ಆಯ್ದ ಬಡರೋಗಿಗಳ ವೈದ್ಯಕೀಯ ಚಿಕಿತ್ಸಾ ಸಹಾಯಾರ್ಥ ಹಾಗೂ
ಮೂಡುಬೆಳ್ಳೆ ಪರಿಸರದ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಯಶಸ್ವಿ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ನೆಲ್ಲಿಕಟ್ಟೆ ಸಂಸ್ಥೆಯ ಅನಿತ್,ರೋಯ್ ಡೇಸಾ ಹಾಗೂ ರವಿರಾಜ್ ನೇತೃತ್ವದಲ್ಲಿ ಜನವರಿ 3 ರವಿವಾರದಂದು ಮೂಡುಬೆಳ್ಳೆ ಕಾಲೇಜು ಮೈದಾನದಲ್ಲಿ ಮೂಡುಬೆಳ್ಳೆ ಪ್ರೀಮಿಯರ್ ಲೀಗ್(M.P.L)ಪಂದ್ಯಾವಳಿ ಆಯೋಜಿಸಲಾಗಿದೆ.
ಸ್ಥಳೀಯ 8 ತಂಡಗಳು ಭಾಗವಹಿಸುವ ಈ ಪಂದ್ಯಾವಳಿ ಲೀಗ್ ಮಾದರಿಯಲ್ಲಿ ಸಾಗಲಿದೆ.
ವಿಜೇತ ತಂಡಗಳು ನಗದು ಬಹುಮಾನ ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ಭಾಗವಹಿಸುವ 8 ತಂಡಗಳ ವಿವರ ಈ ಕೆಳಗಿನಂತಿದೆ.
1)ನೆಲ್ಲಿಕಟ್ಟೆ ಸೂಪರ್ ಕಿಂಗ್ಸ್
2)ಯಂಗ್ ಸ್ಟಾರ್ ಪಾಂಬೂರ್
3)ಗೆಳೆಯರ ಬಳಗ ಪಡುಬೆಳ್ಳೆ
4)ಬ್ರೂಟಲ್ ವಾರಿಯರ್ಸ್
ಮೂಡುಬೆಳ್ಳೆ
5)ಪಳ್ಳಿ ಫ್ರೆಂಡ್ಸ್
6)ದೆಂದೂರ್ ಫ್ರೆಂಡ್ಸ್
7)ಅವ್ಯುಕ್ತ್ ಇಲೆವೆನ್
8)ಭಜರಂಗಿ ಕ್ರಿಕೆಟರ್ಸ್
ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರೀಮಿಯರ್ ಲೀಗ್ ಪಂದ್ಯಾವಳಿಗಾಗಿಯೇ ವೆಬ್ಸೈಟ್ ನ್ನು ರಚಿಸಲಾಗಿದೆ.
ಈ ಪಂದ್ಯಾವಳಿಯ ನೇರಪ್ರಸಾರ M9 ಸ್ಪೋರ್ಟ್ಸ್ ಬಿತ್ತರಿಸಲಿದ್ದು,ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯನಿರ್ವಹಿಸಲಿದ್ದು,ಯು.ಆರ್.ಸ್ ಪೋರ್ಟ್ಸ್ ಮಣಿಪಾಲ ಪಂದ್ಯಾಕೂಟಕ್ಕೆ ಶುಭಕೋರಿದ್ದಾರೆ.