ಮನುಷ್ಯ ಅಂದಮೇಲೆ ಕಷ್ಟ ಸಹಜ. ಏಳುಬೀಳು ಸರ್ವೇಸಾಮಾನ್ಯ. ಬಡವ ಆಗಿರಲಿ, ಶ್ರೀಮಂತ ಆಗಿರಲಿ ಇದೆಲ್ಲವನ್ನು ಫೇಸ್ ಮಾಡಲೇಬೇಕು.
ಇದನ್ನು ಫೇಸ್ ಮಾಡಿದಂತವನು ಬದುಕಿನಲ್ಲಿ ಗೆಲ್ಲೋದಕ್ಕೆ ಸಾಧ್ಯ. ಅದನ್ನ ಫೇಸ್ ಮಾಡೋದಿಕ್ಕೆ ಆಗದೆ ಇರೋನು ಬದುಕಿನಲ್ಲಿ ಸೋತು ಬಿಡುತ್ತಾನೆ. ಸ್ನೇಹಿತರೆ, ಈ ಮಾತನ್ನ ಹೇಳುವುದಕ್ಕೆ ಕಾರಣ ಕ್ರಿಕೆಟಿಗ ಮೊಹಮ್ಮದ್ ಶಮಿ. ಮೊಹಮ್ಮದ್ ಶಮಿ ಕಂಡಂತಹ ಕಷ್ಟ, ಏಳುಬೀಳು ಸಾಧಾರಣ ಅಲ್ವೇ ಅಲ್ಲ. ಆದರೆ ಅದೆಲ್ಲವನ್ನು ಕೂಡ ಗೆದ್ದು ಬಂದು ಇವತ್ತು ಇಡೀ ದೇಶಕ್ಕೆ ಹೀರೋ ಆಗಿದ್ದಾರೆ. ವರ್ಲ್ಡ್ ಕಪ್ ನ ಆರಂಭಿಕ ಪಂದ್ಯಗಳಲ್ಲಿ ಬೆಂಚು ಕಾಯುವ ಪರಿಸ್ಥಿತಿ. ಅದಾದ ಬಳಿಕ ಕಮ್ ಬ್ಯಾಕ್ ಮಾಡಿದ್ದು ಇದೆಯಲ್ಲಾ ಅದು ಸಾಮಾನ್ಯ ಅಲ್ವೇ ಅಲ್ಲ. ಕೇವಲ ಮೂರೇ ಮೂರು ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿದ್ದಾರೆ. ಎರಡು ಐದು ವಿಕೆಟ್ಗಳ ಗೊಂಚಲು! ಈ ಮೂಲಕ ಭಾರತದ ಪರ ವಿಶ್ವಕಪ್ ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಆಟಗಾರ ಅಂತ ಮೊಹಮ್ಮದ್ ಶಮಿ ಪಟ್ಟವನ್ನು ಗಿಟ್ಟಿಸಿಕೊಂಡಿದ್ದಾರೆ.
ಇವತ್ತು ಇಡೀ ದೇಶ ಹಾಡಿ ಹೊಗಳುತ್ತಾ ಇದೆ. ಭಾರತದ ಗೆಲುವಿನಲ್ಲಿ ಮೊಹಮದ್ ಶಮಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.ಆದರೆ ಇಂತಹ ಮಹಮದ್ ಶಮಿ ಕೆಲವೇ ಕೆಲವು ವರ್ಷಗಳ ಹಿಂದೆ ಇಡೀ ದೇಶಕ್ಕೆ ವಿಲನ್ ರೀತಿ ಕಂಡಿದ್ದರು. ಕಾರಣ ಅವರ ಪತ್ನಿಯೇ ಅವರ ವಿರುದ್ಧ ಸಾಲು ಸಾಲು ಗಂಭೀರ ಆರೋಪ ಮಾಡಿದ್ದರು. ಕಿರುಕುಳ ಕೊಡುತ್ತಿದ್ದಾರೆ, ಹಿಂಸೆ ಕೊಡುತ್ತಿದ್ದಾರೆ, ಬೇರೆ ಬೇರೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ, ಅತ್ಯಾಚಾರ ಮಾಡಿದ್ದಾರೆ, ಮ್ಯಾಚ್ ಫಿಕ್ಸಿಂಗ್ ಮಾಡ್ಕೊಂಡು ದೇಶದ್ರೋಹ ವನ್ನು ಬಗೆದಿದ್ದಾರೆ ಅಂತ. ಅದಾದ ಬಳಿಕ ಮೊಹಮದ್ ಶಮಿ ಅನುಭವಿಸಿದ ಮಾನಸಿಕ ಹಿಂಸೆ ಇದೆಯಲ್ಲ ಸಾಮಾನ್ಯ ಅಲ್ವೇ ಅಲ್ಲ. ಆದರೆ ಅದೆಲ್ಲವನ್ನು ಕೂಡ ಗೆದ್ದು ಕಮ್ ಬ್ಯಾಕ್ ಮಾಡಿ ಇವತ್ತು ಇಡೀ ದೇಶಕ್ಕೆ ಹೀರೋ ಆಗಿದ್ದಾರೆ.
ಸ್ನೇಹಿತರೇ, ಮೊಹಮದ್ ಶಮಿಯ ಈ ಬದುಕೇ ನಮಗೆಲ್ಲರಿಗೂ ಸ್ಫೂರ್ತಿ ತುಂಬುತ್ತೆ. ಈ ಕಾರಣಕ್ಕಾಗಿ ಅವರ ಬದುಕಿನ ಒಂದಿಷ್ಟು ವಿಚಾರವನ್ನು ನಿಮ್ಮ ಮುಂದೆ ಇಡುತ್ತಾ ಇದ್ದೇನೆ. ಮಹಮದ್ ಶಮಿ ಹುಟ್ಟಿದ್ದು ಉತ್ತರ ಪ್ರದೇಶದ ಅಮ್ರೋಹದ ಸಾಹಸಪುರದ ಸಾಧಾರಣ ರೈತ ತೌಸಿಫ್ ಅಲಿ ಅನ್ನುವಂತಹವರ ಮಗನಾಗಿ. ಅವರ ತಂದೆ ಕೂಡ ಫಾಸ್ಟ್ ಬೌಲರ್ ಆಗಿದ್ದರು. ಆದರೆ ಅವರ ಕನಸನ್ನು ಸಾಕಾರ ಮಾಡುವುದಕ್ಕೆ ಆಗಲಿಲ್ಲ. ಹೀಗಾಗಿ ಮಗನನ್ನ ಕ್ರಿಕೆಟಿಗ ಮಾಡಲೇಬೇಕು ಎಂಬ ಕನಸನ್ನು ಕಾಣ್ತಾರೆ. ಈ ಕಾರಣಕ್ಕಾಗಿ ಬದ್ರುದ್ದೀನ್ ಸಿದ್ಧಿಕಿ ಅನ್ನುವಂತಹ ಕೋಚ್ ಗೆ ಮಗನನ್ನು ಒಪ್ಪಿಸುತ್ತಾರೆ. ಅದಾದ ಬಳಿಕ ಶಮಿಯ ಬದುಕು ಹಂತ ಹಂತವಾಗಿ ಬದಲಾಗಲು ಶುರುವಾಗುತ್ತೆ. ಆದರೆ ಉತ್ತರಪ್ರದೇಶದಲ್ಲಿ ಬೇರೆ ಬೇರೆ ರಾಜಕೀಯ ಕಾರಣಕ್ಕಾಗಿ ಅಂಡರ್ 19 ತಂಡಕ್ಕೆ ಸೆಲೆಕ್ಟ್ ಆಗಲು ಸಾಧ್ಯವಾಗಲಿಲ್ಲ. ಅದಾದ ಬಳಿಕ ಅವರ ಕೋಚ್ ಕೊಲ್ಕತ್ತಾ ಗೆ ಕರೆದುಕೊಂಡು ಬರುತ್ತಾರೆ. ಅಲ್ಲಿ ದೇವವೃತ್ತ ದಾಸ ಅನ್ನುವವರು ಸಿಗುತ್ತಾರೆ. ಅವರು ಕೂಡ ಶಮಿಯ ಬದುಕಿನಲ್ಲಿ ದೇವರ ರೂಪದಲ್ಲಿ ಕಾಣುತ್ತಾರೆ. ಶಮಿಯ ಟ್ಯಾಲೆಂಟ್ ಅನ್ನು ನೋಡಿ ಅವರೆಲ್ಲರೂ ಕೂಡ ಹಂತ ಹಂತವಾಗಿ ಸಪೋರ್ಟ್ ಮಾಡುತ್ತಾ ಹೋಗುತ್ತಾರೆ. ಅಂದರೆ ಕೊಲ್ಕತ್ತಾದಲ್ಲಿ ಕೂಡ ಆರಂಭದಲ್ಲಿ ತಂಡದಲ್ಲಿ ಅವಕಾಶ ಸಿಗಲಿಲ್ಲ. ಮತ್ತೆ ಅದೇ ರಾಜಕೀಯ ಕಾರಣಕ್ಕಾಗಿ. ದೇವವೃತ್ತ ದಾಸ್ ಪಟ್ಟುಹಿಡಿದು ಕುಳಿತುಕೊಂಡ ಕಾರಣಕ್ಕಾಗಿ ಮೊಹಮ್ಮದ್ ಶಮಿಗೆ ಅಂಡರ್ 22 ತಂಡದಲ್ಲಿ ಸ್ಥಾನ ಸಿಗುತ್ತದೆ.
ಅದಾದ ಬಳಿಕ ಮೋಹನ್ ಬಗಾನ್ ಕ್ಲಬ್ ನಲ್ಲಿ ಮಾಡೋದಿಕ್ಕೆ ಶುರು ಮಾಡ್ತಾರೆ. ಅಲ್ಲಿ ನೆಟ್ಸ್ ನಲ್ಲಿ ಸೌರವ್ ಗಂಗೂಲಿಗೆ ಬೌಲಿಂಗ್ ಮಾಡಬೇಕಾಗಿತ್ತು ಶಮಿ. ಅಲ್ಲಿ ಗಂಗೂಲಿ ಶಮಿಯ ಟ್ಯಾಲೆಂಟನ್ನು ನೋಡಿ ಈ ಹುಡುಗ ತಂಡದಲ್ಲಿ ಕಾಣಿಸಿಕೊಂಡರೆ ತಂಡಕ್ಕೊoದು ಒಂದು ಬಲ ಸಿಕ್ಕ ಹಾಗೆ ಅಂತ ಅನಿಸಿಕೊಂಡರು. ಆ ಪ್ರಕಾರವಾಗಿ ಶಮಿಯನ್ನು ರಣಜಿಯಲ್ಲಿ ಆಡಿಸಿ ಎಂದು ರೆಕಮೆಂಡ್ ಮಾಡುತ್ತಾರೆ. ಅಲ್ಲಿಂದ ಶಮಿಯ ಬದುಕು ಬದಲಾಗಿ ಹೋಗುತ್ತೆ. ರಣಜಿಯಲ್ಲಿ ಉತ್ತಮ ಪ್ರದರ್ಶನ ಕೊಡುತ್ತಾರೆ. ಐಪಿಎಲ್ ಗೆ ಎಂಟ್ರಿ ಕೊಡ್ತಾರೆ, ಅಲ್ಲೂ ಒಳ್ಳೆ ಪ್ರದರ್ಶನ ಕೊಡುತ್ತಾರೆ. 2013ರಲ್ಲಿ ಟೆಸ್ಟ್ ಹಾಗೂ ಓಡಿಐ ಎರಡಕ್ಕೂ ಕೂಡ ಎಂಟ್ರಿ ಕೊಡುತ್ತಾರೆ. ಇಲ್ಲಿಯವರೆಗೆ ಟೆಸ್ಟ್ ನಲ್ಲಿ 64 ಪಂದ್ಯಗಳಲ್ಲಿ 229 ವಿಕೆಟ್ಸ್, ಓಡಿಐ ನಲ್ಲಿ 98 ಮ್ಯಾಚ್ ನಲ್ಲಿ 190 ವಿಕೆಟ್, T20 ಯಲ್ಲಿ 23 ರಲ್ಲಿ 24 ವಿಕೆಟ್, ಐಪಿಎಲ್ ನಲ್ಲು ಕೂಡ ಅದ್ಭುತ ಪ್ರದರ್ಶನ, ಇದೀಗ ವರ್ಲ್ಡ್ ಕಪ್ ನಲ್ಲಿ ಅತ್ಯದ್ಭುತ ಎನ್ನುವಂತಹ ಪರ್ಫಾರ್ಮೆನ್ಸ್. ಇದು ಸದ್ಯ ಶಮಿಯ ಆರಂಭಿಕ ಬದುಕು ಹಾಗೆ ಈಗಿನ ಸಾಧನೆಗೆ ಸಂಬಂಧ ಪಟ್ಟಂತಹ ಒಂದಿಷ್ಟು ವಿಚಾರ.
*ಮೊದಲೇ ಮದ್ವೆಯಾಗಿ ಎರಡು ಮಕ್ಕಳಿದ್ದ ತಾಯಿ ಮದ್ವೆಯಾಗಿದ್ದ ಶಮಿ*
ಈಗ ಶಮಿಯ ಏಳು ಬೀಳಿನ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಬರೋಣ. ಸ್ನೇಹಿತರೇ ಶಮಿ ಅನುಭವಿಸಿದ್ದು ಸಾಮಾನ್ಯವಾದ ಮಾನಸಿಕ ಹಿಂಸೆ ಅಲ್ಲವೇ ಅಲ್ಲ. ಅವರ ಪತ್ನಿಯಿಂದಲೇ ಚಿತ್ರಹಿಂಸೆಯನ್ನು ಅನುಭವಿಸಬೇಕಾಯಿತು. ಇಡೀ ದೇಶದ ಎದುರು ಶಮಿ ವಿಲನ್
ರೀತಿ ಕಂಡರು. ಮೊಹಮದ್ ಶಮಿಯ ಪತ್ನಿ ಹಸಿನ್ ಜಹಾನ್ ಒಂದು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದವರು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಚಿಯರ್ ಲೀಡರ್ ಆಗಿ ಕೆಲಸವನ್ನು ಮಾಡುತ್ತಿದ್ದರು.ಮಾಡೆಲ್ ಕೂಡ ಹೌದು. ಈ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮೊಹಮದ್ ಶಮಿ ಆಡುವಂತ ಸಂದರ್ಭದಲ್ಲಿ 2012 ರಲ್ಲಿ ಇಬ್ಬರಿಗೂ ಕೂಡ ಪರಿಚಯವಾಗಿ ಪ್ರೀತಿಸೋಕೆ ಶುರು ಮಾಡಿ ಮಾಡಿ 2014 ರಲ್ಲಿ ಇಬ್ಬರು ಕೂಡ ಮದುವೆಯಾಗುತ್ತಾರೆ. 2015 ರಲ್ಲಿ ಮಗು ಕೂಡ ಆಗುತ್ತೆ. ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಅಂದ್ರೆ ಶಮಿ ಪತ್ನಿ ಶಮಿ ಗಿಂತ 10 ವರ್ಷ ದೊಡ್ಡವರು. ಆದರೂ ಕೂಡ ಶಮಿ ಪ್ರೀತಿಯಲ್ಲಿ ಬಿದ್ದು ಅವರನ್ನು ಮದುವೆಯಾಗುತ್ತಾರೆ.
ಆರಂಭದಲ್ಲಿ ಸಂಸಾರದಲ್ಲಿ ಎಲ್ಲವೂ ಕೂಡ ಚೆನ್ನಾಗಿರುತ್ತದೆ. ಯಾವುದೇ ಸಮಸ್ಯೆಯೂ ಕೂಡ ಇರಲಿಲ್ಲ. ಆದರೆ ಮಧ್ಯದಲ್ಲಿ ಶಮಿಗೆ ಒಂದು ವಿಚಾರ ಗೊತ್ತಾಗುತ್ತೆ. ಶಮಿ ಪತ್ನಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಡಿವೋರ್ಸ್ ಕೂಡ ಆಗಿದೆ ಅಂತ. ಶಮಿ ಪತ್ನಿ ಈ ವಿಚಾರವನ್ನು ಮುಚ್ಚಿಟ್ಟಿದ್ದರು. ಆದರೆ ಶಮಿಗೆ ಸತ್ಯ ಗೊತ್ತಾಗುತ್ತೆ ಹೌದು, ಮಹಮದ್ ಶಮಿ ಪತ್ನಿಗೆ ಮೊದಲೇ ಒಂದು ಮದುವೆ ಆಗಿತ್ತು. ಮೊದಲ ಗಂಡನ ಹೆಸರು ಶೇಕ್ ಸೈಫುದ್ದೀನ್, ಒಂದು ಕಿರಾಣಿ ಅಂಗಡಿಯ ಮಾಲೀಕ. ಅವರಿಬ್ಬರ ನಡುವೆ ಸಮಸ್ಯೆ ಉಂಟಾಗಿ ಡಿವೋರ್ಸ್ ಆಗಿತ್ತು. ಈ ವಿಚಾರ ಶಮಿಗೆ ತುಂಬಾ ಲೇಟಾಗಿ ಗೊತ್ತಾಗುತ್ತದೆ. ಇದೇ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಂಸಾರದಲ್ಲಿ ಬಿರುಕು, ಸಮಸ್ಯೆ ಎಲ್ಲವೂ ಕೂಡ ಕಾಣಿಸಿಕೊಳ್ಳುತ್ತೆ. ಯಾವಾಗ ಶಮಿಗೆ ಈ ವಿಚಾರ ಗೊತ್ತಾಯ್ತು ಯಾಕೆ ಮುಚ್ಚಿಟ್ಟೆ ಎಂದು ವಾಯ್ಸ್ ರೈಸ್ ಮಾಡಿದರು. ಪತ್ನಿ ಶಮಿಯ ವಿರುದ್ಧವೇ ತಿರುಗಿ ಬೀಳುತ್ತಾರೆ.
ಶಮಿಯ ಪತ್ನಿ ಶಮಿ ವಿರುದ್ಧ ಸಾಲುಸಾಲು ಆರೋಪಗಳನ್ನು ಮಾಡುವುದಕ್ಕೆ ಶುರು ಮಾಡುತ್ತಾರೆ. ಶಮಿ ನನಗೆ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ, ಕಿರುಕುಳ ಕೊಡುತ್ತಿದ್ದಾರೆ, ಜೊತೆಗೆ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಿದ್ದಾರೆ, ಹತ್ತಕ್ಕೂ ಅಧಿಕ ಹೆಣ್ಣುಮಕ್ಕಳ ಜೊತೆ ಸಂಬಂಧವನ್ನು ಹೊಂದಿದ್ದಾರೆ, ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಹೀಗೆ ಸಾಲು ಸಾಲು ಆರೋಪವನ್ನು ಹೊರಿಸುತ್ತಾರೆ. ಇದರಿಂದ ಮೊಹಮ್ಮದ್ ಶಮಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಕಾರಣ ಸಾರ್ವಜನಿಕವಾಗಿ ಶಮಿಯ ವಿರುದ್ಧ ಬೇರೆ-ಬೇರೆ ರೀತಿಯ ಮಾತುಗಳು ಕೇಳಿಬರುತ್ತಿದ್ದವು. ಮಾಧ್ಯಮಗಳಲ್ಲಿ ಅಂತೆ ಕಂತೆಯ ಸುದ್ದಿಗಳು ಪ್ರಸಾರ ಆಗುತ್ತೆ. ಬಹುತೇಕ ಎಲ್ಲರೂ ಕೂಡ ಶಮಿಯ ಪತ್ನಿಯ ಪರ ನಿಲ್ಲುತ್ತಾರೆ. ಶಮಿಯ ಪರ್ಫಾರ್ಮೆನ್ಸ್ ನಲ್ಲೂ ಕೂಡ ಅದು ಎಫೆಕ್ಟ್ ಆಗುತ್ತೆ. ಇದರ ನಡುವೆ ಶಮಿ ಯವರು ಬಹಳ ಪ್ರೀತಿಸುತ್ತಿದ್ದ ತನ್ನ ತಂದೆಯನ್ನು ಕೂಡ ಕಳೆದುಕೊಳ್ಳುತ್ತಾರೆ. ಶಮಿಯ ಬದುಕು ಸಂಪೂರ್ಣವಾಗಿ ಏರುಪೇರಾಗುತ್ತದೆ 2018 ನೇ ಇಸವಿಯ ಸಂದರ್ಭದಲ್ಲಿ ಆಗ ಶಮಿ ಕ್ರಿಕೆಟ್ ತೊರೆಯುವಂತಹ ನಿರ್ಧಾರಕ್ಕೂ ಬರುತ್ತಾರೆ. ಯಾಕಂದ್ರೆ ಅಷ್ಟರ ಮಟ್ಟಿಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ತಂಡಕ್ಕೆ ಸೆಲೆಕ್ಟ್ ಆಗದಂತ ಮಟ್ಟಿಗೆ ಅವರು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸುತ್ತಾ ಇರುತ್ತಾರೆ. ಅಷ್ಟು ಮಾತ್ರ ಅಲ್ಲ ಅದೇ ಸಂದರ್ಭದಲ್ಲಿ ಮೊಹಮದ್ ಶಮಿ ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನ ಪಡುತ್ತಾರೆ. ಯಾಕಂದ್ರೆ ಸ್ಟಾರ್ ಆಟಗಾರ, ಸೆಲೆಬ್ರೆಟಿ ಸ್ಟೇಟಸ್ ಸಿಕ್ಕಿತ್ತು, ಹೀಗಾಗಿ ಶಮಿ ಪತ್ನಿ ಏನೇನು ಆರೋಪ ಮಾಡುತ್ತಾರೆ ಅದೆಲ್ಲವನ್ನು ಕೂಡ ಜನ ನಂಬುವುದಕ್ಕೆ ಶುರು ಮಾಡುತ್ತಾರೆ. ಶಮಿ ತಮ್ಮನ್ನು ಹೇಗೆ ಸಮರ್ಥನೆ ಮಾಡಿಕೊಂಡರೂ, ಹೇಗೆ ಡಿಫೆಂಡ್ ಮಾಡಿದರೂ ಕೂಡ ಜನ ನಂಬುವುದಕ್ಕೆ ರೆಡಿನೇ ಇರ್ಲಿಲ್ಲ. ಶಮಿ ತಾವು ಒಳ್ಳೆಯ ಪ್ರದರ್ಶನ ಕೊಟ್ಟು ಮಾತ್ರ ಒಳ್ಳೆ ಮನುಷ್ಯ ಅಂತ ಜನರ ಎದುರಿಗೆ ತೋರಿಸಿಕೊಳ್ಳುವ ಪರಿಸ್ಥಿತಿ ಎದುರಾಗುತ್ತೆ. ಏನೇ ಹೇಳಿದರೂ ಕೂಡ ಶಮಿಯ ಮಾತನ್ನು ಯಾರು ಕೂಡ ನಂಬುತ್ತಿರಲಿಲ್ಲ.
ಹೀಗೆ ಹೋಗುತ್ತಿರುವ ಸಂದರ್ಭದಲ್ಲಿ ಶಮಿ ಪತ್ನಿಯ ಮೊದಲ ಗಂಡ ಮಾಧ್ಯಮದ ಮುಂದೆ ಬಂದು ಅಸಲಿ ವಿಚಾರ ಮಾತನಾಡುವುದಕ್ಕೆ ಶುರು ಮಾಡುತ್ತಾರೆ. ಅದಾದ್ಮೇಲೆ ಎಲ್ಲರಿಗೂ ಕೂಡ ನಿಜ ಸಂಗತಿ ಗೊತ್ತಾಗುತ್ತೆ. ಶಮಿಯ ಕರಿಯರ್ ಒಂದು ಹಂತಕ್ಕೆ ಡ್ಯಾಮೇಜ್ ಆಗಿತ್ತು. ಜೊತೆಗೆ ಅವರ ವ್ಯಕ್ತಿತ್ವವೂ ಕೂಡ ಡ್ಯಾಮೇಜ್ ಆಗಿ ಹೋಗಿತ್ತು. ಅದನ್ನು ಸರಿಪಡಿಸಲಾಗದರಷ್ಟರ ಮಟ್ಟಿಗೆ ಕುಗ್ಗಿ ಹೋಗಿದಂತ ಶಮಿ ನಿಧಾನವಾಗಿ ಮಾನಸಿಕವಾಗಿ ಸದೃಢರಾಗಲು ಶುರು ಮಾಡುತ್ತಾರೆ. ತನ್ನ ಬದುಕನ್ನು ತಾನು ಗಟ್ಟಿಯಾಗಿ ಕಟ್ಟಿಕೊಳ್ಳಬೇಕು ಅಂತ ಡಿಸೈಡ್ ಮಾಡುತ್ತಾರೆ. ಮತ್ತೆ ಅದ್ಭುತವಾಗಿ ಪ್ರಾಕ್ಟೀಸ್ ಮಾಡುತ್ತಾರೆ, ತಂಡಕ್ಕೆ ಕಂಬ್ಯಾಕ್ ಮಾಡುತ್ತಾರೆ.ತಂಡಕ್ಕೆ ಒಳ್ಳೆಯ ಪ್ರದರ್ಶನ ಕೂಡ ಕೊಡಲು ಶುರು ಮಾಡುತ್ತಾರೆ. ಇದರ ನಡುವೆ ಆ ಮ್ಯಾಚ್ ಫಿಕ್ಸಿಂಗ್ ಅಂತ ಆರೋಪ ಮಾಡಿದ್ರಲ್ಲ ಅದನ್ನು ತುಂಬಾ ಜನ ನಂಬಿ ಬಿಟ್ಟಿದ್ದರು. ಅದಕ್ಕೆ ಸಂಬಂಧ ಪಟ್ಟ ಹಾಗೆ ಶಮಿ ಒಂದು ಸ್ಪಷ್ಟವಾದ ಸಂದೇಶವನ್ನು ರವಾನೆ ಮಾಡುತ್ತಾರೆ ಮಾಧ್ಯಮದ ಎದುರು. ಹಾಗೇನಾದ್ರೂ ದೇಶದ್ರೋಹ ಮಾಡಬೇಕು ಅನ್ನೋದು ಮನಸ್ಸಿನಲ್ಲಿ ಬಂದರೂ ಕೂಡ ನಾನು ಆ ಕ್ಷಣವೇ ಪ್ರಾಣ ಬಿಟ್ಟುಬಿಡುತ್ತೇನೆ. ಯಾವತ್ತು ಕೂಡ ದೇಶದ್ರೋಹದ ಬಗ್ಗೆ ಯೋಚನೆ ಮಾಡೋದಿಲ್ಲ ಅಂತ. ಅಂತಿಮವಾಗಿ ಪತ್ನಿ ಮತ್ತು ಅವರ ನಡುವೆ ಒಂದಿಷ್ಟು ಜಟಾಪಟಿ ನಡೆಯುತ್ತಿತ್ತಲ್ಲ, ಅದು ಸುದೀರ್ಘ ಅವಧಿಯವರೆಗೆ ಎಳೆದು ಡಿವೋರ್ಸ್ ಆಗುತ್ತೆ ಇಬ್ಬರ ನಡುವೆ. ಅಂತಿಮವಾಗಿ ಗಂಡ-ಹೆಂಡ್ತಿ ಬೇರೆ ಬೇರೆ ಆಗುತ್ತಾರೆ.ಅದಾದ್ಮೇಲೆ ಶಮಿ ನಿದಾನಕ್ಕೆ ತಂಡಕ್ಕೆ ಕಂಬ್ಯಾಕ್ ಮಾಡ್ತಾರೆ. ಹಂತ ಹಂತವಾಗಿ ಉತ್ತಮ ಪ್ರದರ್ಶನ ಕೊಡುತ್ತಾರೆ. ಇದೀಗ ವರ್ಲ್ಡ್ ಕಪ್ ನಲ್ಲಿ ವರ್ಲ್ಡ್ ಕ್ಲಾಸ್ ಪ್ರದರ್ಶನದ ಮೂಲಕ ಇಡೀ ದೇಶದ ಮನಸ್ಸನ್ನು ಗೆದ್ದಿದ್ದಾರೆ. ಜನರ ಪ್ರೀತಿಯನ್ನು ಗಳಿಸುತ್ತಿದ್ದಾರೆ.
ಇದೇ ಮಹಮದ್ ಶಮಿ ಯನ್ನು 2021 ರಲ್ಲಿ T20 ವರ್ಲ್ಡ್ ಕಪ್ ನಲ್ಲಿ ಜನ ದೂಷಿಸಿದ್ದರು. ಆಗ ಪಾಕಿಸ್ತಾನದ ಎದುರು ಸೋತಂತ ಸಂದರ್ಭದಲ್ಲಿ ಮಹಮದ್ ಶಮಿ ಪಾಕಿಸ್ತಾನದ ಏಜೆಂಟ್ ಅನ್ನೋತರ ಆಡಿಕೊಂಡಿದ್ದರು.ಮೊಹಮ್ಮದ್ ಶಮಿಯ ಧರ್ಮದ ಕಾರಣಕ್ಕಾಗಿ. ಇದೆಲ್ಲವನ್ನು ಕೂಡ ಗೆದ್ದು ಬರುವುದು ಸಾಮಾನ್ಯವಾಗಿರಲಿಲ್ಲ.ಆದರೆ ಇವತ್ತು ಗೆದ್ದು ಬಂದಿದ್ದಾರೆ.ಇಡೀ ದೇಶದ ಜನರ ಪ್ರೀತಿಯನ್ನು ಗಳಿಸಿದ್ದಾರೆ. ಈ ವರ್ಲ್ಡ್ ಕಪ್ ನಲ್ಲಿ ತಂಡದಿಂದ ಅವರನ್ನು ಹೊರಗೆ ಇಡೋದಕ್ಕೆ ಸಾಧ್ಯನೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಉತ್ತಮ ಪ್ರದರ್ಶನವನ್ನು ಕೊಡುತ್ತಾ ಇದ್ದಾರೆ. ಇದು ಮಹಮ್ಮದ್ ಶಮಿಯ ಬದುಕಿಗೆ ಸಂಬಂಧ ಪಟ್ಟ ಹಾಗೆ ಒಂದಿಷ್ಟು ವಿಚಾರ.
ಸ್ನೇಹಿತರೇ, ಈ ಸಂಗತಿಯನ್ನು ನಿಮ್ಮ ಮುಂದೆ ಯಾಕೆ ಇಟ್ಟೆ ಅಂದ್ರೆ ಮನುಷ್ಯ ಅಂದಾಗ ಸೋಲು ಸಹಜ. ಸೆಲೆಬ್ರಿಟಿ ಆಗಿರಲಿ, ಬಡವ ಆಗಿರಲಿ, ಶ್ರೀಮಂತ ಆಗಿರಲಿ, ಯಾರೇ ಆಗಿರಲಿ ಮನುಷ್ಯನಿಗೆ ಕಷ್ಟ ಬರದೇ ಮರಕ್ಕೆ ಕಷ್ಟ ಬರುವುದು ಸಾಧ್ಯವೇ ಇಲ್ಲ. ಬದುಕಿನಲ್ಲಿ ಸಾಕಷ್ಟು ಏಳುಬೀಳು ಆಗುತ್ತೆ. ನಾವು ತಪ್ಪು ಮಾಡದೇ ಇದ್ದರೂ ಕೂಡ ಒಂದಷ್ಟು ಆರೋಪಗಳನ್ನು ಫೇಸ್ ಮಾಡಬೇಕಾಗುತ್ತದೆ. ಹೊರ ಜಗತ್ತಿಗೆ ಯಾವುದು ಸತ್ಯ, ಯಾವುದು ಸುಳ್ಳು ಅಂತ ಗೊತ್ತಿರೋದಿಲ್ಲ. ಒಂದು ರೀತಿಯಲ್ಲಿ ಅದೆಲ್ಲವನ್ನು ಕೂಡ ನುಂಗಿಕೊಂಡು ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಆದರೆ ಅದೆಲ್ಲವನ್ನು ಕೂಡ ಫೇಸ್ ಮಾಡೋದಿಕ್ಕೆ ಮಾನಸಿಕವಾಗಿ ನಾವು ರೆಡಿ ಇರಬೇಕು ಅಷ್ಟೇ. ಅದೆಲ್ಲವನ್ನು ಕೂಡ ಫೇಸ್ ಮಾಡಿದಾಗ ಮಾತ್ರ ನಾವು ಬದುಕಿನಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಅದರಿಂದ ಕುಗ್ಗಿ ಹೋಗಿ ಬಿಟ್ಟರೆ ನಾವು ಬದುಕಿನಲ್ಲಿ ಸೋತು ಹೋಗಿ ಬಿಡುತ್ತೇವೆ. ಇವತ್ತು ಮೊಹಮ್ಮದ್ ಶಮಿಯ ಬದುಕೇ ನಮಗೆಲ್ಲರಿಗೂ ಸ್ಪೂರ್ತಿ ಅಂತ ಹೇಳಿದರೆ ತಪ್ಪಾಗಲಿಕ್ಕಿಲ್ಲ.
ಸುರೇಶ್ ಭಟ್, ಮೂಲ್ಕಿ
ಕ್ರೀಡಾ ಬರಹಗಾರರು
ಸ್ಪೋರ್ಟ್ಸ್ ಕನ್ನಡ.ಕಾಮ್