Categories
ಕ್ರಿಕೆಟ್

ಸಲಾಮ್ ಸಿರಾಜ್ ಭಾಯ್ ಸಲಾಮ್ ಶ್ರೇಷ್ಠ ಬೌಲರ್ ಅಗಿ ಕಂಗೊಳಿಸುತ್ತಿರುವ ಮೊಹಮ್ಮದ್ ಸಿರಾಜ್

 ಮೊಹಮ್ಮದ್ ಸಿರಾಜ್ ಯಾವ ಕ್ರಿಕೆಟ್ ಪ್ರೇಮಿಗೆ ಗೊತ್ತಿಲ್ಲ ಹೇಳಿ ಇಂದು ಭಾರತ ತಂಡದ ಪ್ರಮುಖ ಬೌಲಿಂಗ್ ದಾಳಿಯಲ್ಲಿ ಪ್ರಬಲ ಅಸ್ತ್ರವಾಗಿ ಕಂಗೊಳಿಸುತ್ತಿದ್ದಾರೆ. ಅದರೆ ಸಿರಾಜ್ ಈ ಹಿಂದೆ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ  ಐಪಿಎಲ್ ಆಡಿದಾಗ ಪ್ರಶಂಸೆಗಿಂತ ಟೀಕೆಗಳಿಗೆ ಗುರಿಯಾಗಿದ್ದು ಹೆಚ್ಚು.
ಅಂದು ಬೌಲಿಂಗ್ ವಿಭಾಗದಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದ ಸಿರಾಜ್ ಹೆಚ್ಚಿನ ರನ್ ಹೊಡೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ಟ್ರೋಲ್ ಗೆ ತುತ್ತಾಗಿದ್ದರು. ಕಳಪೆ ಮಟ್ಟದಲ್ಲಿ ಬೌಲಿಂಗ್ ಮಾಡಿದರು ಈತನಿಗೆ ಅವಕಾಶವನ್ನಾದರೂ ಹೇಗೆ ಕೊಡುತ್ತಾರೆ ಎನ್ನುವ ಪ್ರಶ್ನೆ ಕ್ರಿಕೆಟ್ ಪ್ರಿಯರನ್ನು ಕಾಡಿತ್ತು ? ಅಸಲಿಗೆ ಈತ ನಿಜವಾಗಿಯೂ ಬೌಲರಾ ಅಥವಾ ಏನು? ಎಂದೆಲ್ಲ ತೀರಾ ಕೆಳಮಟ್ಟದಲ್ಲಿ ಮೊಹಮ್ಮದ್ ಸಿರಾಜ್ ಅವರ ಪ್ರತಿಭೆಯನ್ನು ಸಾಕಷ್ಟು ಮಂದಿ ಕೆಣಕಿದ್ದರು.
ಆದರೆ ಸಿರಾಜ್ ಅವರ ಬಗ್ಗೆ ಯಾರು ಏನೇ ಮಾತನಾಡಿದರೂ ನಾನು ನಿನ್ನ ಜೊತೆ ಇದ್ದೇನೆ ಎಂದು ಬೆನ್ನು ತಟ್ಟಿ ಹಿಂದೆ ನಿಂತದ್ದು ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಅರ್ ಸಿ ಬಿ ತಂಡದ ನಾಯಕ ಕಿಂಗ್ ವಿರಾಟ್ ಕೊಹ್ಲಿ. ವಿರಾಟ್ ಬೆಂಬಲದೊಂದಿಗೆ ತನ್ನ ಕಹಿ ಕ್ಷಣವನ್ನು ಮರೆತು ತನ್ನ ಬೌಲಿಂಗ್‌ ಅನ್ನು ಕರಾರುವಾಕ್ಕಾಗಿ ಮಾಡಲು ಶ್ರದ್ಧೆಯಿಂದ  ಪ್ರಯತ್ನವನ್ನು ಮುಂದುವರೆಸಿದ ಸಿರಾಜ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿದರು. ಪ್ರಮುಖ ವಿಕೆಟ್ ಗಳನ್ನು ಪಡೆದು ಕೊಳ್ಳುವುದರ ಮೂಲಕ ತಮ್ಮನ್ನು ಟ್ರೋಲ್ ಮಾಡಿದವರಿಗೆ ಬೌಲಿಂಗ್ ಮೂಲಕ ಉತ್ತರ ನೀಡಿದರು. ರಾತ್ರಿ ಬೆಳಗಾಗುವುದರಲ್ಲಿ ಸಿರಾಜ್ ಭಾರತ ತಂಡದ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದರು
ಇದೀಗ ಸದ್ಯಕ್ಕೆ ನಡೆಯುತ್ತಿರುವ ಐಪಿಎಲ್ ಟೂರ್ನಿ ಯಲ್ಲಿಯೂ ಸಹ ಸ್ಥಿರವಾದ ಉತ್ತಮ ಬೌಲಿಂಗ್ ಮಾಡುತ್ತಿದ್ದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ಗಳಲ್ಲಿ ಆ್ಯಂಡ್ರೆ ರಸೆಲ್ ಹಿಗ್ಗಾಮುಗ್ಗಾ ಬಾರಿಸುತ್ತಿದ್ದ ವೇಳೆ 19ನೇ ಓವರನ್ನು ವಿರಾಟ್ ಮೊಹಮ್ಮದ್ ಸಿರಾಜ್ ಗೆ ನೀಡಿದರು. ಸಿರಾಜ್ ಗೆ ಓವರ್ ನೀಡಿದ ಕೂಡಲೇ ಹಲವಾರು ಮಂದಿ ಪಕ್ಕಾ ರನ್ ಹೊಡೆಸಿಕೊಳ್ಳುತ್ತಾರೆ ಎಂದೇ ಭಾವಿಸಿದ್ದರು. ಆದರೆ ಸಿರಾಜ್ ಮಾಡಿದ್ದೇ ಬೇರೆ ಆ ಓವರ್ ನಲ್ಲಿ ಸಿರಾಜ್ ಕೊಟ್ಟದ್ದು ಕೇವಲ ಒಂದೇ ಒಂದು ರನ್. 19ನೇ ಓವರ್ ನಲ್ಲಿ ಆ್ಯಂಡ್ರೆ ರಸೆಲ್ ಬ್ಯಾಟಿಂಗ್ ಗೆ 5 ಡಾಟ್ ಬಾಲ್ ಹಾಕಿದ ಮೊಹಮ್ಮದ್ ಸಿರಾಜ್ ಆರ್ ಸಿಬಿ ತೆಕ್ಕೆಗೆ ಪಂದ್ಯವನ್ನ ತಂದುಕೊಟ್ಟಿದ್ದರು.
ಮೊಹಮ್ಮದ್ ಸಿರಾಜ್ ಮಾಡಿದ ಈ ಅದ್ಬುತ ಓವರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಕೊಂಡಾಡತೊಡಗಿದ್ದಾರೆ. ಅಂದು ಇಂತಹ ಕೆಟ್ಟ ಬೌಲರ್ ಅನ್ನು ನೋಡಿಲ್ಲ  ಎನ್ನುವ ಮಟ್ಟಕ್ಕೆ ಅಪವಾದಕ್ಕೆ ಗುರಿಯಾಗಿದ್ದ ಸಿರಾಜ್   ಇಂದು ಅಬ್ಬರಿಸುತ್ತಿರುವ ಜೋತೆಗೆ ಮೊಹಮ್ಮದ್ ಸಿರಾಜ್ ಒನ್ ಆಫ್ ದಿ ಬೆಸ್ಟ್ ಬೌಲರ್ ಎನ್ನುತ್ತಿದ್ದಾರೆ.
ಇನ್ನೇನು ಕೆಟ್ಟ ಬೌಲಿಂಗ್ ನಿಂದ ಸಿರಾಜ್ ಕ್ರಿಕೆಟ್ ಕನಸು ಮುಗಿಯಿತು ಎಂದುಕೊಳ್ಳುವ ಹೊತ್ತಿಗೇ ಆತನ ಮೇಲೆ ನಂಬಿಕೆ ಇಟ್ಟು ಬೆನ್ನಿಗೆ ನಿಂತದ್ದು ವಿರಾಟ್ ಕೊಯ್ಲಿ
ನಾಯಕ ಕೊಯ್ಲಿಯ ನಂಬಿಕೆಯನ್ನು ಹುಸಿಗೊಳಿಸದೆ ಶ್ರದ್ಧೆಯಿಂದ ಗಟ್ಟಿಗನಾಗಿ ಬೆಳೆದು ನಿಂತ ಸಿರಾಜ್ ಇಂದು ಭಾರತ ತಂಡದ ಶ್ರೇಷ್ಠ ಬೌಲರ್ ಆಗಿ ಕಂಗೊಳಿಸುತ್ತಿದ್ದಾರೆ . ಇನ್ನಷ್ಟೂ ಎತ್ತರಕ್ಕೆ ಬೆಳೆದು ವಿಶ್ವದ ಅಗ್ರಮಾನ್ಯ ಬೌಲರ್ ಗಳ ಸಾಲಿನಲ್ಲಿ ಕಂಗೊಳಿಸಲಿ. ಸಲಾಮ್ ಸಿರಾಜ್ ಭಾಯ್ ಸಲಾಮ್

By ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Leave a Reply

Your email address will not be published.

five × five =