ಸೌದಿ ಅರೇಬಿಯಾದ ಪ್ರತಿಷ್ಠಿತ ಸಂಸ್ಥೆ ಅಲ್ ಬಿಲಾದಿ ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ನವೆಂಬರ್ 29,30 ಮತ್ತು ಡಿಸೆಂಬರ್ 1 ರಂದು ಜುಬೈಲ್ ನ ಅಲ್ ಫಲಾಹ್ ಮೈದಾನದಲ್ಲಿ ಅದ್ಧೂರಿಯ ಹೊನಲು ಬೆಳಕಿನ ಕ್ರಿಕೆಟ್ ಹಬ್ಬ ಮಂಗಳೂರು ಪ್ರೀಮಿಯರ್ ಲೀಗ್-2023 (M.P.L ಸೀಸನ್ 1)ಆಯೋಜಿಸಲಾಗಿದೆ.
ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು SAR 3,000 ಪ್ರವೇಶ ಶುಲ್ಕ ಪಾವತಿಸಬೇಕಾಗಿದ್ದು,ಪ್ರಥಮ ಪ್ರಶಸ್ತಿ ವಿಜೇತ ತಂಡ SAR 25,000 ದ್ವಿತೀಯ ಸ್ಥಾನಿ SAR 12,500 ನಗದು ಬಹುಮಾನ ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ಟೂರ್ನಮೆಂಟ್ ನ ಮೆರುಗನ್ನು ಹೆಚ್ಚಿಸಲು ಮನೋರಂಜನಾ ಕಾರ್ಯಕ್ರಮ ಮತ್ತು ಕರಾವಳಿ ಸಂಸ್ಕೃತಿ ಮತ್ತು ವಿಶೇಷವಾದ ಮಂಗಳೂರು ಖಾದ್ಯಗಳ ಮೇಳ ಹಮ್ಮಿಕೊಂಡಿದ್ದಾರೆ.
ಕಿಂಗ್ ಸ್ಪೋರ್ಟ್ಸ್ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದ್ದು ಹೆಚ್ಚಿನ ವಿವರಗಳಿಗಾಗಿ
+966597991860 ಅಥವಾ +966597647960 ಈ ನಂಬರ್ ಗಳನ್ನು ಸಂಪರ್ಕಿಸಬಹುದು.