*ಕೆ.ಆರ್.ಕೆ.ಆಚಾರ್ಯ-ಸ್ಪೋರ್ಟ್ಸ್ ಕನ್ನಡ ವರದಿ*
ಮಂಗಳೂರು-ಇಲ್ಲಿನ ನೆಹರೂ ಮೈದಾನದಲ್ಲಿ ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್ (ರಿ)ಉಳ್ಳಾಲ ಇವರ ಆಶ್ರಯದಲ್ಲಿ,ಅಗಲಿದ ಮಿತ್ರರ ಸವಿನೆನಪಿಗಾಗಿ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಮೊದಲೆರಡು ದಿನ ನಡೆಯಲಿರುವ-“ಮೊಗವೀರ ಪ್ರೀಮಿಯರ್ ಲೀಗ್” ನ್ನು ನಾಡೋಜ.ಡಾ.ಜಿ.ಶಂಕರ್ ದೀಪ ಬೆಳಗಿಸಿ ಹಾಗೂ ಮುಖ್ಯ ಅತಿಥಿಗಳೊಂದಿಗೆ ಬಲೂನ್ ಹಾರಿ ಬಿಡುವುದರ ಮೂಲಕ ಪಂದ್ಯಾಟಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ)ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಮಾತನಾಡಿ “ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ, ಹೊಂದಾಣಿಕೆ ಮುಖ್ಯ,ಆಟಗಾರರು ಕ್ರೀಡಾಸ್ಪೂರ್ತಿಯಿಂದ ಆಡಿ ಪಂದ್ಯಾಟವನ್ನು ಯಶಸ್ವಿಗೊಳಿಸಿ” ಎಂದರು.
ಕಾಂಚನಾ ಮೋಟಾರ್ಸ್ ನ ಆಡಳಿತ ನಿರ್ದೇಶಕರಾದ ಪ್ರಸಾದ್ ರಾಜ್ ಕಾಂಚನ್ “ಮಾರುತಿ ಉಳ್ಳಾಲ ತಂಡ ಹಲವಾರು ವರ್ಷಗಳಿಂದ ಕ್ರೀಡೆಯಲ್ಲದೇ,ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಮಾದರಿ ಸಂಸ್ಥೆಯಾಗಿದೆ” ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿದ ದ.ಕ.ಮಹಾಜನ ಸಂಘ(ರಿ) ಅಧ್ಯಕ್ಷರಾದ ಜಯ.ಸಿ.ಕೋಟ್ಯಾನ್ “ಮಾರುತಿ ಕ್ರಿಕೆಟರ್ಸ್ ಕ್ರೀಡೆ ಮಾತ್ರವಲ್ಲದೇ ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದು ರಾಜ್ಯದಲ್ಲೇ ಮಾದರಿ ಸಂಸ್ಥೆಯಾಗಿದೆ ಎಂದರು.
ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಮಂಗಳೂರು ಯಾಂತ್ರಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್.ಟಿ.ಕರ್ಕೇರ ಮಾತನಾಡಿ “ಮಾರುತಿ ಸಂಸ್ಥೆ 35 ವರ್ಷಗಳಲ್ಲಿ ಸಮಾಜದ ಬಡ ಅಶಕ್ತ ಕುಟುಂಬಗಳ ಸಹಾಯಕ್ಕಾಗಿ ಇದುವರೆಗೂ ಲಕ್ಷಾಂತರ ರೂ ವ್ಯಯಿಸಿದೆ” ಎಂದರು.
ವರ್ಣರಂಜಿತ ಉದ್ಘಾಟನಾ ವೇದಿಕೆಯಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ವಿಶ್ವನಾಥ ಪುತ್ರನ್,ಸಂದೇಶ ತಿಂಗಳಾಯ,ಶುಭಾ.ವಿ.ಬಂಗೇರ ಮತ್ತು ದಿಶಾ.ಟಿ.ಸಾಲ್ಯಾನ್ ಇವರನ್ನು ಸನ್ಮಾನಿಸಲಾಯಿತು.
ಗೌರವಾನ್ವಿತ ಅತಿಥಿಗಳನ್ನು,ಸಾಧಕರನ್ನು ಚಂಡೆ ವಾದ್ಯಗಳ ಮೂಲಕ ಬರಮಾಡಿಕೊಳ್ಳಲಾಯಿತು ಹಾಗೂ ಸಿಡಿಮದ್ದು ಪ್ರದರ್ಶನ ಅದ್ಧೂರಿಯಾಗಿ ನಡೆಯಿತು.
ಈ ಸಂದರ್ಭ ದ.ಕ ಮೊಗವೀರ ಸಂಯುಕ್ತ ಸಂಘ ಅಧ್ಯಕ್ಷರಾದ ಭರತ್ ಕುಮಾರ್ ಉಳ್ಳಾಲ,
ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷರಾದ ಮನೋಜ್ ಸಾಲ್ಯಾನ್,ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ನಿತಿನ್ ಕುಮಾರ್,ಮತ್ಸ್ಯೋದ್ಯಮಿ ಮೋಹನ್ ಬೆಂಗ್ರೆ,ಮಂಗಳೂರು ಎಸ್.ಎ.ಎಮ್ ಫಿಶರೀಸ್ ನ ಮಾಲಕ ಸಿಂಧೂರಾಮ್.ಎ.ಪುತ್ರನ್,
ಕರ್ನಾಟಕ ರಾಜ್ಯ ಪುಟ್ಬಾಲ್ ಸಂಸ್ಥೆ ಕಾರ್ಯದರ್ಶಿ ವಿಜಯ್ ಸುವರ್ಣ,ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘ ಅಧ್ಯಕ್ಷ ಚೇತನ್ ಬೆಂಗ್ರೆ,ಶ್ರೀ ಕ್ಷೇತ್ರ ಉಚ್ಚಿಲ ಕೋಶಾಧಿಕಾರಿ ವಿನಯ್ ಕರ್ಕೇರ ಮಲ್ಪೆ,ಮೊಗವೀರ ಹಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಪುತ್ರನ್,ಮಾರುತಿ ಯುವಕ ಮಂಡಲ (ರಿ) ಅಧ್ಯಕ್ಷರಾದ ವರದರಾಜ್ ಬಂಗೇರ,ಮಾರುತಿ ಸಂಸ್ಥೆಯ ಗೌರವಾಧ್ಯಕ್ಷ ಸುಧೀರ್.ವಿ.ಅಮೀನ್ ಮತ್ತು ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ವಿನಯ್ ಉದ್ಯಾವರ ಮತ್ತು ಪ್ರಶಾಂತ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು…