*ಕೆ.ಆರ್.ಕೆ ಆಚಾರ್ಯ-ಸ್ಪೋರ್ಟ್ಸ್ ಕನ್ನಡ ವರದಿ*
ಮಂಗಳೂರು- ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಾ ನಿರತ ಹಿರಿಯ ಕ್ರೀಡಾ ಸಂಸ್ಥೆ ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್ (ರಿ) ಉಳ್ಳಾಲ ಇವರ ಆಶ್ರಯದಲ್ಲಿ,ಅಗಲಿದ ಮಿತ್ರರ ಸವಿನೆನಪಿಗಾಗಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಹಬ್ಬ ಮಾರುತಿ ಟ್ರೋಫಿ-2023 ಪಂದ್ಯಾವಳಿಗೆ ಫೆಬ್ರವರಿ 15 ಬುಧವಾರ ನಾಳೆ ಅದ್ಧೂರಿಯ ಚಾಲನೆ ದೊರಕಲಿದೆ.
ಫೆಬ್ರವರಿ 15 ಮತ್ತು 16 ರಂದು ಮೊಗವೀರ ಸಮಾಜ ಬಾಂಧವರ ಪ್ರತಿಷ್ಠಿತ 8 ಫ್ರಾಂಚೈಸಿಗಳ ನಡುವೆ ಜಿದ್ದಾ ಜಿದ್ದಿನ ಕದನ ಮಂಗಳೂರಿನ
ನೆಹರೂ ಮೈದಾನದಲ್ಲಿ ಪ್ರಾರಂಭವಾಗಲಿದೆ.
ನಾಳೆ ಒಟ್ಟು 8 ಪಂದ್ಯಗಳು ನಡೆಯಲಿದ್ದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಮೊದಲ ಪಂದ್ಯ ಪ್ರಗತಿ ನಾರ್ತ್ ಸ್ಟಾರ್ ಬೆಂಗ್ರೆ ಮತ್ತು ಮೊಗವೀರ ಇಲೆವೆನ್ ಉಳ್ಳಾಲದ ನಡುವೆ ನಡೆಯಲಿದೆ.ದ್ವಿತೀಯ ಪಂದ್ಯ ಮೊಗವೀರ ಯುವಕೂಟ ಮತ್ತು ಮಾರುತಿ ಹೆಜಮಾಡಿ ನಡುವೆ ನಡೆಯಲಿದೆ.
*ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಅದ್ಧೂರಿಯ ಉದ್ಘಾಟನಾ ಸಮಾರಂಭ*
ಬುಧವಾರ ಸಂಜೆ 6.30 ಸರಿಯಾಗಿ ಉಡುಪಿ ಜಿಲ್ಲಾ ಸಹಕಾರಿ ಮೀನುಮಾರಾಟ ಫೆಡರೇಶನ್ ಅಧ್ಯಕ್ಷರಾದ ಯಶಪಾಲ್ ಸುವರ್ಣ ಮಾರುತಿ ಮೊಗವೀರ ಪ್ರೀಮಿಯರ್ ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ.ಮಂಗಳೂರು ಯಾಂತ್ರಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್.ಟಿ.ಕರ್ಕೇರ(ಮತ್ಸ್ಯ ರಾಜ್) ಇವರು ಮಿರುಗುವ ಟ್ರೋಫಿಯನ್ನು ಅನಾವರಣಗೊಳಿಸಲಿದ್ದಾರೆ.
ದ.ಕ ಮಹಾಜನ ಸಂಘದ ಅಧ್ಯಕ್ಷರಾದ ಜಯ.ಸಿ.ಕೋಟ್ಯಾನ್ ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ.ಮಂಗಳೂರು ಕಾಂಚನ ಮೋಟಾರ್ಸ್ ಆಡಳಿತ ನಿರ್ದೇಶಕರಾದ ಪ್ರಸಾದ್ ರಾಜ್ ಕಾಂಚನ್,ದ.ಕ ಮೊಗವೀರ ಸಂಯುಕ್ತ ಸಂಘ ಅಧ್ಯಕ್ಷರಾದ ಭರತ್ ಕುಮಾರ್ ಉಳ್ಳಾಲ,ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷರಾದ ಮನೋಜ್ ಸಾಲ್ಯಾನ್,ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ನಿತಿನ್ ಕುಮಾರ್,ಮತ್ಸ್ಯೋದ್ಯಮಿ ಮೋಹನ್ ಬೆಂಗ್ರೆ,ಮಂಗಳೂರು ಎಸ್.ಎ.ಎಮ್ ಫಿಶರೀಸ್ ನ ಮಾಲಕ ಸಿಂಧೂರಾಮ್.ಎ.ಪುತ್ರನ್,ಕರ್ನಾಟಕ ರಾಜ್ಯ ಪುಟ್ಬಾಲ್ ಸಂಸ್ಥೆ ಕಾರ್ಯದರ್ಶಿ ವಿಜಯ್ ಸುವರ್ಣ,ಮಂಗಳೂರು ಟ್ರಾಲ್ ಬೋಟ್ ಮೀನುಗಾರರ ಸಂಘ ಅಧ್ಯಕ್ಷ ಚೇತನ್ ಬೆಂಗ್ರೆ,ಶ್ರೀ ಕ್ಷೇತ್ರ ಉಚ್ಚಿಲ ಕೋಶಾಧಿಕಾರಿ ವಿನಯ್ ಕರ್ಕೇರ ಮಲ್ಪೆ,ಮೊಗವೀರ ಹಿ.ಪ್ರಾ.ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಪುತ್ರನ್,ಮಾರುತಿ ಯುವಕ ಮಂಡಲ (ರಿ) ಅಧ್ಯಕ್ಷರಾದ ವರದರಾಜ್ ಬಂಗೇರ ಇವರು ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.
*ರಾಜ್ಯಮಟ್ಟದ ಕ್ರೀಡಾಪಟುಗಳಿಗೆ ಅಭಿನಂದನಾ ಸಮಾರಂಭ*
16 ಗುರುವಾರದಂದು ಮೊಗವೀರ ಪ್ರೀಮಿಯರ್ ಲೀಗ್ ನ ನಿರ್ಣಾಯಕ ಹಂತದ ಪಂದ್ಯಗಳು ನಡೆಯಲಿದ್ದು,ಸಂಜೆ 6.30 ಗಂಟೆಗೆ ಸರಿಯಾಗಿ ರಾಜ್ಯಮಟ್ಟದ ಕ್ರೀಡಾಪಟುಗಳಿಗೆ ಅಭಿನಂದನಾ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ,ಕೆ.ಬಿ.ಆರ್ ಮತ್ತು ಐ.ಎಮ್.ಎನ್ ಮೀನು ಮಾರಾಟಗಾರರ ಮಾಲಕರಾದ ಜನಾಬ್ ಸುಲೈಮನ್(KBR),ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷರಾದ ಸದಾನಂದ ಬಂಗೇರ,ಮಾರುತಿ ಕ್ರಿಕೆಟರ್ಸ್ ಉಳ್ಳಾಲ ಮಾಜಿ ಅಧ್ಯಕ್ಷ ಪ್ರಕಾಶ್ ಡಿಸೋಜಾ,ಕರ್ನಾಟಕ ರೆಡ್ ಕ್ರಾಸ್ ಸೊಸೈಟಿ ಕಮಿಟಿ ಸದಸ್ಯ ಯತೀಶ್ ಬೈಕಂಪಾಡಿ,ಹಾರೀಸ್ ಮರೈನ್ ಪ್ರಾಡಕ್ಟ್ ನ ಆಡಳಿತ ನಿರ್ದೇಶಕರಾದ ಜನಾಬ್ ಹಾರಿಸ್ ಮುಕ್ಕ,ಮಲ್ಪೆ ಓಶಿಯನ್ ಪರ್ಲ್ ಫಿಶರೀಸ್ ನ ಎನ್.ಪಿ.ರಿಯಾಝ್,ಮಂಗಳೂರು ಶ್ರೀ ವ್ಯಾಘ್ರ ಬಂದರು ಲೋಕೇಶ್ ಬಂಗೇರ,ಬೋಟ್ ಹಿಮಾಂಶ್ ನ ಮಾಲೀಕರಾದ ಸುನಿಲ್ ಪುತ್ರನ್ ಉಳ್ಳಾಲ,ಡಿ.ಕೆ.ಸಿ.ಎ ನಿವೃತ್ತ ಮೆನೇಜರ್ ಕಸ್ತೂರಿ ಬಾಲಕೃಷ್ಣ ಪೈ,ಸ್ನೇಹ ಭಾರತಿ ಉಳ್ಳಾಲ ಬೋಟ್ ನ ಮೋಹನ್.ಜಿ.ಕೋಟ್ಯಾನ್,
ಉಳ್ಳಾಲ ಕ್ರಿಕೆಟ್ ಬೋರ್ಡ್ ನ ಗೌರವಾಧ್ಯಕ್ಷರಾದ ಜನಾಬ್ ಯು.ಹೆಚ್ ಹಸೈನಾರ್ ಮತ್ತು ಯಜ್ಞೇಶ್ ಮುಕ್ಕ ಭಾಗವಹಿಸಲಿದ್ದಾರೆ.
*ಶುಕ್ರವಾರ ಬೆಳಿಗ್ಗೆಯಿಂದ ರಾಷ್ಟ್ರೀಯ ಮಟ್ಟದ ಪಂದ್ಯಾಟಗಳು ಪ್ರಾರಂಭವಾಗಲಿದ್ದು,ಸಂಜೆ 6.30 ಗಂಟೆಗೆ ಸರಿಯಾಗಿ ವರ್ಣರಂಜಿತ ಉದ್ಘಾಟನಾ ಸಮಾರಂಭ ಮತ್ತು ಸಹಾಯಧನ ವಿತರಣಾ ಸಮಾರಂಭ ನಡೆಯಲಿದ್ದು ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.ರವಿವಾರ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಮಾಜಿ ಅಂತರಾಷ್ಟ್ರೀಯ ಕ್ರಿಕೆಟ್ ಪಟು,1983 ವಿಶ್ವಕಪ್ ವಿಜೇತ ತಂಡದ ವಿಕೆಟ್ ಕೀಪರ್ ಸೈಯದ್ ಕೀರ್ಮಾನಿಯವರು ವಿಶೇಷ ಅತಿಥಿಯಾಗಿ ಆಗಮಿಸಲಿದ್ದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದಾರೆ.*