ಬೆಂಗಳೂರು-ಪೀಣ್ಯದಲ್ಲಿ ನಡೆಯುತ್ತಿರುವ ಫ್ರೆಂಡ್ಸ್ ಬೆಂಗಳೂರು ಕಪ್-2023 ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯಾಟದಲ್ಲಿ ನ್ಯಾಶ್ ಬೆಂಗಳೂರು ಡ್ರೀಮ್ ಇಲೆವೆನ್ ಚೆನ್ನೈ ತಂಡವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ನ್ಯಾಶ್ ಬೆಂಗಳೂರು ಜಾನ್ ಬಿರುಸಿನ ಬ್ಯಾಟಿಂಗ್ 17 ರನ್,ಪ್ರಶಾಂತ್ ಕುಟ್ಟಿ 11 ರನ್ ನೆರವಿನಿಂದ 8 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿ ಎದುರಾಳಿಗೆ ಕಠಿಣ ಗುರಿಯನ್ನು ನೀಡಿತ್ತು.
ಚೇಸಿಂಗ್ ವೇಳೆ ನ್ಯಾಶ್ ಬೌಲಿಂಗ್ ದಾಳಿಗೆ ರನ್ ಗಳಿಸಲು ಪರದಾಡಿದ ಡ್ರೀಮ್ ಇಲೆವೆನ್ ಚೆನ್ನೈ 8 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 49 ರನ್ ಗಳಿಸಲಷ್ಟೇ ಶಕ್ತವಾಯಿತು.
ನ್ಯಾಶ್ ಆರಂಭಿಕ ಬ್ಯಾಟರ್ ಜಾನ್ ಅರ್ಹವಾಗಿ ಪಂದ್ಯಶ್ರೇಷ್ಟ ಗೌರವಕ್ಕೆ ಭಾಜನರಾದರು..