ಕ್ರೀಡಾ ಕೃಷಿಯಲ್ಲಿ ಸದಾ ತೊಡಗಿರುವ ಸಂಸ್ಥೆ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ ಎಲ್ಲಾ ವಯೋಮಾನದವರಿಗೂ, ಸರಕಾರಿ ಸೇವಾ ನಿರತರಿಗೂ, ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಸಂಘಟಿಸಿ ಯಶಸ್ಸು ಕಂಡಿದೆ ಈ ಸಂಸ್ಥೆ. ಇತ್ತೀಚೆಗಷ್ಟೇ ವೃತ್ತಿಪರ ಶಿಕ್ಷಕರು, ಇಂಜಿನಿಯರ್ಸ್,ವೈದ್ಯರಿಗಾಗಿ ಯಶಸ್ವಿ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟವನ್ನು ಏರ್ಪಡಿಸಿತ್ತು.
ಟೊರ್ಪೆಡೋಸ್ ಸಂಸ್ಥೆ ಈ ಬಾರಿ ಬ್ಯಾಂಕ್ ನೌಕರರಿಗಾಗಿ ಅಂತರಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟವನ್ನು ಅಕ್ಟೋಬರ್ 27 ರವಿವಾರದಂದು ಹಳೆಯಂಗಡಿಯ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪಂದ್ಯಾಕೂಟವು ಪುರುಷರಿಗಾಗಿ ಸಿಂಗಲ್ಸ್ ಹಾಗೂ ಡಬಲ್ಸ್, ಮಹಿಳೆಯರಿಗಾಗಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ನಡೆಸಲಾಗುತ್ತಿದ್ದು ವಿಜೇತರು ಹಾಗೂ ರನ್ನರ್ಸ್ ಗಳನ್ನು ಆಕರ್ಷಕ ಬಹುಮಾನ ನೀಡಿ ಪುರಸ್ಕರಿಸಲಾಗುತ್ತಿದೆ.
ಈ ಪಂದ್ಯಾಕೂಟದ ನೇರ ಪ್ರಸಾರ “ಕ್ರಿಕ್ ಸೇ” ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.