ಟೆನ್ನಿಸ್ ಕ್ರಿಕೆಟ್ ನಲ್ಲಿ ವಿನೂತನ ಪ್ರಯೋಗಗಳನ್ನು ಹಲವಾರು ಸಂಸ್ಥೆಗಳು ದಶಕಗಳಿಂದ ನಡೆಸಿಕೊಂಡು ಬಂದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳ ಅನ್ವೇಷಣೆಗೆ ಪ್ರಿಮಿಯರ್ ಲೀಗ್ ಪಂದ್ಯಾಕೂಟಗಳು ಕಳೆದ ಋತುವಿನಿಂದ ಯಥೇಚ್ಛವಾಗಿ ನಡೆದರೆ,ರಾಜ್ಯ, ರಾಷ್ಟ್ರ ಮಟ್ಟದ ಪಂದ್ಯಾಕೂಟಗಳು ಮಳೆಗಾಲದ ಪ್ರಾರಂಭದವರೆಗೆ ಹಲವೆಡೆ ನಡೆಸಿದ್ದರು.
ಟೆನ್ನಿಸ್ ಕ್ರಿಕೆಟ್ ಇನ್ನಷ್ಟು ಹೊಸತನ ನೀಡುವ ಸಲುವಾಗಿ,ಬೆಂಗಳೂರಿನ ಹಿರಿಯ ತಂಡ ಜೈ ಕರ್ನಾಟಕದ ಮಾಸ್ಟರ್ ಮೈಂಡ್ ಸಚಿನ್ ಮಹಾದೇವ್ ಮಾಲೀಕತ್ವದ M.SPORTS ಹಾಗೂ ಫ್ರೆಂಡ್ಸ್ ಬೆಂಗಳೂರು ತಂಡದ ಡ್ಯಾಶಿಂಗ್ ಆಲ್ ರೌಂಡರ್ ಸಾಗರ್ ಭಂಡಾರಿ ಮಾಲೀಕತ್ವದ SRB ಸ್ಪೋರ್ಟ್ಸ್ ಸಂಸ್ಥೆ ಪ್ರಾಯೋಜಕತ್ವ ಹಾಗೂ ರಾಜ್ಯದ ಟೆನ್ನಿಸ್ ಕ್ರಿಕೆಟ್ ನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿರುವ ಆರ್.ಕೆ.ಆಚಾರ್ಯ ನೇತೃತ್ವದ ” ಸ್ಪೋರ್ಟ್ಸ್ ಕನ್ನಡ” ಸಹಭಾಗಿತ್ವದಲ್ಲಿ ಸೆಪ್ಟೆಂಬರ್ 21,22 ರಂದು ಬೆಂಗಳೂರಿನ ಮತ್ತಿಕೆರೆ ಜೆ.ಪಿ.ಪಾರ್ಕ್ ಅಂಗಣದ ಸಿಮೆಂಟ್ ಪಿಚ್ ನಲ್ಲಿ ಮಾನ್ಸೂನ್ ರೈನಿ ಕಪ್ ನಡೆಯಲಿದೆ.
ವಿಜೇತ ತಂಡವು 30,000 ನಗದು,ರನ್ನರ್ಸ್ ತಂಡ 15,000 ನಗದು ಸಹಿತ ಆಕರ್ಷಕ ಟ್ರೋಫಿ,ಇನ್ನಿತರ ವೈಯಕ್ತಿಕ ಪ್ರಶಸ್ತಿಗಳು ಆಟಗಾರರನ್ನು ಹುರಿದುಂಬಿಸಲಿದೆ.
ಪ್ರತಿಪಂದ್ಯವು 5 ಓವರ್ ಗಳಲ್ಲಿ ವಿಲ್ಸನ್ ಚೆಂಡಿನಲ್ಲಿ ನಡೆಯಲಿದೆ. ಪಂದ್ಯಾಕೂಟದ ನೇರ ಪ್ರಸಾರ ಹಾಗೂ ಲೈವ್ ಸ್ಕೋರ್ ನ್ನು M.Sports ಯೂ ಟ್ಯೂಬ್ ಚಾನೆಲ್ ಬಿತ್ತರಿಸಲಿದೆ.
ವಿಶೇಷ ಸೂಚನೆ: ಪಂದ್ಯಾಕೂಟದ ಸಂಘಟಕರು ಸ್ಲೀವ್ಲೆಸ್ ಮಾತ್ರ ನೀಡಲಿದ್ದು, ಭಾಗವಹಿಸುವ ಆಟಗಾರು ಕಡ್ಡಾಯವಾಗಿ ಜೆರ್ಸಿ ರೂಪದಲ್ಲಿ ಸ್ಲೀವ್ಲೆಸ್ ಟಿ ಶರ್ಟ್ ಹಾಗು ಸ್ಪೋರ್ಟ್ಸ್ ಶಾರ್ಟ್ಸ್ ಧರಿಸಿ ಆಡಬೇಕಾಗಿದೆ. ಈಗಾಗಲೇ 20 ತಂಡಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು,
ಪ್ರವೇಶಾತಿ ಪ್ರಕ್ರಿಯೆ ಮುಗಿದಿರುತ್ತದೆ.
ಆರ್.ಕೆ.ಆಚಾರ್ಯ ಕೋಟ