ಸದಾ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ರಾಜ್ಯದ ಮಾದರಿ ಕ್ರೀಡಾ ಸಂಸ್ಥೆ “ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ) ಪಿತ್ರೋಡಿ. ಕಳೆದ ಮೂರು ದಶಕಗಳಿಂದ ಕ್ರೀಡೆಯ ಜೊತೆಗೆ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳನ್ನು ನಡೆಸುತ್ತಾ ಬಂದಿರುವ ಈ ಸಂಸ್ಥೆ ಈ ಬಾರಿಯ ದೀಪಾವಳಿಯನ್ನು ಮಾದರಿಯಾಗಿ ಆಚರಿಸಿಕೊಂಡಿತು.
ತಂಡದ ಸದಸ್ಯರು ದೀಪಾವಳಿ ಹಬ್ಬದ ಸಂದರ್ಭ ಪಟಾಕಿಗೆಂದು ಅನವಶ್ಯಕ ಖರ್ಚು ಮಾಡುವ ಹಣವನ್ನು ಉಳಿಸಿಕೊಂಡು ಸತತ 5 ನೇ ವರ್ಷ ಅಲೆವೂರಿನ ಶ್ರೀಕೃಷ್ಣ ಬಾಲನಿಕೇತನ ಸಂಸ್ಥೆಯ 55 ಮಕ್ಕಳಿಗೆ ಹೊಸ ಬಟ್ಟೆಗಳನ್ನು ವಿತರಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು. ಫಲಾನುಭವಿ ಮಕ್ಕಳ ಮೊಗದಲ್ಲಿ ದೀಪಾವಳಿಯ ಬೆಳಕಿನ ಮಿನುಗುವ ಪ್ರಕಾಶ ಮೂಡಿತ್ತು.ಸಂಸ್ಥೆಯ ಸದಸ್ಯರ ಮನದಾಳದಲ್ಲೂ ಸಾರ್ಥಕ್ಯ ಭಾವ ಮನೆ ಮಾಡಿತ್ತು.
ಈ ಸಂದರ್ಭ ತಂಡದ ಅಧ್ಯಕ್ಷ ಮಲ್ಲೇಶ್ ಬಂಗೇರ, ಜಿತೇಂದ್ರ ಶೆಟ್ಟಿ, ಸತೀಶ್ ಕುಂದರ್, ಉಮೇಶ್ ಕರ್ಕೇರ, ವಿಜಯ್ ಕುಮಾರ್, ನವೀನ್ ಸಾಲ್ಯಾನ್, ಸಂತೋಷ್ ಕುಂದರ್, ವಾಸು ಸಾಲ್ಯಾನ್, ರಾಯ್ ಮಸ್ಕರೇನಸ್, ಕಿರಣ್ ಕುಮಾರ್, ಯುವರಾಜ್ ಸಾಲ್ಯಾನ್, ನಾಗೇಶ್ ಮೈಂದನ್, ಹರಿಶ್ಚಂದ್ರ ಕೋಟ್ಯಾನ್, ನವೀಶ್, ರಿಹಾನ್ ಹಾಗೂ ತಂಡದ ಕಪ್ತಾನ ಪ್ರವೀಣ್ ಪಿತ್ರೋಡಿ ಮತ್ತಿತರರು ಉಪಸ್ಥಿತರಿದ್ದರು…
ಆರ್.ಕೆ.ಆಚಾರ್ಯ ಕೋಟ