ಮಾರ್ನಿಂಗ್ ಫ್ರೆಂಡ್ಸ್ ಅಜ್ಜರಕಾಡು ಇವರ ವತಿಯಿಂದ ಅಜ್ಜರಕಾಡು ಹೆಲಿಪ್ಯಾಡ್ ಗ್ರೌಂಡ್ ನಲ್ಲಿ ನಡೆದ ಮಾರ್ನಿಂಗ್ ಪ್ರೀಮಿಯರ್ ಲೀಗ್-2020 ಇದರ 4 ನೇ ಆವೃತ್ತಿಯ ಪಂದ್ಯಾಕೂಟವನ್ನು ರಮೇಶ್ ಪೂಜಾರಿ ಕನ್ಮರ್ಪಾಡಿ,ಹರೀಶ್ಚಂದ್ರ ಕಿನ್ನಿಮೂಲ್ಕಿ,ಮಿಥುನ್ ಪೂಜಾರಿ,ನವೀನ್ ಶೆಟ್ಟಿ ಕನ್ನರ್ಪಾಡಿ, ಮದನ್ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗುವ ಮೂಲಕ ನೆರವೇರಿತು.
ಪಂದ್ಯಾವಳಿಯ ವಿಜೇತ ತಂಡಗಳಾಗಿ ಸುಕೇಶ್ ರಾವ್ ನಾಯಕತ್ವದ ಮಾರ್ನಿಂಗ್ ಸ್ಟ್ರೈಕರ್ಸ್ ಹಾಗೂ ಸಚಿನ್ ಶೆಟ್ಟಿ ಕಪ್ಪೆಟ್ಟು ನಾಯಕತ್ವದ ಮಾರ್ನಿಂಗ್ ಚಾಂಪಿಯನ್ಸ್ ತಂಡಗಳು ಮೂಡಿ ಬಂದಿತು.ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ಸುಜಿತ್ ಆಚಾರ್,ಬೆಸ್ಟ್ ಕೀಪರ್ ಮಯೂರ್ ಶೆಟ್ಟಿ,ಬೆಸ್ಟ್ ಬೌಲರ್ ಶಿಶಿರ್ ಕಡೆಕಾರ್,ಬೆಸ್ಟ್ ಕ್ಯಾಚ್ ಸುಶಾಂತ್ ಸೋನು,ಬೆಸ್ಟ್ ಸಿಕ್ಸ್ ಸುಜಿತ್ ಆಚಾರ್,ಬೆಸ್ಟ್ ಫೀಲ್ಡರ್ ಗುರು ಹಾಗೂ ಸರಣಿಶ್ರೇಷ್ಟ ಪ್ರಶಸ್ತಿಯನ್ನು ಸುಜಿತ್ ಆಚಾರ್ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರು ಹಾಗೂ ಕ್ರೀಡಾ ಪ್ರೋತ್ಸಾಹಕರಾದ ಕೃಷ್ಣಮೂರ್ತಿ ಆಚಾರ್ಯ,ನವೀನ್ ಶೆಟ್ಟಿ ಕನ್ನರ್ಪಾಡಿ,ಸುಧೀರ್ ಶೆಟ್ಟಿ ಸುರಭಿ,ಸಾಧಿಕ್,ಹರೀಶ್ ಚಂದ್ರ,ಜಯಲಕ್ಷ್ಮಿ ರಾಜೇಶ್,ಅನಿಲ್ ಕುಮಾರ್,ಜಯರಾಮ್ ಪ್ರಸಾದ್,ರಂಜಿತ್ ಸಾಲಿಯಾನ್,ಉಮೇಶ್ ಶೆಟ್ಟಿಗಾರ್,ಅತುಲ್ ಶೆಟ್ಟಿ,ಮುರಳೀಧರ ಶೆಟ್ಟಿಗಾರ್,ಗುರುರಾಜ್ ಸಾಲಿಯಾನ್ ಹಾಗೂ ಎಲ್ಲಾ ತಂಡದ ಆಟಗಾರರು ಉಪಸ್ಥಿತರಿದ್ದರು.ಹೇಮಂತ್ ಉದ್ಯಾವರ ವಂದಿಸಿದರು.
ವರದಿ ಕೃಪೆ-ರತನ್ ಸುರಭಿ…