ಇಂಫಾಲ್: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಭಾರ ಎತ್ತುವ ಸ್ಫರ್ದೆಯಲ್ಲಿ ಮೊದಲ ಬೆಳ್ಳಿ ಪದಕ ತಂದುಕೊಟ್ಟ ಸಾಯ್‌ಕೋಮ್ ಮೀರಾಬಾಯ್ ಚಾನುಗೆ ಮಣಿಪುರ ಸರ್ಕಾರ ಒಂದುಕೋಟಿ ರೂಪಾಯಿ ಬಹುಮಾನದ ಜೋತೆಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಘೋಷಿಸಿದೆ
ಮಣಿಪುರ ಮುಖ್ಯಮಂತ್ರಿ
ಎನ್ ಬಿರೆನ್ ಸಿಂಗ್ ಅವರು ಮೀರಾಬಾಯಿ ಅವರಿಗೆ ಪೊಲೀಸ್ ಇಲಾಖೆಯಲ್ಲಿ ಅಡಿಶನಲ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆ ನೀಡುವುದಾಗಿ ಘೋಷಿಸಿದ್ದಾರೆ.

ಇಂಪಾಲದಲ್ಲಿರುವ ಮುಖ್ಯಮಂತ್ರಿಗಳ ಕಾರ್ಯಾಲಯ ಈ ವಿಷಯವನ್ನು ಜುಲೈ 26 ರಂದು ಘೋಷಿಸಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಪದಕದ ಪಟ್ಟಿಯಲ್ಲಿ ಭಾರತದ ಹೆಸರು ದಾಖಲಾಗುವಂತೆ ಮಾಡಿದ್ದರು.

ಜುಲೈ 25 ರಂದು ವೀಡಿಯೋ ಸಂವಾದದಲ್ಲಿ ಮೀರಬಾಯಿ ಅವರೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಅವರು ನೀನಿನ್ನು ರೈಲ್ವೆ ಇಲಾಖೆಯಲ್ಲಿ ಟಿಕೆಟ್ ಚೆಕಿಂಗ್ ಇನ್‌ಸ್ಪೆಕ್ಟರ್ ಆಗಿರಬೇಕಾಗಿಲ್ಲ. ನಿನಗಾಗಿ ಒಳ್ಳೆಯ ಹುದ್ದೆ ನಮ್ಮ ಸರ್ಕಾರ ನೀಡಲಿದ್ದೇವೆ. ಇದಲ್ಲದೆ ನೀನು ಇಂಪಾಲಗೆ ಬರುತ್ತಲೇ ನಿನಗೆ ಒಂದು ಕೋಟಿ ರೂ. ನಗದು ಪುರಸ್ಕಾರ ಸಿಗಲಿದೆ,” ಎಂದು ಹೇಳಿ ಶುಭಾಶಯಗಳನ್ನು ತಿಳಿಸುವುದರ ಜೋತೆಗೆ ಸಂತೋಷ ಹಂಚಿಕೊಂಡಿದ್ಸರು.

ಮಣಿಪುರದವರೇ ಆದ ಖ್ಯಾತ ಬಾಕ್ಸರ್ ಮೇರಿ ಕೋಮ್ ಕೂಡ ದೇಶಕ್ಕೆ ಪದಕ ಗೆಲ್ಲಲಿದ್ದಾರೆ ಎಂದು ಬಿರೆನ್ ತಿಳಿಸಿದ್ದರು ಅದು ಕೈಗೂಡಲಿಲ್ಲ ಕ್ವಾರ್ಟರ್ ಫೈನಲ್ಸ್ ನಲ್ಲಿ ಮೇರಿ ಎಡವಿದರು.
ಮಹಿಳಾ ವೇಟ್ ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಚಾನು ಬೆಳ್ಳಿ ಗೆದ್ದರೆ ಚೀನಾದ ಹೌ ಝಿಹುಯ್ ಬಂಗಾರ ಜಯಿಸಿದ್ದರು. ಅಂದ್ಹಾಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದಿದ್ದೇ ಮೀರಬಾಯಿ ಚಾನು.
ನುಡಿದಂತೆ ನೆಡೆದ ಮಣಿಪುರದ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್
ಟೋಕಿಯೋ ಓಲಂಪಿಕ್ ನ ಭಾರ ಎತ್ತುವ ಸ್ಫರ್ದೆಯ ಮಹಿಳಾ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ *ಮೀರಾ ಬಾಯಿ* ಅವರಿಗೆ ಹೆಚ್ಚುವರಿ ಎಸ್‌ಪಿ ಹುದ್ದೆಗೆ ಹೊಸದಾಗಿ ನೇಮಕ ಮಾಡಿ ಮೀರಾಬಾಯಿ ಅವರನ್ನು ಮಣಿಪುರದ ಸಿಎಂ ಸ್ವತಃ ಹೆಚ್ಚುವರಿ ಎಸ್ಪಿಯವರ ಹೊಸ ಕಚೇರಿಗೆ ಕರೆದೊಯ್ಯುತ್ತಾರೆ. ಅಲ್ಲಿ ಮೀರಬಾಯಿ ಅವರನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಿ ಅಭಿನಂದಿಸುತ್ತಾರೆ ನಿಜಕ್ಕೂ ಇದು ಭಾರತದ ಹೆಮ್ಮೆಯ ಪುತ್ರಿಗೆ ಸಲ್ಲಬೇಕಾದ ಗೌರವವೆ. ಈ ಹಿಂದೆ ರೈಲ್ವೆ ಇಲಾಖೆಯಲ್ಲಿ ಚಕ್ಕಿಂಗ್ ಇನ್ಸ್ಪೆಕ್ಟರ್ ಅಗಿ ಕರ್ತವ್ಯದಲ್ಲಿದ್ದರು ಮೀರಾಬಾಯಿ.
ಕ್ರಿಕೆಟ್ ಹೊರತುಪಡಿಸಿ ಇತರ ಕ್ರೀಡೆಗಳಿಗೆ ಅಗತ್ಯವಾದ ಪ್ರೋತ್ಸಾಹ ಇದೆ ಎನ್ನುವುದನ್ನು ಯಾರು ಮರೆಯದಿರಲಿ ಕ್ರಿಕೆಟ್ ನಲ್ಲಿ ಶತಕಗಳನ್ನು ಹೊಡೆಯಬಹುದು ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವುದು ಸುಲಭದ ಮಾತಲ್ಲ