ಬಹ್ರೇನ್-ಬುಸೈಟಿನ್ ಮೈದಾನದಲ್ಲಿ ಬಹ್ರೇನ್ ನಲ್ಲಿ ಅತ್ಯಂತ ರೋಚಕವಾಗಿ ಸಾಗಿದ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಫೈನಲ್ ನಲ್ಲಿ ನಮ್ಮ ಕುಡ್ಲ ತಂಡ ಗೆಲುವು ಸಾಧಿಸಿ,ಕೆ.ಪಿ.ಎಲ್-2022 ಚಾಂಪಿಯನ್ಸ್ಪಟ್ಟ ಅಲಂಕರಿಸಿದೆ.
ಲೀಗ್ ಕಮ್ ನಾಕೌಟ್ ಮಾದರಿ ಯಲ್ಲಿ ನಡೆದ ಈ ಪಂದ್ಯಾಟದಲ್ಲಿ ನಮ್ಮ ಕುಡ್ಲ,ಅಭಿಜ್ಞಾ ಇಲೆವೆನ್,ರಿಫಾ ಇಂಡಿಯನ್ ಸ್ಟಾರ್,ಜೈ ಕರ್ನಾಟಕ, ಸಾಚಿ ಇಲೆವೆನ್,
ಕರಾವಳಿ ಕಿಂಗ್ಸ್,ಝಿಂಝ್ ಫ್ರೆಂಡ್ಸ್ ಮತ್ತು ಬಿ.ಎಮ್ ಸಿ ಹೀಗೆ ಕರ್ನಾಟಕದ ಆಟಗಾರರನ್ನೊಳಗೊಂಡ ಒಟ್ಟು 8 ಫ್ರಾಂಚೈಸಿಗಳು ಭಾಗವಹಿಸಿದ್ದವು.
ಲೀಗ್ ಹಂತದ ರೋಚಕ ಸೆಣಸಾಟದ ಬಳಿಕ ಉಪಾಂತ್ಯ ಪಂದ್ಯಗಳಲ್ಲಿ,ನಮ್ಮ ಕುಡ್ಲ ತಂಡ ಬಿ.ಎಮ್.ಸಿ ತಂಡವನ್ನು ಮತ್ತು ಜೈ ಕರ್ನಾಟಕ ತಂಡ ಕರಾವಳಿ ಕಿಂಗ್ಸ್ ತಂಡವನ್ನು ಸೋಲಿಸಿ ಫೈನಲ್ ಗೆ ಎಂಟ್ರಿ ಪಡೆದಿದ್ದರು.ಫೈನಲ್ ನಲ್ಲಿ
ನಮ್ಮ ಕುಡ್ಲ ತಂಡ ಜೈ ಕರ್ನಾಟಕ ತಂಡದ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ಸ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
ಪ್ರಥಮ ಪ್ರಶಸ್ತಿ ರೂಪದಲ್ಲಿ ನಮ್ಮ ಕುಡ್ಲ ತಂಡ 666 ಡಾಲರ್,ದ್ವಿತೀಯ ಪ್ರಶಸ್ತಿ ರೂಪದಲ್ಲಿ ಜೈ ಕರ್ನಾಟಕ 333ಡಾಲರ್ ಸಹಿತ ಆಕರ್ಷಕ ಟ್ರೋಫಿಗಳನ್ನು ತನ್ನದಾಗಿಸಿ ಕೊಂಡರು.
ವೈಯಕ್ತಿಕ ಪ್ರಶಸ್ತಿ ರೂಪದಲ್ಲಿ ಕ್ರಮವಾಗಿ ಫೈನಲ್ ನ ಪಂದ್ಯಶ್ರೇಷ್ಟ ಸಾಗರ್ ಶೆಟ್ಟಿ, ಬೆಸ್ಟ್ ಫೀಲ್ಡರ್ ಜೈ ಕರ್ನಾಟಕ ಸಂದೇಶ್,ಬೆಸ್ಟ್ ವಿಕೆಟ್ ಕೀಪರ್ ಝಿಂಝ್ ಫ್ರೆಂಡ್ಸ್ ನ ಅಶೋಕ್,ಬೆಸ್ಟ್ ಬೌಲರ್ ಸಾಗರ್ ಶೆಟ್ಟಿ ನಮ್ಮ ಕುಡ್ಲ, ಬೆಸ್ಟ್ ಬ್ಯಾಟ್ಸ್‌ಮನ್ ಸುನಿಲ್ ಕುಲಾಲ್ ಕರಾವಳಿ ಕಿಂಗ್ಸ್,ಸರಣಿಯುದ್ದಕ್ಕೂ ಶ್ರೇಷ್ಠ ನಿರ್ವಹಣೆ ನೀಡಿದ ಜೈ ಕರ್ನಾಟಕದ ಅರುಣ್ ಶೆಟ್ಟಿ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಸಮಾರೋಪ ಸಮಾರಂಭದಲ್ಲಿ ಕೆ.ಪಿ.ಎಲ್-2022 ನ ಯಶಸ್ಸಿನ ರೂವಾರಿಗಳಾದ ವಿವಿನ್ಜಿತ್ ಕುಂದಾಪುರ ಮತ್ತು ಸಂಪತ್ ಶೆಟ್ಟಿ ಸುರತ್ಕಲ್ ಭಾಗವಹಿಸಿದ ಎಲ್ಲಾ ತಂಡಗಳಿಗೂ ಮತ್ತು ಪ್ರೋತ್ಸಾಹಕರಿಗೂ ಧನ್ಯವಾದಗಳನ್ನು ಸಲ್ಲಿಸಿದರು.