2020 ಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ರಾಷ್ಟ್ರಗೀತೆ ಹೊರಹೊಮ್ಮುವುದರ ಜೋತೆಗೆ ನೂರಾರು ಕೋಟಿ ಭಾರತೀಯರ ಹರ್ಷೋತ್ಸವ ಮುಗಿಲು ಮುಟ್ಟಿದೆ. ಹೌದು ನೀರಜ್ ಚೋಪ್ರಾ ಜಾವಲಿನ್ ಎಸೆತದಲ್ಲಿ ಗೆದ್ದ ಮೊದಲ ಬಂಗಾರದ ಪದಕ ಭಾರತೀಯರ ವಿಜಯೊತ್ಸವಕ್ಕೆ ಕಾರಣವಾಗಿದೆ.
ಈ ಹಿಂದೆ ಕಡೇಯಸಾರಿ ಒಲಿಂಪಿಕ್ಸ್ ನಲ್ಲಿ ನಮ್ಮ ರಾಷ್ಟ್ರಗೀತೆ ಮೊಳಗಿದ್ದು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಂದು ಭಾರತದ ಶೂಟರ್ ಅಭಿನವ್ ಬಿಂದ್ರಾ ಬಂಗಾರ ಗೆದ್ದು ಜಾಗತಿಕ ಕ್ರೀಡಾಕೂಟದಲ್ಲಿ ಭಾರತೀಯ ರಾಷ್ಟ್ರಗೀತೆ ಮೊಳಗುವಂತೆ ಮಾಡಿ ಇಡೀ ದೇಶಿಗರು ಅಂದು ಹೆಮ್ಮೆ ಪಡುವಂತೆ ಮಾಡಿದ್ದರು ಈ ಸಂತಸದ ಕ್ಷಣಕ್ಕೆ ಸರಿ ಸುಮಾರು 13 ವರ್ಷಗಳೆ ಕಳೆದಿದ್ದು ಅ ನಂತರದಲ್ಲಿ ಈಗ ಮತ್ತೆ ಒಲಿಂಪಿಕ್ಸ್‌ನಲ್ಲಿ ಭಾರತದ ರಾಷ್ಟ್ರಗೀತೆ ಟೋಕಿಯೋ ಒಲಿಂಪಿಕ್ ನ ಅಂಗಳದಲ್ಲಿ ಪ್ರತಿಧ್ವನಿಸಿದೆ. ಭಾರತೀಯರು ನೀರಜ್ ಚಿನ್ನ ಗೆದ್ದ ಕ್ಷಣವನ್ನು ಎದ್ದು ನಿಂತು ಟಿವಿ ಪರದೆಯಲ್ಲಿ ಟೋಕಿಯೋ ಒಲಿಂಪಿಕ್ಸ್ ನ ಅಂಗಳವನ್ನು ನೊಡುವಂತೆ ಮಾಡಿತ್ತು.
ಜಾವೆಲಿನ್ ಎಸೆತದಲ್ಲಿ ಭಾರತದ ನೀರಜ್ ಚೋಪ್ರಾ ಬಂಗಾರದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಆಗಸ್ಟ್ 7 ಶನಿವಾರ ಸಂಜೆ 4:30 ರಿಂದ 5:30 ರ ಅವಧಿಯಲ್ಲಿ ನೆಡೆದ ಟೋಕಿಯೋ ಒಲಿಂಪಿಕ್ಸ್ ನ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಭಾರತೀಯ ಆಟಗಾರ ನೀರಜ್ ಚೋಪ್ರಾ 87.58 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಫೈನಲ್ ಹಂತಕ್ಕೆ ಏರುವ ಅರ್ಹತ ಸ್ಫರ್ದೆಯ ಮೊದಲ ಎಸತೆದಲ್ಲೆ ಭರ್ಜರಿಯಾಗಿ ಎಸೆದು ಮೊದಲಿಗರಾಗಿ ಫೈನಲ್ ಗೆ ತಲುಪಿದ್ದರು. ಫೈನಲ್ ಹಂತದಲ್ಲು ಮೊದಲ ಎಸೆತದಲ್ಲೆ ಭರ್ಜರಿಯಾಗಿ ಎಸೆದು ಚಿನ್ನದ ಪದಕ ಖಚಿತ ಮಾಡಿಕೊಂಡಿದ್ದರು. ಇನ್ನೂಳಿದ ಪ್ರತಿ ಸ್ಪರ್ಧಿಗಳಲ್ಲಿ ಯಾರು ನೀರಜ್ ಎಸೆದ ಗಡಿಯನ್ನು ದಾಟಲಾಗಲಿಲ್ಲ ಕೊನೆಗೂ ಭಾರತಕ್ಕೆ ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಚೊಚ್ಚಲ ಬಂಗಾರದ ಪದಕ ನೀರಜ್ ಕೊರಳಿನಲ್ಲಿ ರಾರಾಜಿಸಿತು ಮತ್ತು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಲಭಿಸುತ್ತಿರುವ ಮೊದಲನೇ ಚಿನ್ನದ ಪದಕದ ಜೋತೆಗೆ ಭಾರತೀಯ ರಾಷ್ಟ್ರಗೀತೆ ಟೋಕಿಯೋದ ಕ್ರೀಡಾ ಗ್ರಾಮದಲ್ಲಿ ಮೊಳಗುವಂತೆ ಮಾಡಿದ ಕೀರ್ತಿ ನೂರಾರು ಕೋಟಿ ಭಾರತೀಯರ ಪ್ರತಿನಿಧಿ ಚಿನ್ನದ ಹುಡುಗ ನೀರಜ್ ಚೋಪ್ರಾ ಗೆ ಸಲ್ಲುತ್ತದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರ ಗೆದ್ದು ನೀರಜ್ ಒಲಿಂಪಿಕ್ಸ್‌ನಲ್ಲಿ ಅಪರೂಪದ ದಾಖಲೆಗಳಿಗೆ ಕಾರಣರಾಗಿದ್ದಾರೆ. ಅದೇನೆಂದರೆ ಇದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ 7ನೇ ಪದಕ, ಮೊದಲನೇ ಚಿನ್ನದ ಪದಕ ಮತ್ತು ಟೋಕಿಯೋ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಚೊಚ್ಚಲ ಚಿನ್ನದ ಪದಕವೆಂಬ ದಾಖಲೆ ನಿರ್ಮಿಸಿದ್ದಾರೆ. ಅದೂ ಪಾಲ್ಗೊಂಡ ಮೊದಲ ಒಲಿಂಪಿಕ್ಸ್‌ನಲ್ಲೇ ಬಂಗಾರಗೆದ್ದು ಇತಿಹಾಸ ನಿರ್ಮಿಸಿದ್ದಾರೆ 23ರ ಹರೆಯದ ಚೋಪ್ರಾ. ಮೂರು ಪ್ರಯತ್ನಗಳಲ್ಲಿ ತನ್ನ ಪ್ರಥಮ ಎಸೆತದಲ್ಲೆ ದೇಶಕ್ಕೆ ಚಿನ್ನದ ಪದಕದ ಸಾಧನೆ ತೋರಿದ್ದಾರೆ. ಆರಂಭದಲ್ಲಿ 87.03 ಮೀಟರ್, ಎರಡನೇ ಯತ್ನದಲ್ಲಿ 87.58 ಮೀಟರ್ ಮತ್ತು ಮೂರನೇ ಯತ್ನದಲ್ಲಿ 76.79 ಮೀಟರ್ ಸಾಧನೆ ತೋರಿದ್ದರು. ಇದರಲ್ಲಿ ಮೊದಲ ಎಸೆತವೆ ಚಿನ್ನದ ಪದಕದ ತಂದಿದೆ ಎರಡನೇ ಎಸೆತವು ಮೊದಲನೇ ಎಸೆತಕ್ಕಿಂತ ತುಸು ದೂರವೆ ಹೊಗಿದೆ ಅದರೆ ನೀರಜ್ ಮೊದಲ ಎಸೆತದ ಗಡಿಯನ್ನೆ ಸ್ಫರ್ದಿಗಳಲ್ಲಿ ಯಾರು ದಾಟಲಾಗಿಲ್ಲ.
ಅಗ್ರ ಐದು ಸ್ಥಾನ ಪಡೆದುಕೊಂಡವರ ಪಟ್ಟಿಯಲ್ಲಿ
ಪುರುಷರ ವಿಭಾಗದ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ (87.58 ಮೀಟರ್) ಪಡೆದುಕೊಂಡರೆ, ಝೆಕ್ ರಿಪಬ್ಲಿಕ್‌ನ ಜಾಕೂಬ್ ವಾಡ್ಲೆಜ್ಚ್ 86.67 ಮೀಟರ್ ಸಾಧನೆಯೊಂದಿಗೆ ಎರಡನೇ ಸ್ಥಾನಕ್ಕೆರಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇನ್ನೂ ಕಂಚಿನ ಪದಕ ಕೂಡ ಝೆಕ್ ರಿಪಬ್ಲಿಕ್ ವೆಸೆಲಿ ವಿಟೆಜ್ಸ್ಲಾವ್ (85.44 ಮೀಟರ್) ಪಾಲಾಗಿದೆ. ನಾಲ್ಕನೇ ಸ್ಥಾನ ಜರ್ಮನಿಯ ಜೂಲಿಯನ್ ವೆಬ್ಬರ್, ಐದನೇ ಸ್ಥಾನ ಪಾಕಿಸ್ತಾನದ ಅರ್ಷದ್ ನದೀಮ್ ಪಡೆದುಕೊಂಡಿದ್ದಾರೆ. ಆದರೆ ನೀರಜ್ ಚೋಪ್ರಾರ ವೈಯಕ್ತಿಕ ಬೆಸ್ಟ್ ಸಾಧನೆ 88.07 ಮೀಟರ್. ಈ ಸಾಧನೆಯ ಮೂಲಕ ನೀರಜ್ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದಾರೆ.
*ನೀರಜ್ ಚೋಪ್ರಾ ಅವರ ಪ್ರಮುಖ ಮಾಹಿತಿ ಮತ್ತು ಸಾಧನೆ…*
* ಹೆಸರು: ನೀರಜ್ ಚೋಪ್ರಾ
* ಹುಟ್ಟಿದ ದಿನಾಂಕ: ಡಿಸೆಂಬರ್ 24, 1997
* ವಯಸ್ಸು: 23
* ಹುಟ್ಟಿದ ಸ್ಥಳ: ಪಾಣಿಪತ್, ಹರಿಯಾಣ
* ಕ್ರೀಡೆ/ಈವೆಂಟ್ (ಗಳು): ಜಾವೆಲಿನ್ ಥ್ರೋ
* ವೈಯಕ್ತಿಕ ಅತ್ಯುತ್ತಮ: 88.07 ಮೀ (ರಾಷ್ಟ್ರೀಯ ದಾಖಲೆ)
ಚೋಪ್ರಾ ಅವರಿಂದಾದ ಪ್ರಮುಖ ಸಾಧನೆಗಳು
* ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ
* 2018 ಏಷ್ಯನ್ ಗೇಮ್ಸ್ ಚಿನ್ನದ ಪದಕ
* 2018 ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ
* 2016 ವಿಶ್ವ ಜೂನಿಯರ್ ಚಾಂಪಿಯನ್
* ಕಿರಿಯ ವಿಶ್ವ ದಾಖಲೆ ಹೊಂದಿರುವವರು
ಭಾರತಕ್ಕೆ ಚಿನ್ನಗೆದ್ದುಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರಿಗೆ ನೂರಾರು ಕೋಟಿ ಭಾರತೀಯರ ಪರವಾಗಿ ಕೋಟಿ ಕೋಟಿ ನಮನಗಳು…..ನಿಂತು *ಜೈ ಹಿಂದ್*