ಉಡುಪಿ ಜಿಲ್ಲೆಯ ಪ್ರತಿಷ್ಠಿತ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ಅಕಾಡೆಮಿಗಳಾದ B.A.C.A ಮತ್ತುK.R.S ಕ್ರಿಕೆಟ್ ಅಕಾಡೆಮಿ ಇವರ ನೇತೃತ್ವದಲ್ಲಿ,ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಇವರ ಸಹಯೋಗದಲ್ಲಿ50 ರ ವರ್ಷ ಮೇಲ್ಪಟ್ಟ ಹಿರಿಯ ಆಟಗಾರರ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಲಾಗಿದೆ.
ನವೆಂಬರ್ 19,20 ಮತ್ತು 21 ರಂದು ನಿಟ್ಟೆಯ ಬಿ.ಸಿ.ಆಳ್ವ ಸ್ಟೇಡಿಯಂ ನಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ B.A.C.A ಮತ್ತು K.R.S ಅಕಾಡೆಮಿ ಸಮ್ಮಿಶ್ರಣದ ತಂಡ ಹಾಗೂ ಮುಂಬಯಿಯ ರಾಯಲ್ ಇಂಡಿಯನ್ಸ್ ತಂಡಗಳ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ.
ಕಾಪು ಮಂದಾರ ರೆಸಿಡೆನ್ಸಿಯಲ್ಲಿ ಆಟಗಾರರಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು,ಸ್ಪೋರ್ಟ್ಸ್ ಕನ್ನಡ ಟೂರ್ನಮೆಂಟ್ ನ ಮೂರುದಿನಗಳ ವಿದ್ಯಮಾನಗಳನ್ನು ಪ್ರಕಟಿಸಲಿದೆ.ಹೆಚ್ಚಿನ ವಿವರಗಳಿಗಾಗಿ 8217289848 ಮತ್ತು 9980489299 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.