ಕ್ರಿಕೆಟ್ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್ (ರಿ) ಉಳ್ಳಾಲ‌ ಆಶ್ರಯದಲ್ಲಿ...

ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್ (ರಿ) ಉಳ್ಳಾಲ‌ ಆಶ್ರಯದಲ್ಲಿ ಅಗಲಿದ ಹಿರಿಯ ಆಟಗಾರರ ಸ್ಮರಣಾರ್ಥ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ

-

- Advertisment -spot_img
ಉಳ್ಳಾಲ-ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್(ರಿ) ಮೊಗವೀರ ಪಟ್ಣ ಉಳ್ಳಾಲ ಇವರ ಆಶ್ರಯದಲ್ಲಿ ಅಗಲಿದ ಹಿರಿಯ ಆಟಗಾರರು ಮತ್ತು ಕ್ರೀಡಾಪ್ರೋತ್ಸಾಹಕರಾದ ಸಾಹುಕಾರ್ ರಂಗಪ್ಪ ಬೆಂಗಳೂರು,ಶರತ್ ತಿಂಗಳಾಯ,ಅಶ್ವತ್ಥ್ ಪುತ್ರನ್ ಮತ್ತು ವಿನೋದ್ ಬೆಂಗ್ರೆ ಇವರ ಸ್ಮರಣಾರ್ಥ,ಮಂಗಳೂರಿನ ನೆಹರೂ ಮೈದಾನದಲ್ಲಿ ಫೆಬ್ರವರಿ 15 ರಿಂದ 19 ರ ತನಕ 5 ದಿನಗಳ‌ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ “ಮಾರುತಿ ಟ್ರೋಫಿ-2023” ಆಯೋಜಿಸಲಾಗಿದೆ.
*ಮೊಗವೀರ ಟ್ರೋಫಿ-2023(ಮೊಗವೀರ ಸಮಾಜ ಬಾಂಧವರಿಗಾಗಿ)*
ಫೆಬ್ರವರಿ 15 ಮತ್ತು 16 ರಂದು ಮೊಗವೀರ ಸಮಾಜ ಬಾಂಧವರಿಗಾಗಿ ನೆಹರೂ ಮೈದಾನದಲ್ಲಿ ಮೊಗವೀರ ಟ್ರೋಫಿ ಆಯೋಜಿಸಲಾಗಿದೆ.
ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಈ ಪಂದ್ಯಾಟದ ಪ್ರಥಮ‌ ಪ್ರಶಸ್ತಿ  2 ಲಕ್ಷ ನಗದು ಹಾಗೂ ದ್ವಿತೀಯ ಪ್ರಶಸ್ತಿ 1 ಲಕ್ಷ ನಗದು ಬಹುಮಾನದೊಂದಿಗೆ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ ಹಾಗೂ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಪ್ರದರ್ಶನ ನೀಡಿದ ಆಟಗಾರ ವಿಶೇಷ ಉಡುಗೊರೆಗಳನ್ನು ಪಡೆಯಲಿದ್ದಾರೆ.
*ಮಾರುತಿ ಟ್ರೋಫಿ-2023(ರಾಷ್ಟ್ರೀಯ ಮಟ್ಟದ ಪಂದ್ಯಾಟ)*
ಫೆಬ್ರವರಿ 17,18 ಮತ್ತು 19 ರಂದು ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದೆ.ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಲಿರುವ ಈ ಪಂದ್ಯಾಟದ ಪ್ರಥಮ ಪ್ರಶಸ್ತಿ 4 ಲಕ್ಷ ನಗದು,ದ್ವಿತೀಯ 2 ಲಕ್ಷ ನಗದು,ಸೆಮಿಫೈನಲ್ ಪರಾಜಿತ ತಂಡಗಳು ತಲಾ 50 ಸಾವಿರ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.ಹಾಗೂ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಆಟಗಾರರಿಗೆ ವಿಶೇಷ ಬಹುಮಾನ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದ ಆಟಗಾರ ಆಕರ್ಷಕ ದ್ವಿಚಕ್ರ ವಾಹನ ತಮ್ಮದಾಗಿಸಿಕೊಳ್ಳಲಿದ್ದಾರೆ.
*ಕ್ರೀಡೆಯಲ್ಲದೇ ಸಮಾಜಸೇವೆಯ ಸಾರ್ಥಕತೆಯಲ್ಲಿ ಸುಧೀರ್ಘ ಪ್ರಯಾಣ-ಮಾರುತಿ ಯುವಕ ಮಂಡಲ(ರಿ)*
1985 ರಲ್ಲಿ ಸ್ಥಾಪನೆಯಾದ ಮಾರುತಿ ಯುವಕ ಮಂಡಲ(ರಿ)  ಕ್ರೀಡೆಯೊಂದಿಗೆ ಸದ್ದಿಲ್ಲದೇ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದು,ದ‌.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಅನೇಕ ಗೌರವಗಳಿಗೆ ಪಾತ್ರವಾಗಿದೆ.ಮಾರುತಿ ಕ್ರಿಕೆಟರ್ಸ್ ಸನ್ಮಾನಗಳ ಹಿಂದೆ ಓಡದೆ ಸೇವೆಗಳ ಸಾರ್ಥಕತೆಯಲ್ಲಿ ಈಗಾಗಲೇ 37 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಉಳ್ಳಾಲದ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಗೆ ಮಾರುತಿ ಯುವಕ ಮಂಡಲವು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಶಾಲಾ ಕಟ್ಟಡವನ್ನು ಗುರುಕಾಣಿಕೆಯಾಗಿ ಅರ್ಪಿಸಿದೆ,ಒಂದು ಯುವಕ ಮಂಡಲವು ಶಿಕ್ಷಣ ಸಂಸ್ಥೆಯೊಂದಕ್ಕೆ ಇಷ್ಟು ಮೊತ್ತದ ಕೊಡುಗೆ ನೀಡಿರುವುದು ಕರ್ನಾಟಕದ ಇತಿಹಾಸದಲ್ಲೇ ಮೊದಲು.2012 ರಲ್ಲಿ ಮಾರುತಿ ಸಂಸ್ಥೆಯ ರಜತ ಮಹೋತ್ಸವ ಸುಸಂದರ್ಭದಲ್ಲಿ ಸಾಂಸ್ಕೃತಿಕ ಕಲರವದೊಂದಿಗೆ ಉಳ್ಳಾಲದಲ್ಲಿ  ಬೀಚ್ ಉತ್ಸವ ಆಚರಿಸಿದ್ದು ಸುಮಾರು ಒಂದು ಲಕ್ಷಕ್ಕೂ‌ ಅಧಿಕ ಮಂದಿ ಉತ್ಸವದಲ್ಲಿ ಪಾಲ್ಗೊಂಡಿದ್ದು ದಾಖಲೆ.
ದೈಹಿಕ-ಮಾನಸಿಕ ಅಸ್ವಸ್ಥರಿಗೆ,ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗೆ ಒಳಗಾದವರಿಗೆ ಜಾತಿ ಮತ ಭೇದವಿಲ್ಲದೆ ಅಗತ್ಯವಾದ ಸಲಕರಣೆ ಮತ್ತು ಆರ್ಥಿಕ ನೆರವನ್ನು ನೀಡಿ ಮಾನವೀಯ ಮೌಲ್ಯದ ಸಂದೇಶವನ್ನು‌ ಸಮಾಜಕ್ಕೆ ನೀಡಿದ್ದಾರೆ.ಇದಲ್ಲದೇ ವರ್ಷಂಪ್ರತಿ ಜಿಲ್ಲಾ,ರಾಜ್ಯ,ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಪೂರ್ವಕವಾಗಿ ಸನ್ಮಾನ ಮತ್ತು ಯೋಧರಿಗೆ ಹೃದಯಸ್ಪರ್ಶಿ ಗೌರವಾರ್ಪಣೆ-ಮಾರುತಿ ಪುರಸ್ಕಾರವನ್ನು ನೀಡುತ್ತಾ ಬಂದಿದ್ದಾರೆ.ಜಿಲ್ಲಾಮಟ್ಟದ ಪ್ರತಿಷ್ಠಿತ ಮಾರುತಿ ಕ್ರಿಕೆಟ್ ಟ್ರೋಫಿ ಪ್ರತಿವರ್ಷವೂ ಆಯೋಜಿಸುತ್ತಿದ್ದು ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳಿಗೆ ಲಕ್ಷಾಂತರ ರೂಪಾಯಿಗಳನ್ನು ವಿನಿಯೋಗಿಸಿರುತ್ತಾರೆ.
*ಮಾರುತಿ ಟ್ರೋಫಿ-2023 ಪದಾಧಿಕಾರಿಗಳ ಸಮಗ್ರ ವಿವರ*
ಗೌರವಸಲಹೆಗಾರರಾಗಿ ಉಡುಪಿ-ದ.ಕ  ಮೀನುಗಾರಿಕಾ ಫೆಡರೇಶನ್(ನಿ)ಅಧ್ಯಕ್ಷರಾದ ಯಶ್ಪಾಲ್ ಸುವರ್ಣ,ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಕುಂದಾಪುರ,ಗೌರವಾಧ್ಯಕ್ಷ ಶರತ್ ಶೆಟ್ಟಿ ಪಡುಬಿದ್ರಿ,ಭರತ್ ಕುಮಾರ್ ಉಳ್ಳಾಲ, ಪ್ರವೀಣ್ ಪಿತ್ರೋಡಿ ಮತ್ತು ಪ್ರಶಾಂತ್ ಅಂಬಲಪಾಡಿ ಇವರನ್ನು ನೇಮಿಸಲಾಗಿದೆ.
ಮಾರುತಿ ಟ್ರೋಫಿ-2022 ರ ಗೌರವಾಧ್ಯಕ್ಷರಾಗಿ‌‌ ಸುಧೀರ್.ವಿ.ಅಮೀನ್,ಅಧ್ಯಕ್ಷರಾಗಿ ವರದರಾಜ್ ಬಂಗೇರ,ಉಪಾಧ್ಯಕ್ಷ ಪುಷ್ಪರಾಜ್ ಕೋಟ್ಯಾನ್,ಕಾರ್ಯದರ್ಶಿ ಕಪಿಲ್.ಎಸ್.ಬಂಗೇರ,ಕೋಶಾಧಿಕಾರಿ ಅನಿಲ್ ಚರಣ್,ಕ್ರೀಡಾ ಕಾರ್ಯದರ್ಶಿ ಮಹೇಶ್ ಸಾಲಿಯಾನ್,ಸಹ ಕೋಶಾಧಿಕಾರಿ ಪುನೀತ್ ಬಂಗೇರ ಮತ್ತು ಸಹ ಕಾರ್ಯದರ್ಶಿಯಾಗಿ ಪವನ್ ಬಂಗೇರ ಆಯ್ಕೆ ಮಾಡಲಾಗಿದೆ.
ಪಂದ್ಯಾಟದ ಸಂಚಾಲಕರಾಗಿ ಸಂದೀಪ್ ಪುತ್ರನ್,ದಿನೇಶ್ ಕರ್ಕೇರ,ಹರೀಶ್ ಪುತ್ರನ್,ಕಮಲಾಕ್ಷ ಬಂಗೇರ,ಅಶ್ವಿನ್ ಕೋಟ್ಯಾನ್ ಯಾನ್ ಮತ್ತು ಕಿರಣ್ ಪುತ್ರನ್ ಇವರನ್ನು ನೇಮಿಸಲಾಗಿದೆ.
ಪಂದ್ಯಾಟ ಸಮಿತಿಯ ಸದಸ್ಯರು-ರಘುವೀರ್ ಸಾಲ್ಯಾನ್,ಚನ್ನಪ್ಪ ಅಮೀನ್,ಲೋಕನಾಥ್ ಕೋಟ್ಯಾನ್,ಅಮರನಾಥ್ ಪುತ್ರನ್,ವಾಸುದೇವ್,ಅಜಿತ್ ಮುನ್ನ,ಪ್ರಕಾಶ್,ಸುಧೀರ್ ಸುವರ್ಣ,ಗಣರಾಜ್ ಕೋಟ್ಯಾನ್,ರೂಪೇಶ್ ಸಾಲ್ಯಾನ್,ಮನೋಹರ್,ಪ್ರಶಾಂತ್ ಬಂಗೇರ,ತಿಲಕ್ ಬಂಗೇರ,ಸುಧೀರ್ ಕೋಟ್ಯಾನ್,ವರುಣ್ ಪುತ್ರನ್ ಮತ್ತು ರಂಜಿತ್ ಪುತ್ರನ್.
ಪಂದ್ಯಾಟದ ನೇರ ಪ್ರಸಾರ M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯನಿರ್ವಹಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಸುಧೀರ್.ವಿ.ಅಮೀನ್-9731733141,ವರದರಾಜ್-7899752454 ಮತ್ತು ಮಹೇಶ್ 9632628562 ಈ ನಂಬರ್ ಗಳನ್ನು ಸಂಪರ್ಕಿಸಬಹುದು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

19 − 10 =

Latest news

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ?

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ? ಐಪಿಎಲ್‌ನ ಅತ್ಯಂತ ಜನಪ್ರಿಯ ಮತ್ತು ವ್ಯಾಪಾರಿಕವಾಗಿ ಯಶಸ್ವಿಯಾದ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..! ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ...

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ ಇತ್ತೀಚೆಗೆ ನಡೆದ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಕ್ರಿಕೆಟರ್ ಜೆಮೀಮಾ...

ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು

  ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು ಇತ್ತೀಚೆಗೆ ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ ಪ್ರತಿಭಾವಂತ ಬ್ಯಾಟ್ಸ್‌ವುಮನ್ ಜೆಮೀಮಾ ರೊಡ್ರಿಗಸ್ ಮಿಂಚಿ...
- Advertisement -spot_imgspot_img

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್ “ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್ –2” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಮೈದಾನದಲ್ಲಿ ಜರುಗಲಿದೆ. ‘ಟೀಮ್ ಬ್ರದರ್ಸ್ ವತಿಯಿಂದ ಆಯೋಜಿಸಲಾದ...

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ!

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ! ಹೊಳೆನರಸೀಪುರದಲ್ಲಿ ನಡೆದ ಜೈ ಭೀಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ,...

Must read

- Advertisement -spot_imgspot_img

You might also likeRELATED
Recommended to you