ಸಮಾಜ ಸೇವೆ ಹಾಗೂ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನಾವರಣದ ಸದುದ್ದೇಶಕ್ಕಾಗಿ ಕೋಟ ಮಣೂರಿನ ನವೋದಯ ಫ್ರೆಂಡ್ಸ್ (ರಿ)ಹರ್ತಟ್ಟು ಸಂಸ್ಥೆ ಆಯೋಜಿಸಿದ ಎರಡು ದಿನಗಳ ಮೂವತ್ತು ಗಜಗಳ ಕ್ರಿಕೆಟ್ ಪಂದ್ಯಾವಳಿ “ಶ್ರೀ ಅಜ್ಜಯ್ಯ ಟ್ರೋಫಿ-2020” ಪ್ರಶಸ್ತಿಯನ್ನು ನವೋದಯ ಫ್ರೆಂಡ್ಸ್ ಗಿಳಿಯಾರು ಜಯಿಸಿದೆ.
36 ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯ ಸೆಮಿಫೈನಲ್ಸ್ ನಲ್ಲಿ
ಚಾಲೆಂಜ್ ಕುಂದಾಪುರ ಬನ್ನಾಡಿ ಫ್ರೆಂಡ್ಸ್ ತಂಡವನ್ನು ಹಾಗೂ ನವೋದಯ ಫ್ರೆಂಡ್ಸ್ ಚಾಲೆಂಜ್ ತಂಡವನ್ನು ಸೋಲಿಸಿ ಫೈನಲ್ ಗೆ ಬಡ್ತಿ ಪಡೆದಿದ್ದರು.ಫೈನಲ್ ನಲ್ಲಿ ನವೋದಯ ಫ್ರೆಂಡ್ಸ್ ಚಾಲೆಂಜ್ ತಂಡವನ್ನು ಮಣಿಸಿ ಶ್ರೀ ಅಜ್ಜಯ್ಯ ಟ್ರೋಫಿ-2020 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.
ವೈಯಕ್ತಿಕ ಪ್ರಶಸ್ತಿ ಕ್ರಮವಾಗಿ ಬೆಸ್ಟ್ ಬ್ಯಾಟ್ಸ್‌ಮನ್ ಅಶ್ವಿನ್ ಕುಂಭಾಶಿ,ಬೆಸ್ಟ್ ಬೌಲರ್ ಯೋಗೀಶ್ ಹಿರೇಮಹಾಲಿಂಗೇಶ್ವರ ಫ್ರೆಂಡ್ಸ್, ಬೆಸ್ಟ್ ಫೀಲ್ಡರ್ ನವೋದಯ ಫ್ರೆಂಡ್ಸ್ ನ ಕೀರ್ತೀಶ್
ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಹಿರೇಮಹಾಲಿಂಗೇಶ್ವರ ಫ್ರೆಂಡ್ಸ್ ನ ಪ್ರವೀಣ್ ಪಡೆದುಕೊಂಡರು.
ಶನಿವಾರ ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿವೇಕ ಹೈಸ್ಕೂಲ್ ನ ಶಿಕ್ಷಕರು ಶ್ರೀ. ಸದಾಶಿವ ಹೊಳ್ಳ,ಮಣೂರು ರಾಮ ಪ್ರಸಾದ್ ಶಾಲೆಯ ಹಿರಿಯ ಶಿಕ್ಷಕರು ಶ್ರೀ.ಉದಯ್ ಕುಮಾರ್ ಮಯ್ಯ ಮಣೂರು,ಕೋಟ ರಾಮಕೃಷ್ಣ ಆಚಾರ್ ಉಪಸ್ಥಿತರಿದ್ದು,
ಕೊರೋನಾ ಸಂದರ್ಭದಲ್ಲಿ ಹಗಲಿರುಳು ಸಂತ್ರಸ್ತರಿಗಾಗಿ ಶ್ರಮಿಸಿದ ಆಶಾ ಕಾರ್ಯಕರ್ತೆ ಶ್ರೀಮತಿ ಯಶೋದಾ ಇವರನ್ನು ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ
ಮಣೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸತೀಶ್ ಕುಂದರ್ ಹಾಗೂ ನವೋದಯ ಫ್ರೆಂಡ್ಸ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು…