ಕಡು ಬಡವರಿಗೆ, ಕಡು ಬಡತನದ ಕುಟುಂಬಗಳಿಗೆ ತಮ್ಮ ಕೈಲಾದ ನೆರವುಗಳನ್ನು ನೀಡಬೇಕು ಅನ್ನುವ ನಿಟ್ಟಿನಲ್ಲಿ “ಮುಕ್ಕ ಮಿತ್ರ ಪಟ್ಣ ಮಾರುತಿ ಸ್ಪೋರ್ಟ್ಸ್ ಕ್ಲಬ್” ತಂಡ ಜಾತಿ ಮತಗಳ ಭೇದವಿಲ್ಲದೆ ಸಮಾಜದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ
ಆ ನಿಟ್ಟಿನಲ್ಲಿ ದೇಶಾದ್ಯಂತ ಕಾಡುತ್ತಿರುವ ಸಮಸ್ಯೆಯಾದ ಕೊರೋನ ವೈರಸ್ ಮಾರಣಾಂತಿಕ ರೋಗದ ಲಾಕ್ ಡೌನ್ ಆಗಿರುವ ಈ ಸಂದರ್ಭದಲ್ಲಿ ಇದಕ್ಕೆ ಪೂರಕವಾಗಿ ಆರ್ಥಿಕವಾಗಿ ಅಶಕ್ತರಾಗಿರುವ ಕುಟುಂಬಗಳಿಗೆ ಅಗತ್ಯ ಆಹಾರಗಳ ನೆರವು ನೀಡಲು ಮುಂದೆ ಬಂದಿದ್ದು ದಿನಾಂಕ 2-4-2020 ರಂದು ಮುಕ್ಕ ಮಿತ್ರ ಪಟ್ಣ ಪರಿಸರದ ವ್ಯಾಪ್ತಿಯಲ್ಲಿ 10 ಅಶಕ್ತ ಕುಟುಂಬಗಳನ್ನು ಗುರುತಿಸಿ ದೈನಂದಿನ ಬಳಕೆಗೆ ಅಗತ್ಯವಿರುವ ಸಾಮಗ್ರಿಗಳಾದ 25 ಕಿಲೋ ಅಕ್ಕಿ, ತೆಂಗಿನಕಾಯಿ, ಸಕ್ಕರೆ ಇತ್ಯಾದಿ ವಸ್ತುಗಳನ್ನು ಕ್ಲಬ್ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಕ್ಲಬ್ ನ ಸಲಹೆಗಾರರಾದ ಪುರುಷೋತ್ತಮ ದೇವಾಡಿಗ, ಸದಸ್ಯರಾದ ಯಶವಂತ ಕುಂದರ್, ಕಿಶೋರ್ ಕರ್ಕೇರ, ಶೈಲೇಶ್ ಸುವರ್ಣ, ಸಂದೀಪ್ ಕುಂದರ್, ರಾಜೇಶ್ ಕುಂದರ್, ಸತೀಶ್ ಕುಂದರ್, ಸತೀಶ್ ಕೋಟ್ಯಾನ್, ಸತೀಶ್ ಬಂಗೇರ, ನವೀನ್ ಶ್ರೀಯಾನ್ , ಅವಿನಾಶ್, ಪ್ರಶಾಂತ್ ಬಂಗೇರ ಉಪಸ್ಥಿತರಿದ್ದರು