18.1 C
London
Friday, June 14, 2024
Homeಕ್ರಿಕೆಟ್ದಾವಣಗೆರೆಯಲ್ಲಿ ಅಬ್ಬರಿಸಿದ ಗಿಳಿಯಾರು ನಾಗ-ಫ್ರೆಂಡ್ಸ್ ಬೆಂಗಳೂರಿಗೆ ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ಸ್ ಯೋಗ

ದಾವಣಗೆರೆಯಲ್ಲಿ ಅಬ್ಬರಿಸಿದ ಗಿಳಿಯಾರು ನಾಗ-ಫ್ರೆಂಡ್ಸ್ ಬೆಂಗಳೂರಿಗೆ ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ಸ್ ಯೋಗ

Date:

Related stories

ಕನ್ನಡಿಗ ‘ಜ್ಯಾಕ್’ ಕಟ್ಟಿದ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನವನ್ನೇ ಹೊಡೆದು ಹಾಕಿತು..!

ಮೊನ್ನೆ ಮೊನ್ನೆಯೊಷ್ಟೇ ಅಮೆರಿಕ ತಂಡ ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ...

ಟೆನ್ನಿಸ್ ಲೋಕಕ್ಕೆ ಮತ್ತೆ ಕಳೆ ತರಬಲ್ಲನಾ ಕಾರ್ಲಿಟೋ….???

ಭಾರತ ತಂಡ ತನ್ನ ಅತ್ಯಂತ ಕಡಿಮೆ ಟಿ 20 ಮೊತ್ತವನ್ನು ಕಾಪಿಟ್ಟುಕೊಂಡು...

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...
spot_imgspot_img
ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಎಂದೇ ಖ್ಯಾತಿ ಪಡೆದ “ಶಾಮನೂರು ಡೈಮಂಡ್-ಶಿವಗಂಗಾ ಕಪ್-2022 ರೋಚಕ ಫೈನಲ್ ಪಂದ್ಯದಲ್ಲಿ  ರೇಣು ಗೌಡ ಇವರ ಸಾರಥ್ಯದಲ್ಲಿ ಫ್ರೆಂಡ್ಸ್ ಬೆಂಗಳೂರು ತಂಡ ಮಧ್ಯಪ್ರದೇಶದ ಬಲಿಷ್ಠ ಹಿಂದೂ-ಮುಸ್ಲಿಂ ಏಕತಾ ತಂಡವನ್ನು ಸೋಲಿಸಿ ಎರಡನೇ ಬಾರಿ ಚಾಂಪಿಯನ್ಸ್ ತಂಡವಾಗಿ ಮೂಡಿ ಬಂದಿತು.
 
ದಾವಣಗೆರೆಯ ಜನಪ್ರಿಯ ಶಾಸಕರು ಮತ್ತು ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ ನವರ ಧರ್ಮಪತ್ನಿ ದಿ.ಪಾರ್ವತಮ್ಮನವರ ಸವಿ ನೆನೆಪಿನ ಅಂಗವಾಗಿ ನಡೆಯುವ  ಟೆನಿಸ್ಬಾಲ್ ಕ್ರಿಕೆಟ್ ವಿಶ್ವಕಪ್ ಖ್ಯಾತಿಯ ಈ ಪಂದ್ಯಾಟ ಸತತ ಒಂದು ವಾರಗಳ ಕಾಲ ಹೊನಲು ಬೆಳಕಿನಲ್ಲಿ ಸಾಗಿತ್ತು.ಹೊರ ರಾಜ್ಯದ ತಂಡಗಳ ಸಹಿತ ಒಟ್ಟು 50 ತಂಡಗಳು ಭಾಗವಹಿಸಿ ವಿನೂತನ ದಾಖಲೆ ಬರೆಯಿತು.
 
ಅತ್ಯಂತ ಸಂಘರ್ಷ ಪೂರ್ಣವಾಗಿ ನಡೆದ ಸೆಮಿಫೈನಲ್ಸ್ ನಲ್ಲಿ ಫ್ರೆಂಡ್ಸ್ ಬೆಂಗಳೂರು,ಜೈ ಕರ್ನಾಟಕ  ತಂಡವನ್ನು ಮತ್ತು ಹಿಂದೂ ಮುಸ್ಲಿಂ ಏಕತಾ ತಂಡ ನವಭಾರತ ದಾವಣಗೆರೆ ತಂಡವನ್ನು ಸೋಲಿಸಿ ಫೈನಲ್ ಟಿಕೆಟ್ ಪಡೆದಿದ್ದರು.ನವಭಾರತ್ ದಾವಣಗೆರೆ ತೃತೀಯ ಬಹುಮಾನ ಪಡೆದರು.
 
*ಗಿಳಿಯಾರು ನಾಗ ಭರ್ಜರಿ ಆಟಕ್ಕೆ ತಲೆಬಾಗಿದ ಮಧ್ಯಪ್ರದೇಶದ ತಂಡ*
 
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮಧ್ಯಪ್ರದೇಶ ತಂಡ ನಿಗದಿತ 6 ಓವರ್ ಗಳಲ್ಲಿ 55 ರನ್ ಗಳ ಗುರಿ ನೀಡಿತ್ತು.ಚೇಸಿಂಗ್ ವೇಳೆ ಮೊದಲ ಓವರ್ ನಲ್ಲೇ 2 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ,ಆಪತ್ಪಾಂಧವನಾಗಿ ಕ್ರೀಸ್ ಗೆ ಆಗಮಿಸಿದ ಫ್ರೆಂಡ್ಸ್ ನ  ಗಿಳಿಯಾರು ನಾಗ,ನಾಯಕ ಮ್ಯಾಡಿ ಜೊತೆಗೂಡಿ ಇನ್ನಿಂಗ್ಸ್ ಆಧರಿಸಿದರು.ಮ್ಯಾಡಿ 13 ರನ್ ಗಳಿಸಿ ಪೆವಿಲಿಯನ್ ನಿರ್ಗಮನದ ಬಳಿಕ,ಸಿಡಿದೆದ್ದ ನಾಗ ಭರ್ಜರಿ 3 ಸಿಕ್ಸರ್ ಮತ್ತು ಕೊನೆಯ ಓವರ್ ನ 5ನೇ ಎಸೆತದಲ್ಲಿ ಸಿಡಿಸಿದ ಮನಮೋಹಕ ಬೌಂಡರಿ ಪಂದ್ಯದ ಫಲಿತಾಂಶದ ದಿಕ್ಕನ್ನೇ ಬದಲಾಯಿಸಿತು.ಫೈನಲ್ ಹೀರೋ ನಾಗ ಅರ್ಹವಾಗಿಯೇ ಫೈನಲ್ ಪಂದ್ಯ ಶ್ರೇಷ್ಟ ಗೌರವಕ್ಕೆ ಭಾಜನರಾದರು.
 
ಜನವರಿ ಕೊನೆಯ ವಾರದಲ್ಲಿ ಉಚಿತ ಪ್ರವೇಶಾತಿಯ ದಾಖಲೆಯ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಸಲಿರುವ ಫ್ರೆಂಡ್ಸ್ ಬೆಂಗಳೂರು ತಂಡಕ್ಕೆ 2 ನೇ ಬಾರಿಯ ಈ ದಾವಣಗೆರೆಯ ಚಾಂಪಿಯನ್‌ ಪ್ರಶಸ್ತಿ ಮತ್ತಷ್ಟು ಹುಮ್ಮಸ್ಸು,ಖುಷಿಯನ್ನು ಹೆಚ್ಚಿಸಿದೆ.
 
ಟೂರ್ನಮೆಂಟ್ ನ ಬೆಸ್ಟ್ ಬೌಲರ್ ನವಭಾರತ್ ದಾವಣಗೆರೆ ತಂಡದ ಸಂಪತ್,ಬೆಸ್ಟ್ ಬ್ಯಾಟ್ಸ್‌ಮನ್‌ ಹಿಂದು ಮುಸ್ಲಿಂ ಏಕತಾ ಮಧ್ಯಪ್ರದೇಶದ ಅಜೀಮ್,ಬೆಸ್ಟ್ ಕೀಪರ್ ಮಧ್ಯಪ್ರದೇಶದ ದಿಲೀಪ್ ಮತ್ತು ಪಂದ್ಯಾಟದುದ್ದಕ್ಕೂ ಸರ್ವಾಂಗೀಣ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಸಾಗರ್ ಭಂಡಾರಿ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
 
ಸಮಾರೋಪ ಸಮಾರಂಭದಲ್ಲಿ 
ಕಾಂಗ್ರೆಸ್ ನಾಯಕರು,ಮಾಜಿ ಸಚಿವರಾದ ಎಸ್.ಎಸ್.
ಮಲ್ಲಿಕಾರ್ಜುನ,ಉದ್ಯಮಿ ಶಿವಗಂಗಾಶ್ರೀನಿವಾಸ್,ಶಾಮನೂರು ಶಿವಶಂಕರಪ್ಪನವರ ಆಪ್ತ ಕಾರ್ಯದರ್ಶಿ ದಿನೇಶ್.ಕೆ.ಶೆಟ್ಟಿ,ಕುರುಡಿ ಗಿರೀಶ್,ಚಲನಚಿತ್ರ ನಿರ್ಮಾಪಕರಾದ ಉದಯ್ ಶಿವಕುಮಾರ್,ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್,
ಟೂರ್ನಮೆಂಟ್ ನ ಪ್ರಮುಖ ರೂವಾರಿ ಜಯಪ್ರಕಾಶ್ ಗೌಡ(ಜೆ.ಪಿ),ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಪ್ರವರ್ತಕರಾದ ಕೋಟ ರಾಮಕೃಷ್ಣ ಆಚಾರ್  ಮತ್ತು ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.
 
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ರೂಪದಲ್ಲಿ, ವೀಕ್ಷಕ ವಿವರಣೆಯಲ್ಲಿ ಶಿವನಾರಾಯಣ್ ಐತಾಳ್ ಕೋಟ,ವಿನಯ್ ಉದ್ಯಾವರ ಮತ್ತು ಪ್ರಶಾಂತ್ ಅಂಬಲಪಾಡಿ ಸಹಕರಿಸಿದರೆ,ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಮತ್ತು ತಂಡ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
 
ದಾವಣಗೆರೆಯ ರಾಷ್ಟ್ರೀಯ ಮಟ್ಟದ ಪಂದ್ಯಾಟವನ್ನು ವೀಕ್ಷಿಸಲು ಸಹಸ್ರಾರು ಮಂದಿ ಮೈದಾನಕ್ಕೆ ಆಗಮಿಸಿದರೆ,M.Sports ಯೂಟ್ಯೂಬ್ ಚಾನೆಲ್ ನ ಮೂಲಕ ಪಂದ್ಯಾಟವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

thirteen − thirteen =