ಯುವ ಕ್ರೀಡಾ ಪ್ರತಿಭೆಗಳಿಗೆ ತಮ್ಮ ಮಾರ್ಗದರ್ಶನವನ್ನಿತ್ತು ,ಮುಖ್ಯವಾಗಿ ಕೋಲಾರ ಜಿಲ್ಲೆಯ ಪ್ರತಿಭಾವಂತ ಕ್ರಿಕೆಟಿಗರನ್ನು ರಾಜ್ಯಮಟ್ಟದಲ್ಲಿ ಗುರುತಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಶ್ರೀ ನದೀಮ್ ಅಖ್ತರ್ ಶ್ರೀ ಶ್ರೀನಿವಾಸಪುರ ಪ್ರೀಮಿಯರ್ ಲೀಗ್ ನ ಮುಖ್ಯ ರೂವಾರಿ.
ಓರ್ವ ಅತ್ಯುನ್ನತ ಕ್ರಿಕೆಟಿಗನಾಗಿ ಸೈ ಬಾಯ್ಸ್ ಎಂಬ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿ 2019 ಹಾಗೂ 2020 ರಲ್ಲಿ ಶ್ರೀನಿವಾಸಪುರದಲ್ಲಿ,2021 ಬೆಂಗಳೂರಿನಲ್ಲಿ ಸಂಘಟಿಸಿದ ಎಸ್.ಪಿ.ಎಲ್ ಎಂಬ ಕ್ರಿಕೆಟ್ ಪಂದ್ಯಾವಳಿ ಕೋಲಾರ ಜಿಲ್ಲೆಯಲ್ಲೇ ಕ್ರಾಂತಿಯನ್ನು ಸೃಷ್ಟಿಸಿತ್ತು.ಕೇವಲ ಕ್ರೀಡಾ ಕ್ಷೇತ್ರವಷ್ಟೇ ಅಲ್ಲದೇ ಸಮಾಜ ಸೇವೆಯಲ್ಲಿಯೂ ತನ್ನನ್ನು ತಾನು ಗುರುತಿಸಿಕೊಂಡು ನಿಸ್ವಾರ್ಥ ಮನಸ್ಸಿನಿಂದ ಸೇವೆಗೈದ ಸ್ಪೂರ್ತಿಕಿರಣ ಇವರು.
ಕೋವಿಡ್ ನಂತಹ ಸಂಧಿಘ್ನ ಪರಿಸ್ಥಿತಿಯಲ್ಲಿ ಜನರ ಸಂಕಷ್ಟಗಳನ್ನು ಅರಿತು ,ಜನರಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸಿ ತಮ್ಮ ಕೆಲಸ ಕಾರ್ಯಗಳಿಂದ ಪ್ರೇರಣೆಯಾಗಿ ನಿಲ್ಲುವ ನದೀಮ್ ಎಂ.ಕೆ.ಎಸ್ ಗ್ರೂಪ್,ಅಖ್ತರ್ ಟ್ರೇಡರ್ಸ್ ಎಂಬ ಉದ್ಯಮವನ್ನು ಸೃಷ್ಟಿಸಿ ರೈತ ಸಹಕಾರಿ ಟ್ರ್ಯಾಕ್ಟರ್ ಗಳು,ಕೃಷಿ ಉತ್ಪನ್ನಗಳಿಗೆ ಅತ್ಯುತ್ತಮ ಮಾರುಕಟ್ಟೆ ಸೃಷ್ಟಿಸಿದ ಜನನಾಯಕ ಎಂದರೆ ತಪ್ಪಾಗಲಾರದು.
ಇದೀಗ ರಾಜ್ ಭವನ ಮುಂಬೈನಲ್ಲಿ ಜರುಗಿದ ಲಯನ್ಸ್ ಗೋಲ್ಡ್ ಅವಾರ್ಡ್ಸ್ ನಲ್ಲಿ ಬಾಲಿವುಡ್ ನಟ-ನಟಿಯರು,ಸೈನ್ಯ ಮುಖ್ಯಸ್ಥರು ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಅತ್ಯುತ್ತಮ ಉದ್ಯಮಿ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಸಂತಸ ಹಾಗೂ ಹೆಮ್ಮೆಯ ವಿಷಯ.ಮುಂದೆಯೂ ಕ್ರೀಡಾ ಕ್ಷೇತ್ರ,ಸಾಮಾಜಿಕ ಕ್ಷೇತ್ರದಲ್ಲಿ ತಮ್ಮಿಂದ ಇನ್ನಷ್ಟು ಉತ್ತಮ ಕೆಲಸ ಕಾರ್ಯಗಳು ಮೂಡಿ ಬರಲೆಂದು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಶುಭ ಹಾರೈಕೆಗಳು.