ಸಾಕ್ಷಿಯಾಗಿದ್ದ ಪಡುಬಿದ್ರ ಬೋರ್ಡ್ ಶಾಲಾ ಮೈದಾನ ಈ ಬಾರಿ ಅಂಡರ್ ಆರ್ಮ್ ಪಂದ್ಯಾಟಕ್ಕೂ ಪರಿಚಯವಾಗುತ್ತಿದೆ. ನಲಿಕೆ ಸಮಾಜದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಇಷ್ಟೊಂದು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಹಾಗೂ ಗರಿಷ್ಠ ಮೊತ್ತದ ನಗದು ಬಹುಮಾನಗಳನ್ನು ಒಳಗೊಂಡ ಪಂದ್ಯಾಟವಾಗಿದೆ. ಒಟ್ಟು 12 ಫ್ರಾಂಚೈಸಿಗಳ ನಡುವಿನ ಪ್ರೀಮಿಯರ್ ಲೀಗ್ ನಲ್ಲಿ ಸುಮಾರು 180 ಆಟಗಾರರು ಭಾಗವಹಿಸಲಿದ್ದು, ಇದೇ ಬರುವ ದಿನಾಂಕ 07.11.2021 ಭಾನುವಾರ ಪಡುಬಿದ್ರಿ ಅಮರ್ ಕಂಫರ್ಟ್ಸ್ ನಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ.
ಈಗಾಗಲೇ ಪಂದ್ಯಾಟಕ್ಕೆ ಚಿತ್ರರಂಗದ ಕಲಾವಿದರು,ಕ್ರೀಡಾ ತಾರೆಗಳು, ರಂಗಭೂಮಿ ನಟರು, ರಾಜಕೀಯ ಧುರೀಣರ ಶುಭಾಶಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಹುನಿರೀಕ್ಷೆಯೊಂದಿಗೆ ಪಂದ್ಯಾಟದ ರೂಪುರೇಷೆಗಳು ಸಿದ್ಧವಾಗುತ್ತಿದೆ.