ಬಹ್ರೇನ್ ದೇಶದ ರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಬಹ್ರೇನ್ ಕ್ರಿಕೆಟ್ ಫೆಡರೇಶನ್ ಎಂಬ ನೂತನ ಹೆಸರಿನೊಂದಿಗೆ ಹೊಸದಾಗಿ ರಚಿಸಲಾಗಿದೆ.
ಯುವರಾಜ H.H ಶೇಖ್ ಖಾಲಿದ್ ಬಿನ್ ಹಮದ್ ಅಲ್ ಖಲೀಫಾರವರ ಮಾರ್ಗದರ್ಶನ ಹಾಗೂ ಪೋಷಕತ್ವದಲ್ಲಿ ರಚಿಸಲಾದ ಬಹ್ರೇನ್ ಕ್ರಿಕೆಟ್ ಫೆಡರೇಶನ್ ನಿಯಂತ್ರಣ ಮಂಡಳಿಗೆ ಪ್ರಸಿದ್ಧ ಉದ್ಯಮಿ ಹಾಗೂ ಕ್ರೀಡಾ ಸಂಘಟಕರು,ಮಂಗಳೂರಿಗರಾದ ಶ್ರೀ ಮೊಹಮ್ಮದ್ ಮನ್ಸೂರ್ ಹೆಜಮಾಡಿಯವರನ್ನು ಮಂಡಳಿಯ ಸಲಹೆಗಾರ(Advisor Of the Board)ರನ್ನಾಗಿ ನೇಮಿಸಲಾಗಿದೆ.
ಇನ್ನು ಮುಂದೆ ಬಹ್ರೇನ್ ನಲ್ಲಿ ನಡೆಯುವ ಎಲ್ಲಾ ಕ್ರಿಕೆಟ್ ಚಟುವಟಿಕೆಗಳು ಈ ಮಂಡಳಿಯ ಅನುಮತಿಯೊಂದಿಗೆ ನಡೆಯಬೇಕಾಗುತ್ತದೆ.ಇದೇ ಸಂದರ್ಭದಲ್ಲಿ 92 ತಂಡಗಳು ಭಾಗಿಯಾಗಲಿರುವ ಪ್ರತಿಷ್ಠಿತ “ಖಾಲಿದ್ ಬಿನ್ ಹಮದ್ ಲೀಗ್” ಕಪ್ ಕ್ರಿಕೆಟ್ ಪಂದ್ಯಾಟವನ್ನು ನಡೆಸಲು ಭರ್ಜರಿ ಸಿದ್ಧತೆಗಳು ಜರುಗಿದೆ.ಬಹ್ರೇನ್ ದೇಶದ ಕ್ರೀಡಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪ್ರತಿಷ್ಠಿತ ಹುದ್ದೆ ಗಿಟ್ಟಿಸಿದ ಹೆಮ್ಮೆಯ ಕನ್ನಡಿಗರಾದ ಮೊಹಮ್ಮದ್ ಮನ್ಸೂರ್ ಹೆಜಮಾಡಿ ನಿಮಗೆ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಪರವಾಗಿ ಅಭಿನಂದನೆಗಳು…