ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ತಂದೆ ತಾಯಿಯ ತ್ಯಾಗವಿರುತ್ತದೆ ಅದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣೆದುರಿಗೆ ಜೀವಂತವಾಗಿದೆ

ಈ ಹಾದಿಯಲ್ಲಿ ಕಡು ಕಷ್ಟದಲ್ಲು ಕಂಡ ಹಲವರ ಕನಸು ಹೆತ್ತವರಿಂದ ನನಸಾಗಿದೆ ತಮ್ಮ ಮಕ್ಕಳ ಯಶಸ್ಸಿಗಾಗಿ ಮಕ್ಕಳ ಇಷ್ಟವನ್ನು ಪೂರೈಸುವುದಕ್ಕಾಗಿ ಹಗಲಿರುಳು ದುಡಿದು ಮಕ್ಕಳ ಯಶಸ್ಸಿಗೆ ಹೆಗಲು ಕೊಡುವ ತಂದೆ ತಾಯಂದಿರಿಗೆ ನನ್ನದೊಂದು ಸಲಾಂ ಇದೆ ಹಾದಿಯಲ್ಲಿ ಗೆಲುವಿನ ಹೆಜ್ಜೆಹಾಕುತ್ತಲೆ ಭಾರತ ಕ್ರಿಕೆಟ್ ತಂಡದ ಕದ ತಟ್ಟಲು ಅಣಿಯಾಗುತ್ತಿರುವ ಕ್ರಿಕೆಟಿಗನೆ ತಮಿಳು ನಾಡಿನ ಮುರುಗನ್ ಅಶ್ವಿನ್ ತನ್ನ ಕ್ರಿಕೆಟ್ ಬೆಳವಣಿಗೆಗೆ ತನ್ನ ಜೀವವನ್ನೇ ಮುಡಿಪಾಗಿಟ್ಟಿದ್ದ ತಾಯಿಗೆ ಭಾವಸ್ಪರ್ಷಿ ಸಂದೇಶ ರವಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ

ಪ್ರಸಕ್ತ ಆವೃತ್ತಿಯ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತಮಿಳುನಾಡು ತಂಡ ಗೆಲುವಿನ ನಗೆ ಬಿರಿದೆ ಮುಷ್ತಾಕ್ ಅಲಿ ಕಪ್ ಅನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ ಚೆನ್ನೈ ತಂಡ ಚಾಂಪಿಯನ್ ಆದ ಬೆನ್ನಲ್ಲೇ ತಂಡದ ಪ್ರಮುಖ ಲೆಗ್ ಸ್ಪಿನ್ನರ್ ಮುರುಗನ್ ಅಶ್ವಿನ್, ಈ ಅವಿಸ್ಮರಣೀಯ ಗೆಲುವನ್ನು ತನ್ನ ಕ್ರಿಕೆಟ್ ಬದುಕಿನ ಏಳಿಗೆಗಾಗಿ ಶ್ರಮಿಸಿದ ಕೆಲದಿನಗಳ ಹಿಂದಷ್ಟೇ ಅನಾರೋಗ್ಯದಿಂದ ಒಲ್ಲದ ಮನಸ್ಸಿನಿಂದಲೆ ಸಾವಿನೆಡೆಗೆ ಹೆಜ್ಜೆ ಹಾಕಿ ಕೊನೆಯುಸಿರೆಳೆದ ತಮ್ಮ ತಾಯಿಗೆ ಅರ್ಪಿಸಿದ್ದಾರೆ.

2006/07ನೇ ಸಾಲಿನಲ್ಲಿ ಆರಂಭವಾದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ತಮಿಳು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಇದೀಗ 2021ನೇ ಸಾಲಿನಲ್ಲಿ ಬರೋಡ ವಿರುದ್ದ ತಮಿಳುನಾಡು ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ತಮಿಳುನಾಡು ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮುರುಗನ್ ಅಶ್ವಿನ್ ಪ್ರಮುಖ ಪಾತ್ರವಹಿಸಿದ್ದರು. ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಶ್ವಿನ್ 8 ಪಂದ್ಯಗಳನ್ನಾಡಿ ಒಟ್ಟು 10 ವಿಕೆಟ್ ಕಬಳಿಸಿ ಮಿಂಚಿದ್ದರು. ಹೀಗಿದ್ದರೂ ಅಶ್ವಿನ್ ಮುಷ್ತಾಕ್ ಅಲಿ ಟೂರ್ನಿಯ ಗೆಲುವನ್ನು ಸಂಭ್ರಮಿಸಲಿಲ್ಲ, ಬದಲಾಗಿ ಕಳೆದ ತಿಂಗಳಷ್ಟೇ ಕೊನೆಯುಸಿರೆಳೆದ ತಮ್ಮ ತಾಯಿಗೆ ಈ ಗೆಲುವನ್ನು ಅರ್ಪಿಸುವ ಮೂಲಕ ತನ್ನ ಕ್ರಿಕೆಟ್ ಕಲಿಕೆಗೆ ಬೆನ್ನೆಲುಬಾಗಿ ನಿಂತಿದ್ದ ಹೆತ್ತಮ್ಮನಿಗೆ ಹೃದಯಸ್ಪರ್ಷಿ ಸಂದೇಶ ರವಾನಿಸಿದ್ದಾರೆ.
ಮುಷ್ತಾಕ್ ಅಲಿ ಟೂರ್ನಿ ಗೆಲುವಿನ ಬಳಿಕ ಇನ್‌ಸ್ಟಾಗ್ರಾಂನಲ್ಲಿ ತಮ್ಮ ತಾಯಿ ಅಕ್ಯೂಟ್ ಮೈಲ್ಯೂಡ್ ಲುಕ್ಯೂಮಿಯಾದಿಂದ ಕೊನೆಯುಸಿರೆಳೆದ ಬಗ್ಗೆ ಹಾಗೂ ಆಕೆಗೆ ಕ್ರಿಕೆಟ್ ಮೇಲೆ ಇದ್ದ ಒಲವು ಮತ್ತು ತನ್ನ ಏಳಿಗೆಗಾಗಿ ಶ್ರಮಿಸಿದ ಬಗ್ಗೆ ಹೃದಯಸ್ಪರ್ಷಿಯಾಗಿ ಲೆಗ್‌ಸ್ಪಿನ್ನರ್ ಮುರುಗನ್ ಅಶ್ವಿನ್ ಬರೆದುಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ನನ್ನ ತಾಯಿ ಅಕ್ಯೂಟ್ ಮೈಲ್ಯೂಡ್ ಲುಕ್ಯೂಮಿಯಾದಿಂದಾಗಿ ಕೊನೆಯುಸಿರೆಳೆದರು. ಆಕೆಯನ್ನು ಅಕ್ಯೂಟ್ ಮೈಲ್ಯೂಡ್ ಲುಕ್ಯೂಮಿಯಾದಿಂದಾಗಿ ಹೈರಾಣಾಗಿಸಿತ್ತು. ದುರಾದೃಷ್ಟವಶಾತ್ ನಾವು ಆಕೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಈ ಕ್ಷಣ ಅಮ್ಮ ನನ್ನ ಜೋತೆಗಿದ್ದಿದ್ದರೆ ಅಕೆಯ ಆನಂದಕ್ಕೆ ಕೊನೆಯೆ ಇರುತ್ತಿರಲಿಲ್ಲ ಎಂದು ಮುರುಗನ್ ಅಶ್ವಿನ್ ನೋವಿನಲ್ಲೆ ಬರೆದುಕೊಂಡಿದ್ದಾರೆ.
– ಸುಧೀರ್ ವಿಧಾತ,ಶಿವಮೊಗ್ಗ ಭಾರತ್ ಕ್ರಿಕೆಟರ್ಸ್ ತಂಡದ ಮಾಜಿ ನಾಯಕ.