20.8 C
London
Sunday, July 14, 2024
Homeಕ್ರಿಕೆಟ್ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೆಲವು ಹೊಸ ನಿಯಮಗಳು..! ಅಕ್ಟೋಬರ್ 1 ರಿಂದ ಹೊಸ ನಿಯಮ ಚಾಲ್ತಿಗೆ...

ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೆಲವು ಹೊಸ ನಿಯಮಗಳು..! ಅಕ್ಟೋಬರ್ 1 ರಿಂದ ಹೊಸ ನಿಯಮ ಚಾಲ್ತಿಗೆ ಬರುತ್ತದೆ…

Date:

Related stories

ವಿನಯ್ ಕುಮಾರ್ ಕರ್ನಾಟಕ ಕೋಚ್ ಆಗುವುದು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬೇಕಿಲ್ಲವೇ?

10 ವರ್ಷ..  ಕರ್ನಾಟಕ ತಂಡ ಕೊನೆಯ ಬಾರಿ ರಣಜಿ ಟ್ರೋಫಿ ಗೆದ್ದು.. 10 ವರ್ಷ..  ಕರ್ನಾಟಕ...

ಶಿಖರದ ತುದಿ ಕಂಡವನಿಗೆ ಸಣ್ಣ ಸೋಲು ಲೆಕ್ಕಕ್ಕೆ ಬಾರದು…!!!

ತುಂಬ ಸಲ ಹೀಗಾಗುತ್ತದೆ. ಕೆಲವೊಮ್ಮೆ ಯಾವುದಾದರೂ  ಸಾಧಕರ ಮೇಲೆ ನಮಗೆ ವಿನಾಕಾರಣದ...

ಭಾರತ ತಂಡಕ್ಕೆ ‘ರಿಂಗ್ ಮಾಸ್ಟರ್’ ಗಂಭೀರ್ ಕೋಚ್.. ನೆನಪಾಗುತ್ತಿದ್ದಾನೆ ಗ್ರೆಗ್ ಚಾಪೆಲ್..!

ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕಗೊಂಡ ಕ್ಷಣದಿಂದಲೂ...

ಜಸ್ಪ್ರೀತ್ ಬುಮ್ರಾ: ಅಪ್ಪ ಇಲ್ಲ.. ಅಜ್ಜ ಕೇರ್ ಮಾಡಲಿಲ್ಲ! ಅನಾಥನಂತೆ ಬದುಕಿದ ಬುಮ್ರಾ!

ಜಸ್ಪ್ರೀತ್ ಬುಮ್ರಾ.. ಯಾವುದೇ ಪರಿಚಯದ ಅಗತ್ಯವಿಲ್ಲದ ಹೆಸರು. ಅವರು ಈ ಪೀಳಿಗೆಯ...

ರೋಹಿತ್ ಶರ್ಮಾ.. ನೀನು ನಿಜಕ್ಕೂ ಧರ್ಮರಾಯನೇ..!

ಆ ಸುದ್ದಿ ಕೇಳಿದ ನಂತರ ರೋಹಿತ್ ಶರ್ಮಾ ಬಗ್ಗೆ ಇದ್ದ ಗೌರವ...
spot_imgspot_img
spot_imgspot_img
spot_imgspot_img
spot_imgspot_img
*ಬೌಲರ್​ ಈ ರೀತಿ ಮಾಡಿದ್ರೆ ಬ್ಯಾಟ್ಸ್​ಮನ್​ಗೆ ಸಿಗುತ್ತೆ ಐದು ರನ್..!?*
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ( ICC ) ಮುಂದಿನ ತಿಂಗಳು ಅಕ್ಟೋಬರ್‌ನಲ್ಲಿ ನಡೆಯಲಿರುವ T20 ವಿಶ್ವಕಪ್ ನಿಂದ ಕೇಲವು ಹೊಸ ನಿಯಮಗಳನ್ನು ಪರಿಚಯಿಸಲಿದೆ.
 ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್  ಪಂದ್ಯವಳಿ ಹೊಸ ನಿಯಮಗಳೊಂದಿಗೆ  ನಡೆಯಲಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಕ್ಟೋಬರ್ 1ರಿಂದ ಕ್ರಿಕೆಟ್ ನಲ್ಲಿ ಹೊಸ ನಿಯಮಗಳನ್ನು ಪರಿಚಯಿಸಲು ಮುಂದಾಗಿದೆ. ಈ ಹೊಸ ನಿಯಮಗಳು ಮಂಕಡಿಂಗ್ ಮತ್ತು ಹೊಸ ಬ್ಯಾಟರ್ ಸ್ಟ್ರೈಕಿಂಗ್ ಅಂಶಗಳನ್ನು ಒಳಗೊಂಡಿವೆ. ಕ್ರಿಕೆಟ್ ನಿಯಮಗಳನ್ನು ರೂಪಿಸುವ ಲಂಡನ್‌ನಲ್ಲಿರುವ ಮೆರಿಲ್ ಬೋರ್ನ್ ಕ್ರಿಕೆಟ್ ಕ್ಲಬ್ (MCC) ಈ ಹೊಸ ನಿಯಮಗಳನ್ನು ರೂಪಿಸಿದೆ. ಅತ್ಯಂತ ವಿವಾದಾತ್ಮಕ ಮಂಕಡಿಂಗ್ ವಿಕೆಟ್ ನಿಯಮದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ.
*ಐಸಿಸಿಯ ಎಂಟು ಹೊಸ  ನಿಯಮಗಳು ಈ ಕೆಳಗಿನಂತಿವೆ*
1) ಕ್ಯಾಚ್ ಔಟ್ ಆದ ನಂತರ ಸ್ಟ್ರೈಕ್‌ನಲ್ಲಿ ಹೊಸ ಬ್ಯಾಟ್ಸ್‌ಮನ್: ಕ್ರಿಕೆಟ್‌ನ ಹಳೆಯ ನಿಯಮಗಳ ಪ್ರಕಾರ, ಒಬ್ಬ ಬ್ಯಾಟ್ಸ್‌ಮನ್ ಕ್ಯಾಚ್ ಔಟ್ ಆಗಿದ್ದರೆ ಮತ್ತು ಇಬ್ಬರೂ ಬ್ಯಾಟ್ಸ್‌ಮನ್‌ಗಳು ಓಡುತ್ತಿರುವಾಗ ಒಬ್ಬರನ್ನೊಬ್ಬರು ದಾಟಿದರೆ, ನಾನ್ ಸ್ಟ್ರೈಕರ್ ಮುಂದಿನ ಎಸೆತವನ್ನು ಎದುರಿಸ ಬೇಕಿತ್ತು.
ಆದರೆ ಈಗ ಹೊಸ ನಿಯಮದ ಪ್ರಕಾರ ಇಬ್ಬರು ಬ್ಯಾಟ್ಸ್ ಮನ್ ಗಳನ್ನು ದಾಟಿದರೂ ಔಟಾದ ಬ್ಯಾಟ್ಸ್ ಮನ್ ಬದಲಿಗೆ ಹೊಸ ಬ್ಯಾಟ್ಸ್ ಮನ್ ಸ್ಟ್ರೈಕ್ ನಲ್ಲಿ ಆಡಬೇಕು.
2 ಚೆಂಡನ್ನು ಹೊಳೆಯುವಂತೆ ಮಾಡಲು ಲಾಲಾರಸ ಬಳಸುವಂತಿಲ್ಲ: ಕೊರೊನಾ ದಿಂದಾಗಿ  ಐಸಿಸಿ ಎರಡು ವರ್ಷಗಳ ಹಿಂದೆ ಆಟಗಾರರು ಚೆಂಡನ್ನು ಹೊಳೆಯಲು ಉಗುಳು ಅಥವಾ ಲಾಲಾರಸದ ಬಳಕೆ ಮಾಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿತ್ತು. ಆದರೆ ಕ್ರಿಕೆಟ್ ನಿಯಮಗಳನ್ನು ಮಾಡುವ ಮತ್ತು ತಿದ್ದುಪಡಿ ಮಾಡುವ ಅಧಿಕಾರವನ್ನು ಹೊಂದಿರುವ ಮೆರಿಲ್ ಬೋರ್ನ್  ಕ್ರಿಕೆಟ್ ಕ್ಲಬ್ (MCC) ಮಾರ್ಚ್ 2022 ರಲ್ಲಿ ಅದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
 3 ಮಂಕಡಿಂಗ್ ಅಲ್ಲ ಆದರೆ ರನ್ ಔಟ್: ಇನ್ನೂ ಮುಂದೆ, ನಾನ್ ಸ್ಟ್ರೈಕರ್ ಎಂಡ್‌ನಲ್ಲಿರುವ ಬ್ಯಾಟ್ಸ್‌ಮನ್ ಚೆಂಡನ್ನು ಬೌಲಿಂಗ್ ಮಾಡುವಾಗ ಕ್ರೀಸ್ ತೊರೆದರೆ, ಅದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಬೌಲರ್  ಸ್ಟಂಪ್ ಗೆ ಬೌಲ್​ ಎಸೆದು ಔಟ್​ ಮಾಡಿದರೆ ಬ್ಯಾಟ್ಸ್ ಮನ್ ಔಟ್ ಆಗುತ್ತಾರೆ. ಆದರೆ ಈಗ ಅಂತಹ ವಿಕೆಟ್ ಅನ್ನು ಮಂಕಡಿಂಗ್ ಎಂದು ಕರೆಯಲಾಗುವುದಿಲ್ಲ ಅದನ್ನು ಬ್ಯಾಟ್ಸ್‌ಮನ್‌ಗೆ ‘ರನ್ ಔಟ್’ ನೀಡಲಾಗುವುದು. ಈ ಹಿಂದೆ ಇಂತಹ ವಿಕೆಟ್‌ ವಿಚಾರವಾಗಿ ದೊಡ್ಡ ವಿವಾದವೇ ನಡೆದಿರುವುದು ಹಲವು ಬಾರಿ ಕಂಡು ಬಂದಿತ್ತು. ಆದರೆ ಈಗ ಅದನ್ನು ನಿಯಮದಡಿ ತರಲಾಗಿದೆ.
4 ಕ್ಷೇತ್ರ ರಕ್ಷಣೆ ಮಾಡುವಾಗ ಮನಬಂದಂತೆ ನಡೆದುಕೊಂಡರೆ: ಬೌಲರ್ ( ಎಸೆತಗಾರ ) ರನ್ ಅಪ್ ಆಗಿರುವಾಗ ಕ್ಷೇತ್ರ ರಕ್ಷಣೆಯಲ್ಲಿರುವ ತಂಡದ ಯಾವುದೇ ಆಟಗಾರನು ಅನುಚಿತವಾಗಿ ವರ್ತಿಸಿದರೆ ಅಥವಾ ಸ್ಲೆಡ್ ಮಾಡಿದರೆ, ಅಂಪೈರ್ ‘ಡೆಡ್ ಬಾಲ್’ ಎಂದು ಘೋಷಿಸುತ್ತಾರೆ. ಮತ್ತು ಬ್ಯಾಟಿಂಗ್ ಮಾಡುವ ತಂಡಕ್ಕೆ 5 ಪೆನಾಲ್ಟಿ ರನ್ ನೀಡಲಾಗುವುದು.
5, ಹೊಸ ಬ್ಯಾಟ್ಸ್‌ಮನ್‌ಗೆ ಮೈದಾನ ಪ್ರವೇಶಿಸಲು   ಎರಡು ನಿಮಿಷ ಸಮಯ:
ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ  ಒಬ್ಬ ಬ್ಯಾಟ್ಸ್‌ಮನ್ ಔಟಾದ ನಂತರ ಹೊಸ ಬ್ಯಾಟ್ಸ್‌ಮನ್‌ ಈಗ ಮೈದಾನಕ್ಕೆ ಪ್ರವೇಶಿಸಲು ಮೂರು ನಿಮಿಷಗಳ ಬದಲಿಗೆ ಎರಡು ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿದೆ. ಆದರೆ ಟಿ20 ಪಂದ್ಯಾವಳಿಗಳಿಗೆ ಇಗಿರುವಂತೆ 90 ಸೆಕೆಂಡ್ ನಿಯಮ ಮುಂದುವರಿಯಲಿದೆ.
6,  ನಿಧಾನಗತಿಯ ಬೌಲಿಂಗ್​ಗೆ ದಂಡ: ನಿಧಾನಗತಿಯ ಬೌಲಿಂಗ್  ವಿಚಾರದಲ್ಲಿ ಐಸಿಸಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. T20 ಪಂದ್ಯಗಳಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ಫೀಲ್ಡಿಂಗ್ ಮಾಡುವ ತಂಡವು ಪೆನಾಲ್ಟಿಯಾಗಿ ಉಳಿದ ಓವರ್‌ನಲ್ಲಿ 30 ಯಾರ್ಡ್ ವೃತ್ತದ ಹೊರಗೆ ಐವರ ಬದಲಿಗೆ ನಾಲ್ಕು ಫೀಲ್ಡರ್‌ಗಳನ್ನು ಮಾತ್ರ ಇರಿಸಲು ಅನುಮತಿಸಲಾಗಿದೆ.
ಈಗ ಅದೇ ನಿಯಮವನ್ನು ಏಕದಿನ ಪಂದ್ಯಗಳಿಗಳಲ್ಲು ಅನ್ವಯಿಸಲು ಹೊರಟಿದೆ. 2023ರ ವಿಶ್ವಕಪ್ ಬಳಿಕ ಈ ನಿಯಮ ಜಾರಿಗೆ ಬರಲಿದೆ.
7, ಬ್ಯಾಟಿಂಗ್ ಅಂಗಳದೊಳಗೆ ಹೊಡೆತಗಳನ್ನು ಆಡುವ ನಿಯಮ:
ಈಗ ಹೊಸ ನಿಯಮದ ಪ್ರಕಾರ, ಬ್ಯಾಟ್ಸ್‌ಮನ್ ಯಾವುದೇ ಚೆಂಡನ್ನು ಬ್ಯಾಟಿಂಗ್ ಅಂಗಳದೊಳಗೆ  ಆಡಬೇಕಾಗುತ್ತದೆ. ಕೆಲವೊಮ್ಮೆ ಚೆಂಡು ಬೌಲರ್‌ನ ಕೈ ಬಿಟ್ಟು ಪಿಚ್‌ನಿಂದ ಹೊರಗೆ ಹೋಗುತ್ತಿತ್ತು ಬ್ಯಾಟ್ಸ್‌ಮನ್ ಓಡಿ ಹೋಗಿ ಬ್ಯಾಟ್ ಮಾಡುತ್ತಿದ್ದರು. ಆದರೆ ಈಗ ಹಾಗೆ ಮಾಡಿದರೆ ಅಂಪೈರ್ ಡೆಡ್ ಬಾಲ್ ಎಂದು ಘೋಷಿಸುತ್ತಾರೆ.
8  ಹೈಬ್ರಿಡ್ ಪೀಚ್ ಬಳಕೆ:  ಪ್ರಸ್ತುತ, ಅನೇಕ ದೇಶಗಳಲ್ಲಿ ಕ್ರಿಕೆಟ್ ಆಡುವಾಗ ಹೈಬ್ರಿಡ್ ಪಿಚ್‌ಗಳನ್ನು ಬಳಸಲಾಗುತ್ತದೆ. ಆದರೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳಿಗೆ ಮಾತ್ರ ಇಂತಹ ಪಿಚ್‌ಗಳನ್ನು ಇದು ವರೆಗೆ ಬಳಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಪುರುಷರ ಕ್ರಿಕೆಟ್ ಪಂದ್ಯಗಳಲ್ಲಿ ಇಂತಹ ಪಿಚ್ ಗಳು ನಿರ್ಮಾಣವಾಗಲಿವೆ
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Latest stories

LEAVE A REPLY

Please enter your comment!
Please enter your name here

eighteen − 17 =