Categories
ಇತರೆ

ರಾಷ್ಟ್ರೀಯ ಕ್ರೀಡಾಪಟು ಹಾಗೂ ಮೀನುಗಾರರ ಮುಖಂಡ ಲೋಕನಾಥ್ ಬೋಳಾರ ನಿಧನ

ಮಂಗಳೂರಿನ ಮೀನುಗಾರ ಮುಖಂಡ ,ಅಂತರಾಷ್ಟ್ರೀಯ ವೇಯ್ಟ್ ಲಿಫ್ಟರ್ ಲೋಕನಾಥ ಬೋಳಾರ(73) ನಗರದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.
ನಿವೃತ್ತ ರೈಲ್ವೇ ಅಧಿಕಾರಿಯಾಗಿದ್ದ ಇವರು,ಯಾಂತ್ರಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.ಕರ್ನಾಟಕ ರಾಜ್ಯ ಮೀನುಗಾರರ ಕ್ರಿಯಾ ಸಮಿತಿಯ ಪದಾಧಿಕಾರಿಯಾಗಿದ್ದರು.ಭಾರ ಎತ್ತುವ ಸ್ಪರ್ಧೆಯಲ್ಲಿ ದೇಶ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಸ್ಪರ್ಧಿಸಿದ್ದಾರೆ.ಜಾವೆಲಿನ್ ತ್ರೋ,ಗುಂಡು ಎಸೆತ ಕ್ರೀಡೆಯಲ್ಲೂ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕೊಡುಗೈ ದಾನಿಯಾಗಿದ್ದ ಇವರು,ಮೀನುಗಾರಿಕಾ ಬಂದರಿನಲ್ಲಿ ಆಳಸಮುದ್ರ ಮೀನುಗಾರಿಕೆಯ ಮೀನು ಮಾರಾಟ ವ್ಯವಸ್ಥೆಯನ್ನು ಸಹಕಾರಿ ಕ್ಷೇತ್ರಕ್ಕೆ ಪರಿಚಯಿಸಿದವರು.ರಾಜ್ಯ ಮೀನುಗಾರಿಕಾ ಇಲಾಖೆಗೆ ಮೀನುಗಾರರ ಪರವಾಗಿ ಸಲಹೆಗಾರರಾಗಿದ್ದರು.ಕರಾವಳಿ ಕರ್ನಾಟಕದ ಆಪತ್ಪಾಂಧವರಾಗಿದ್ದರು.ಮೃತರು ಪತ್ನಿ,ಇಬ್ಬರು ಪುತ್ರರನ್ನು ಅಗಲಿದ್ದಾರೆ.
*ಸಂತಾಪ*
ಪರ್ಸಿನ್ ಮೀನುಗಾರರ ಸಂಘ,ಟ್ರಾಲ್ ಬೋಟ್ ಮೀನುಗಾರರ ಸಂಘ,ಗಿಲ್ ನೆಟ್ ಮೀನುಗಾರರ ಸಂಘ,ಸೀ ಫುಡ್ ಬೈಯರ್ಸ್ ಅಸೋಸಿಯೇಶನ್, ಮೀನು ವ್ಯಾಪಾರಸ್ಥರ ಸಂಘಗಳು,
ಉಳ್ಳಾಲ ಆಳ ಸಮುದ್ರ ಬೋಟು ಮಾಲಕರ ಸಂಘದ ಅಧ್ಯಕ್ಷ ದಯಾನಂದ ಪುತ್ರನ್,
ಮಾರುತಿ ಕ್ರಿಕೆಟರ್ಸ್,ಮಾರುತಿ ಯುವಕ ಮಂಡಲ(ರಿ)ಉಳ್ಳಾಲ ಇದರ ಮಾಜಿ ಅಧ್ಯಕ್ಷ ಹಾಗೂ ಮೊಗವೀರ ಸಂಘ(ರಿ)ಉಳ್ಳಾಲದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ ಸಂತಾಪ ಸೂಚಿಸಿದ್ದಾರೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

16 + 8 =